ಮನೆಯಲ್ಲಿ ಲಕ್ಷ್ಮಿ ನೆಲೆಸಲು ಈ ಎರಡು ವಸ್ತುಗಳಿಂದ ಧೂಪ ಹಾಕುವ ವಿಧಾನ! ಮನೆ ಮೇಲಿನ ಕೆಟ್ಟ ದೃಷ್ಟಿಗೆ ಪರಿಹಾರ

ಆಷಾಡ ಮಾಸದ ಕೊನೆಯ ಶುಕ್ರವಾರ ಹಾಗು ನಂತರ ಭೀಮನ ಅಮಾವಾಸ್ಯೆ ಅಧಿಕ ಮಾಸದ ಶ್ರಾವಣ ಮಾಸ ಆರಂಭ ಆಗುತ್ತದೆ. ಇಂತಹ ಸಮಯದಲ್ಲಿ ಮನೆಗೆ ವಿಶೇಷವಾಗಿ ಧೂಪವನ್ನು ಹಾಕುವುದರಿಂದ ತುಂಬಾನೇ ಒಳ್ಳೆಯದು ಆಗುತ್ತದೆ. ಅಮಾವಾಸ್ಯೆ ಬಿಟ್ಟು ಪ್ರತಿ ಮಂಗಳವಾರ ಶುಕ್ರವಾರ ದಿನ ಕೂಡ ಇದನ್ನು ಮಾಡಿದರೆ ತುಂಬಾ ಒಳ್ಳೆಯದು. ವಿಶೇಷವಾಗಿ ಲಕ್ಷ್ಮಿ ಪೂಜೆ ಮಾಡಿದ ದಿನ ಧೂಪವನ್ನು ಹಾಕಬೇಕಾಗುತ್ತದೆ. ಈ ರೀತಿ ಹಾಕುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಜಾಸ್ತಿ ಆಗುತ್ತದೆ.

ಧೂಪವನ್ನು ತೆಗೆದುಕೊಂಡು ಬಂದು ಅದಕ್ಕೆ ಕರ್ಪೂರವನ್ನು ಹಾಕಿ ಹಚ್ಚಿ. ಇದನ್ನು ನೀವು ಸಂಜೆ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿ. ನಂತರ ಇದಕ್ಕೆ ಮೂರು ಲವಂಗ ಹಾಗು ಪಂಚ್ಚ ಕರ್ಪೂರವನ್ನು ಹಾಕಿ ಧೂಪವನ್ನು ಬೆಳಗಬೇಕು . ಇವೆರಡು ವಸ್ತು ಲಕ್ಷ್ಮಿಗೆ ತುಂಬಾನೇ ಪ್ರಿಯವಾದದ್ದು.

ಇನ್ನು ಪ್ರತಿ ಶುಕ್ರವಾರ ದೀಪದ ಒಳಗೆ ಒಂದು ಅಥವಾ ಎರಡು ಲವಂಗವನ್ನು ಹಾಕಿ ದೀಪರಾಧನೆ ಮಾಡಿದರೆ ನಿಮ್ಮ ಮನೆಗೆ ಆಗಿರುವ ಹಣಕಾಸಿನ ಸಮಸ್ಸೆ ಆಗಿರಬಹುದು ಅಥವಾ ಕೊಟ್ಟ ದುಡ್ಡು ವಾಪಾಸ್ ಬರದೇ ಇದ್ದರೆ ಈ ರೀತಿ ದೀಪರಾಧನೇ ಮಾಡಿ. ಧೂಪವನ್ನು ಹಾಕಿ ದೇವರ ಮನೆಯಿಂದ ಪ್ರಾರಂಭ ಮಾಡಿ ಎಲ್ಲಾ ಮೂಲೆಗು ಧೂಪವನ್ನು ಬೆಳಗಬೇಕು.

Leave A Reply

Your email address will not be published.