ಪೂಜೆ ಮಾಡಬೇಕಾದರೆ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಪೂಜೆ ಮಾಡಿಯೂ ವ್ಯರ್ಥ

ಹೆಂಗಸರು ಅಥವಾ ಹೆಣ್ಣು ಮಕ್ಕಳು ಕೆಂಪು ಬಟ್ಟೆಯನ್ನು ಧರಿಸಿಕೊಂಡು ಪೂಜೆಯನ್ನು ಮಾಡಬಾರದು, ಕೆಂಪು ಬಳೆಯನ್ನು ಧರಿಸಿಕೊಂಡು ದೇವರಿಗೆ ಪೂಜೆಯನ್ನು ಮಾಡಬಾರದು, ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಹೆಂಗಸರು ಕೂದಲನ್ನು ಕಟ್ಟಬಾರದು. ಇದಾದ ನಂತರ ದೇವರಿಗೆ ದೀಪವನ್ನು ಹಚ್ಚಿದ ಮೇಲೆ ಯಾವುದೇ ಕಾರಣಕ್ಕೂ ದೇವರ ಮುಂದೆ ಕುಳಿತುಕೊಂಡು ಅಳಬಾರದು. ಈ ರೀತಿ ಮಾಡಿದರೆ ಕೇವಲ ಸಂಕಷ್ಟಗಳು ಎದುರಾಗುತ್ತದೆಯೇ ಹೊರತು ಯಾವುದೇ ರೀತಿಯಲ್ಲೂ ಮನೆಗೆ ಒಳ್ಳೆಯದಾಗುವುದಿಲ್ಲ.

ತಾಯಿಯಾಗಲಿ, ತಂಗಿಯಾಗಲಿ, ಮಡದಿಯಾಗಲಿ ಅಥವಾ ಹೆಂಗಸರಾಗಲಿ, ಯಾರು ಕೂಡ ಕೆಂಪು ಬಟ್ಟೆಯನ್ನು ಧರಿಸಿಕೊಂಡು ಪೂಜೆಯನ್ನು ಮಾಡಬಾರದು. ಮನೆಗೆ ಒಳ್ಳೆಯದಾಗಬೇಕೆಂದರೆ ಬಿಡುವಿನ ಸಮಯದಲ್ಲಿ ದೇವಿಯ ಮುಂದೆ ಕುಳಿತುಕೊಂಡು ಲಲಿತಾ ಸಹಸ್ರನಾಮವನ್ನು ಓದಬೇಕು. ಈ ರೀತಿ ಸಹಸ್ರ ನಾಮವನ್ನು ಓದುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಯೋಚನೆಗಳನ್ನು ದೂರ ಮಾಡುತ್ತದೆ ಹಾಗೂ ಒಳ್ಳೆಯ ಬುದ್ಧಿಯನ್ನು ಕೊಡುತ್ತದೆ.

ಇದರ ಜೊತೆಗೆ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುವಂತೆ ಮಾಡುತ್ತದೆ. ಆದ್ದರಿಂದ ಮನೆಯಲ್ಲಿರುವ ಹೆಂಗಸರು ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಕೆಂಪು ವಸ್ತ್ರವನ್ನು ಧರಿಸಿಕೊಂಡು ಪೂಜೆ ಮಾಡಬೇಡಿ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎಂದರೆ ತಪ್ಪಾಗಲಾರದು.

ಶುಭ್ರತೆ ಇರುವೆಡೆ ದೇವರು ನೆಲೆಸಿರುತ್ತಾನೆ ದೇವರು ನೆಲೆಸಿರುವ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹಾಗಾಗಿ ಎಲ್ಲೆಂದರೆ ಅಲ್ಲಿ ದೇವರ ವಸ್ತುಗಳನ್ನು ಇಡುವುದು ಮಾಡಬೇಡಿ ನೇರವಾಗಿ ದೇವರ ಸಾಮಗ್ರಿಗಳನ್ನು ನೆಲದ ಮೇಲೆ ಇರಿಸಬೇಡಿ ಅದರಲ್ಲಿ ಮೊದಲನೆಯದು ದೇವರಿಗಾಗಿ ಬಳಸುವ ದೀಪಗಳಾಗಲಿ ಬೆಳಗುವ ಆರತಿ ತಟ್ಟೆ ಯಾಗಲಿ ಇವುಗಳನ್ನು ನೇರವಾಗಿ ನೆಲದ ಮೇಲೆ ಎನಿಸುವುದರ ಬದಲು ಮಣೆಯ ಮೇಲೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಅಥವಾ ಬಿಳಿ ವಸ್ತ್ರದ ಮೇಲೆ ಇರಿಸಬೇಕು ಹಾಗೂ ದೇವರಿಗಾಗಿ ಅರ್ಪಿಸುವ ಬಂಗಾರವನ್ನು ನೇರವಾಗಿ ನೆಲದ ಮೇಲೆ ಇರಿಸಬಾರದು ಅದನ್ನು ಕೆಂಪು ವಸ್ತ್ರದಲ್ಲಿ ಇರಿಸಬೇಕು.

ದೀಪಗಳನ್ನು ಸಹ ನೇರವಾಗಿ ನೆಲದ ಮೇಲೆ ಇರಿಸಬಾರದು ಮರದ ಫಲಕಗಳ ಮೇಲೆ ಆಗಲಿ ಅಥವಾ ಶುಭ್ರವಾದ ತಟ್ಟೆಯ ಮೇಲೆ ಆಗಲೇ ದೀಪಾಲೆ ಕಂಬ ವನ್ನು ಇರಿಸಿ ದೀಪ್ ದೇವರಿಗೆ ಆರಾಧನೆ ಮಾಡಬೇಕು. ಮಂತ್ರವನ್ನು ಏನನ್ನು ಯೋಚಿಸುತ್ತಾ ಪಠಣೆ ಮಾಡಬೇಡಿ ದೇವರಲ್ಲಿ ಏಕಾಗ್ರತೆ ಮಾಡಿ ಮಂತ್ರವನ್ನು ಪಠಿಸಿ ಆಗ ಅದರ ಸಂಪೂರ್ಣ ಪ್ರಯೋಜನ ನಿಮಗೆ ಲಭಿಸುತ್ತದೆ. ಮತ್ತೊಂದು ಮುಖ್ಯ ವಿಚಾರ ಏನು ಅಂದ್ರೆ ದೇವರಿಗಾಗಿ ತಯಾರಿಸಿದ ಅಡುಗೆಯನ್ನು ಕೂಡ ಹೌದು ದೇವರಿಗೆ ಸಮರ್ಪಣೆ ಮಾಡುವ ನೈವೇದ್ಯ ಅನ್ನು ಸಹ ನೇರವಾಗಿ ನೆಲದ ಮೇಲೆ ಇರಿಸಬೇಡಿ ಅದನ್ನು ವಿಶೇಷವಾಗಿ ತಟ್ಟೆಯೊಂದರ ಮೇಲೆ ಅಥವಾ ಬಾಳೆ ಎಲೆ ಮೇಲೆ ಇರಿಸಬೇಕು.

ಅಡಿಕೆ ಲಕ್ಷ್ಮಿಯ ಸಮಾನ ಆಗಿರುತ್ತದೆ ಅಡಿಕೆಯನ್ನು ಎಲೆಯ ಮೇಲೆಯೇ ಇರಿಸಿ ದೇವರ ಮುಂದೆ ಇಡಬೇಕು. ದೇವರ ವಿಗ್ರಹವನ್ನು ಚಿನ್ನ ಬೆಳ್ಳಿ ಅಥವಾ ಮರದ ಫಲಕದ ಮೇಲೆ ಇರಿಸಬೇಕು ಚಿನ್ನ ಬೆಳ್ಳಿ ಅಥವಾ ಮರದ ಪೀಠ ಮಾಡಿಸಿ ಅದರೊಳಗೂ ಕೂಡ ವಿಗ್ರಹವನ್ನು ಇರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ. ಈ ರೀತಿಯಾಗಿ ದೇವರ ಪೂಜೆ ಮಾಡುವಾಗ ದೇವರ ಸಾಮಗ್ರಿಗಳನ್ನು ನೇರವಾಗಿ ನೆಲದ ಮೇಲೆ ಇರಿಸಬೇಡಿ ಮೇಲೆ ತಿಳಿಸಿದಂತಹ ಕೆಲವೊಂದು ಮಾಹಿತಿಯನ್ನು ತಪ್ಪದೇ ತಿಳಿದು ಅದರಂತೆ ಪೂಜಾ ವಿಧಾನವನ್ನು ಪಾಲಿಸಿ. ಹೇಗೆಂದರೆ ಹಾಗೆ ಪೂಜೆ ಮಾಡಬಾರದು ಅದರಿಂದ ನಮಗೆ ಯಾವ ವಿಶೇಷ ಪಲವು ಲಭಿಸುವುದಿಲ್ಲ ಮನಸ್ಸಿಗೆ ಶಾಂತಿ ನೆಮ್ಮದಿ ಏಕಾಗ್ರತೆ ಎಲ್ಲವೂ ಹೆಚ್ಚು ಬೇಕೆಂದಲ್ಲಿ ಪೂಜೆಯನ್ನು ಆ ಪೂಜಾವಿಧಾನದಲ್ಲಿಯೆ ಪಾಲಿಸಿ ಎಲ್ಲವು ಒಳ್ಳೆಯದಾಗುತ್ತದೆ.

Leave A Reply

Your email address will not be published.