ಬಟ್ಟೆಗೆ ತಾಗಿರುವ ಎಣ್ಣೆಯ ಕಲೆಯನ್ನು ತೆಗೆಯೋದು ಎಷ್ಟೊಂದು ಸುಲಭ!

0 3,330

ಸಾಮಾನ್ಯವಾಗಿ ನಾವು ಬಟ್ಟೆಗಳನ್ನು ಕಲೆಗಳು ಉಂಟಾದ ಸಂದರ್ಭದಲ್ಲಿ ಗಾಢವಾದ ಡಿಟರ್ಜೆಂಟ್ ಮತ್ತು ಬ್ಲೀಚಿಂಗ್ ಏಜೆಂಟ್ ಹಾಕಿ ಸ್ವಚ್ಛ ಮಾಡಲು ಮುಂದಾಗುತ್ತೇವೆ. ಇದರಿಂದ ನಮಗೆ ಆರೋಗ್ಯಕ್ಕೆ ತೊಂದರೆ ಉಂಟಾಗುವುದು ಖಚಿತ. ಬಟ್ಟೆಗಳು ಕೂಡ ಹಾಳಾಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅದರಲ್ಲೂ ಬ್ಲೀಚಿಂಗ್ ಏಜೆಂಟ್ ನಮ್ಮ ಚರ್ಮವನ್ನು ಹಾನಿಮಾಡುತ್ತದೆ. ಗಾಢವಾದ ಪ್ರಭಾವ ಹೊಂದಿರುವ ಡಿಟರ್ಜೆಂಟ್ ಸೋಪ್ ಕೂಡ ನಮ್ಮ ದೇಹದ ಚರ್ಮದ ಮೇಲೆ ಇದೇ ರೀತಿಯ ಕೆಟ್ಟ ಪ್ರಭಾವ ಬೀರುತ್ತದೆ ಮತ್ತು ಚರ್ಮ ಸಿಪ್ಪೆ ಸುಲಿದುಕೊಳ್ಳುವಂತೆ ಮಾಡಿ ಅಲರ್ಜಿ ಉಂಟಾಗುವ ಹಾಗೆ ಮಾಡುವ ಸಾಧ್ಯತೆ ಇರುತ್ತದೆ.

ಆದರೆ ಇಂತಹ ವಿಧಾನಗಳಿಗೆ ನೀವು ಗುಡ್ ಬಾಯ್ ಹೇಳಿ ನೈಸರ್ಗಿಕವಾಗಿ ಬಹಳ ಸುಲಭ ವಾದ ಕೆಲವೊಂದು ಮನೆ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಬಟ್ಟೆಯ ಮೇಲೆ ಉಂಟಾದ ಎಣ್ಣೆ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಿಕೊಳ್ಳಬಹುದು….

ಟಾಲ್ಕಮ್ ಪೌಡರ್ ಬಳಸುವುದು–ಬಟ್ಟೆಯ ಮೇಲೆ ಉಂಟಾದ ಎಣ್ಣೆಯ ಕಲೆಗಳನ್ನು ನಿವಾರಣೆ ಮಾಡುವಲ್ಲಿ ಈ ಬಿಳಿ ಬಣ್ಣದ ಪೌಡರ್ ತುಂಬಾ ಪ್ರಯೋಜನಕಾರಿ. ಎಣ್ಣೆಯ ಕಲೆಗಳನ್ನು ಇದು ತೆಗೆದು ಹಾಕುತ್ತದೆ. ಇದನ್ನು ಸೂಕ್ಷ್ಮವಾದ ಬಣ್ಣ ಹೊಂದಿರುವ ಬಟ್ಟೆಗಳ ಮೇಲೂ ಸಹ ಪ್ರಯೋಗ ಮಾಡಬಹುದು. ಇದರಿಂದ ಬಟ್ಟೆಗಳು ಮಾಸುವುದಿಲ್ಲ.

ಎಣ್ಣೆಯ ಕಲೆ ಆಗಿರುವ ಬಟ್ಟೆಯ ಮೇಲೆ ಪೌಡರ್ ಹಾಕಿ ಬೆರಳುಗಳಿಂದ ನಯವಾಗಿ ಪ್ರೆಸ್ ಮಾಡ ಬೇಕು. ಎಣ್ಣೆಯ ಕಲೆಯಾಗಿರುವ ಜಾಗದಲ್ಲಿ ಪೌಡರ್ ಬಟ್ಟೆಗೆ ಮೆತ್ತಿಕೊಳ್ಳುತ್ತದೆ ಉಳಿದ ಜಾಗದಲ್ಲಿ ಪೌಡರ್ ತರಹ ಹಾಗೆ ಇರುತ್ತದೆ. 30 ನಿಮಿಷಗಳು ಇದನ್ನು ಹಾಗೇ ಬಿಟ್ಟು ಅನಂತರ ಸಹಜವಾಗಿ ಬಟ್ಟೆಯನ್ನು ತೊಳೆಯಿರಿ. ಒಂದು ವೇಳೆ ಎಣ್ಣೆಯ ಕಲೆ ಜಾಸ್ತಿ ಇದ್ದರೆ, ಮತ್ತೊಮ್ಮೆ ಅದೇ ಜಾಗದಲ್ಲಿ ಪೌಡರ್ ಹಚ್ಚಿ.

ವಿನೆಗರ್ ಬಳಸಿ–ವಿನೆಗರ್ ಸಹ ಬಟ್ಟೆಯ ಮೇಲಿನ ಎಣ್ಣೆಯ ಕಲೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿ ಸುತ್ತದೆ. ಇದು ಎಣ್ಣೆಯಿಂದ ವಾಸನೆ ಬರುವ ಬಟ್ಟೆಗೆ ಹೊಸ ಸುಗಂಧ ನೀಡುತ್ತದೆ. ಇದಕ್ಕಾಗಿ ನೀವು ಎಣ್ಣೆಯ ಕಲೆಯಾಗಿರುವ ಬಟ್ಟೆಯ ಭಾಗವನ್ನು ವಿನೆಗರ್ ಮತ್ತು ಬಿಸಿನೀರಿನ ಸಮಪ್ರಮಾಣದ ಮಿಶ್ರಣದಲ್ಲಿ ಸ್ವಲ್ಪ ಕಾಲ ನೆನೆಸಬೇಕು.

ಇದರಿಂದ ಬಟ್ಟೆ ಮಾಸಿ ಹೋಗುವುದು ತಪ್ಪುತ್ತದೆ. ನೆನೆಸಿದ ನಂತರ ಮತ್ತೊಮ್ಮೆ ಸ್ವಲ್ಪ ವಿನೆಗರ್ ಹಾಕಿ ಉಜ್ಜಬೇಕು. ಇದರ ನಂತರದಲ್ಲಿ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುವುದನ್ನು ಮಾತ್ರ ಮರೆಯಬಾರದು.

ನಿಂಬೆಹಣ್ಣಿನ ಪ್ರಯೋಗ–ಕಲೆಗಳಿಗೆ ನಿಂಬೆ ಹಣ್ಣಿನ ಹುಳಿ ಒಂದು ರೀತಿಯ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಇದ್ದ ಹಾಗೆ. ನಿಂಬೆಹಣ್ಣಿನ ರಸ ಬಟ್ಟೆಗಳಿಂದ ಎಣ್ಣೆಯ ಕಲೆಯನ್ನು ಮತ್ತು ಇನ್ನಿತರ ಗಾಢವಾದ ಕಲೆಗಳನ್ನು ಹೋಗಲಾಡಿಸುತ್ತದೆ.

ಇದಕ್ಕಾಗಿ ಸ್ವಲ್ಪ ನಿಂಬೆಹಣ್ಣನ್ನು ಕತ್ತರಿಸಿ ಅದರಿಂದ ರಸ ತೆಗೆದು ಎಣ್ಣೆಯ ಕಲೆಯಾಗಿರುವ ಬಟ್ಟೆಯ ಭಾಗಕ್ಕೆ ಅನ್ವಯಿಸಬೇಕು. ಸ್ವಲ್ಪ ಹೊತ್ತು ಹಾಗೆ ಬಿಟ್ಟು ಆನಂತರ ಸಾಧಾರಣವಾಗಿ ಬಟ್ಟೆ ತೊಳೆಯುವ ಹಾಗೆ ತೊಳೆಯಬೇಕು.

ಬಿಸಿ ನೀರಿನ ಬಳಕೆ–ನಮಗೆಲ್ಲ ಗೊತ್ತಿರುವ ಹಾಗೆ ಎಣ್ಣೆ ಮತ್ತು ನೀರು ಎಂದಿಗೂ ಸೇರುವುದಿಲ್ಲ. ಆದರೆ ಬಿಸಿ ನೀರು ಬಟ್ಟೆಗಳ ಮೇಲಿನ ಎಣ್ಣೆಯ ಕಲೆಯನ್ನು ಹೋಗಲಾಡಿಸುವಲ್ಲಿ ಕೆಲಸ ಮಾಡುತ್ತದೆ ಮತ್ತು ನೀವು ಇದಕ್ಕಾಗಿ ಕಲೆಯಾಗಿರುವ ಹೊಟ್ಟೆಯ ಭಾಗದ ಮೇಲೆ ನೇರವಾಗಿ ಕುದಿಯುವ ನೀರನ್ನು ಸುರಿಯಬೇಕು.

ಈಗ ನಿಮ್ಮ ಹಳೆಯ ಟೂತ್ ಬ್ರಷ್ ತೆಗೆದುಕೊಂಡು ಚೆನ್ನಾಗಿ ಬಟ್ಟೆಯ ಎರಡು ಕಡೆ ಉಜ್ಜಬೇಕು. ಇದನ್ನು ಈಗ ಸಾಧಾರಣ ಡಿಟರ್ಜೆಂಟ್ ನಿಂದ ಸ್ವಚ್ಛ ಮಾಡಬಹುದು.

ಬೇಕಿಂಗ್ ಸೋಡಾ ಬಳಕೆ ಮಾಡಿ–ಬಟ್ಟೆಯ ಮೇಲಿನ ಕಲೆಗಳನ್ನು ಹೋಗಲಾಡಿಸುವಲ್ಲಿ ಅದರಲ್ಲೂ ವಿಶೇಷವಾಗಿ ಎಣ್ಣೆಯ ಕಲೆಗಳನ್ನು ತೆಗೆದು ಹಾಕುವಲ್ಲಿ ಬೇಕಿಂಗ್ ಸೋಡಾ ಕೆಲಸ ಮಾಡುತ್ತದೆ.

ಬಹಳ ಬೇಗನೆ ಬಟ್ಟೆಯ ಮೇಲಿನ ಎಣ್ಣೆಯನ್ನು ಹೀರಿಕೊಂಡು ಬೇಕಿಂಗ್ ಸೋಡಾ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಈ ಸಂದರ್ಭದಲ್ಲಿ ಮತ್ತೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಟ್ಟು ಯಾವಾಗ ಬಣ್ಣ ಬದಲಾಗುವುದಿಲ್ಲ ಆ ಸಂದರ್ಭದಲ್ಲಿ ಬಟ್ಟೆಯನ್ನು ಚೆನ್ನಾಗಿ ತೊಳೆಯ ಬೇಕು.

Leave A Reply

Your email address will not be published.