ದಿ ಬೆಸ್ಟ್ ಅಂದರೆ ಇದೇನಾ…. ಪುಷ್ಪ ನಕ್ಷತ್ರ ರಹಸ್ಯ ಗಳೇನು ನೋಡಿ!

ಬಂಗಾರ ಅಥವಾ ಚಿನ್ನ ಎನ್ನುವುದು ಅತ್ಯಂತ ಬೆಲೆ ಬಾಳುವ ಲೋಹ. ಚಿನ್ನದ ಆಭರಣಗಳು ಎಷ್ಟಿವೆ? ಎನ್ನುವುದರ ಆಧಾರದ ಮೇಲೆಯೇ ಎಷ್ಟು ಶ್ರೀಮಂತರು? ಆರ್ಥಿಕವಾಗಿ ಎಷ್ಟು ಪ್ರಭಲರಾಗಿದ್ದಾರೆ? ಎನ್ನುವುದನ್ನು ತಿಳಿಸುತ್ತದೆ. ಚಿನ್ನವನ್ನು ಲಕ್ಷ್ಮಿ ದೇವಿ ಎಂದು ಆರಾಧಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಚಿನ್ನವನ್ನು ತರುವಾಗ ಅಥವಾ ಖರೀದಿಸುವಾಗ ಶುಭ ದಿನವನ್ನು ಪರಿಶೀಲಿಸಬೇಕು. ಶುಭ ದಿನ ಮತ್ತು ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಿದರೆ ಭವಿಷ್ಯದಲ್ಲಿ ಹೆಚ್ಚೆಚ್ಚು ಚಿನ್ನ ಖರೀದಿಸುತ್ತಾರೆ. ಮನೆಯಲ್ಲಿ ಸದಾ ಐಶ್ವರ್ಯ ತುಂಬಿ ತುಳುಕುವುದು ಎಂದು ಹೇಳಲಾಗುತ್ತದೆ.

ಶುಭ ಮುಹೂರ್ತದಲ್ಲಿ ಚಿನ್ನ ಖರೀದಿಯ ಮಹತ್ವ–ಬಹುತೇಕ ಜನರು ಮನೆಯಲ್ಲಿ ವಿವಾಹ ಅಥವಾ ಹಬ್ಬ ಹರಿದಿನಗಳು ಇದ್ದಾಗ ಚಿನ್ನ ಖರೀದಿಸುತ್ತಾರೆ. ಚಿನ್ನವನ್ನು ಖರೀದಿಸಲು ಕೆಲವರು ದಿನ ನೋಡುವುದಿಲ್ಲ ಮುಹೂರ್ತ ನೋಡಿ ಚಿನ್ನ ಖರೀದಿಸುತ್ತಾರೆ. ಕೆಲವು ಪುರೋಹಿತರು ಸಹ ಚಿನ್ನ ಖರೀದಿಗೆ ಒಳ್ಳೆಯ ಮುಹೂರ್ತವನ್ನು ಶಿಫಾರಸ್ಸು ಮಾಡುವರು. ಏಕೆಂದರೆ ಚಿನ್ನ ಕೇವಲ ಲೋಹ ಎಂದು ಪರಿಗಣಿಸುವುದಿಲ್ಲ. ಅದು ದೈವ ಸ್ವರೂಪ, ಹೂಡಿಗೆ ಯೋಗ್ಯವಾದುದ್ದು, ಶುಭ ಸಂಕೇತ ಎಂದು ಸಹ ಪರಿಗಣಿಸಲಾಗುತ್ತದೆ. ಶುಭ ಸಮಯದಲ್ಲಿ ಚಿನ್ನ ಖರೀದಿಸಿದರೆ ಸಂಪತ್ತು ಹೆಚ್ಚುವುದು ಎನ್ನುವ ನಂಬಿಕೆಯೂ ಇದೆ.

ನೀವು ಈ ವರ್ಷ ಚಿನ್ನ ಖರೀದಿಸುವ ಹವಣಿಕೆಯಲ್ಲಿ ಇದ್ದರೆ ಕೆಲವು ಶುಭ ಮುಹೂರ್ತಗಳನ್ನು ಪರಿಗಣಿಸಬಹುದು.
ನವ ರಾತ್ರಿಯ ದಿನ 7ಅಕ್ಟೋಬರ್ 2021 ಮತ್ತು 15 ಅಕ್ಟೋಬರ್ 2021,ಕರ್ವಾ ಚೌತ್ 24 ಅಕ್ಟೋಬರ್ 2021, ಧಂತೆರಾಸ್ 2 ನವಂಬರ್ 2021 ರ ದಿನದಂದು ಚಿನ್ನ ಖರೀದಿಸಲು ಪ್ರಶಸ್ತವಾದ ದಿನ. ಈ ಹಬ್ಬಗಳ ಸಮಯದಲ್ಲಿ ಚಿನ್ನದ ಬೆಲೆಯೂ ಸಹ ಸ್ವಲ್ಪ ಏರಿಕೆಯನ್ನು ಕಾಣುತವೆ. ನವ ರಾತ್ರಿಯ 9 ದಿನಗಳು ಚಿನ್ನ ಖರೀದಿಗೆ ಯೋಗ್ಯವಾದ ಸಿನಗಳಾಗಿರುತ್ತವೆ. ಈ ಹಬ್ಬಗಳು ದೇವಿಗೆ ಮೀಸಲಾಗಿವೆ. ಆ ದಿನದಂದು ಚಿನ್ನ ಖರೀದಿಸಿ, ಪೂಜಿಸುವುದರಿಂದ ಸಮೃದ್ಧಿಯಾಗುವುದು. ಜೊತೆಗೆ ದೇವಿಯ ಆಶೀರ್ವಾದ ದೊರೆಯುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನ ಖರೀದಿಸಲು ಸೋಮವಾರ, ಮಂಗಳವಾರ, ಗುರುವಾರ ಮತ್ತು ಭಾನುವಾರ ಅತ್ಯಂತ ಪ್ರಶಸ್ತವಾದ ದಿನ. ಗುರುವಾರ ಪುಷ್ಯ ನಕ್ಷತ್ರ ಬಂದಿದ್ದರೆ ಚಿನ್ನ ಖರೀದಿಗೆ ಅತ್ಯಂತ ಪ್ರಶಸ್ತವಾದ ದಿನ ಎಂದು ಪರಿಗಣಿಸಲಾಗುವುದು. ಮಂಗಳವಾರ ವಿವಿಧ ಉತ್ಪನ್ನಗಳನ್ನು ಸಹ ಖರೀದಿಸಲು ಶುಭ ದಿನವಾಗಿರುತ್ತದೆ.

ಅಮಾವಾಸ್ಯೆಯ ದಿನ ಚಿನ್ನ ಖರೀದಿಸಬಹುದೇ–ಅಮವಾಸ್ಯೆಯ ದಿನ ಚಿನ್ನ ಖರೀದಿಸಲು ಯೋಗ್ಯವಾದ ದಿನವಲ್ಲ. ಅಮವಾಸ್ಯೆಯ ದಿನ ಸಕಾರಾತ್ಮಕ ಶಕ್ತಿಗಳಿಗಿಂತ ನಕಾರಾತ್ಮಕ ಶಕ್ತಿಯೇ ಹೆಚ್ಚಾಗಿರುತ್ತದೆ. ಹಾಗಾಗಿ ಅಂತಹ ದಿನದಂದು ಯಾವ ವಸ್ತುವನ್ನು ಸಹ ಖರೀದಿಸಬಾರದು. ಆ ದಿನದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ತುಂಬಾ ಚೆನ್ನಾಗಿ ಖರೀದಿಸಬಹುದೇ–ಸಾಮಾನ್ಯವಾಗಿ ಜನರು ಶನಿವಾರವನ್ನು ಅದೃಷ್ಟದ ದಿನ ಎಂದು ಪರಿಗಣಿಸುವುದಿಲ್ಲ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಶನಿವಾರವೂ ಸಹ ಪ್ರಶಸ್ತ ದಿನವೇ ಆಗಿರುತ್ತದೆ. ಆದರೆ ಆ ದಿನ ಒಳ್ಳೆಯ ಮುಹೂರ್ತ, ನಕ್ಷತ್ರ, ತಿಥಿ, ಕರ್ಣ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಶೀಲಿಸಬೇಕು. ಅವೆಲ್ಲವೂ ಶುಭಕರವಾಗಿದ್ದರೆ ಚಿನ್ನ ಖರೀದಿಸಬಹುದು.

ಏಕದಶಿಯ ದಿನದಂದು ಚಿನ್ನ ಖರೀದಿಸಬಹುದೇ–ಹೌದು, ಏಕಾದಶಿಯು ಧಾರ್ಮಿಕವಾಗಿ ಶುಭ ದಿನ. ಈ ದಿನದಂದು ಚಿನ್ನವನ್ನು ಖರೀದಿಸಬಹುದು. ಆದರೆ ಆ ದಿನದ ಸರಿಯಾದ ಮುಹೂರ್ತ ವನ್ನು ಪರಿಶೀಲಿಸಿ ಖರೀದಿಸಬೇಕು. ಅದಕ್ಕಾಗಿ ನೀವು ಸೂಕ್ತ ಜ್ಯೋತಿಷಿಗಳ ಸಲಹೆ ಪಡೆದುಕೊಳ್ಳುವುದು ಉತ್ತಮ.

ಹುಣ್ಣಿಮೆಯ ದಿನ ಚಿನ್ನ ಖರೀದಿಸಬಹುದೇ–ಪೂರ್ಣಿಮೆಯು ಸಹ ಉತ್ತಮವಾದ ದಿನ. ಪೂರ್ಣಿಮೆಯ ದಿನ ಚಿನ್ನ ಖರೀದಿಸುವುದು ಅಥವಾ ಹೊಸ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದು ಮಾಡಬಹುದು. ದೈವ ಶಕ್ತಿಯ ಆಶೀರ್ವಾದ ದೊರೆಯುವುದು.

ಶುಕ್ರವಾರ ಚಿನ್ನ ಖರೀದಿಸಬಹುದೇ–ಹೊಸ ವಸ್ತು ಹಾಗೂ ಆಸ್ತಿಯನ್ನು ಖರೀದಿಸಲು ಶುಕ್ರವಾರ ಪ್ರಶಸ್ತವಾದ ದಿನ. ಚಿನ್ನ ಖರೀದಿಗೂ ಸಹ ಉತ್ತಮವಾದ ದಿನವಾಗಿರುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದು.

ಚಿನ್ನ ಖರೀದಿಗೆ ಯಾವ ನಕ್ಷತ್ರ ಮತ್ತು ರಾಶಿ ಒಳ್ಳೆಯದು?–ಚಿನ್ನ ಖರೀದಿಗೆ ಪುಷ್ಯ ನಕ್ಷತ್ರ ಅತ್ಯುತ್ತಮವಾದುದ್ದು. ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರ ಇರುವ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟ ಮತ್ತು ಸಮೃದ್ಧಿ ವೃದ್ಧಿಯಾಗುವುದು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿ ಇರುವಾಗ ಚಿನ್ನ ಖರೀದಿಸುವುದು ತುಂಬಾ ಒಳ್ಳೆಯದು. ವೃಶ್ಚಿಕ ಮತ್ತು ಮೀನ ರಾಶಿ ಇರುವಾಗ ಚಿನ್ನ ಖರೀದಿಸುವುದು ಮಿಶ್ರ ಫಲ ನೀಡುವುದು.

ಚಿನ್ನ ಖರೀದಿಸಲು ಶುಭ ಸಮಯ ಯಾವುದು–ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಕಾಲದಲ್ಲಿ ಚಿನ್ನವನ್ನು ಖರೀದಿಸಬಾರದು. ನಕ್ಷತ್ರ, ಯೋಗ, ಕರಣ ಇವೆಲ್ಲವು ಉತ್ತಮವಾಗಿರುವ ದಿನದಂದು ಚಿನ್ನ ಖರೀದಿಸಬೇಕು. ಜ್ಯೋತಿಷಿಗಳಲ್ಲಿ ಸೂಕ್ತವಾದ ದಿನ ಯಾವುದು? ಎನ್ನುವುದನ್ನು ಪರಿಶೀಲಿಸಿ. ನಂತರ ಚಿನ್ನ ಖರೀದಿಸುವುದು ಉತ್ತಮ.

https://youtu.be/18KeLwdWrfU

Leave a Comment