ಕಾಫಿ ಪ್ರತಿದಿನ ಕುಡಿತೀರಾ ಹಾಗಾದ್ರೆ ಈ ಸಮಸ್ಯೆಯಿಂದ ನರಳುವುದು ಪಕ್ಕ!

ಕೆಲವು ದಿನದಲ್ಲಿ ನಾಲ್ಕೈದು ಬಾರಿ ಈ ಪಾನೀಯಗಳನ್ನು ಸೇವಿಸುತ್ತಾರೆ. ನಿಜಕ್ಕೂ ಇಷ್ಟು ಬಾರಿ ಕಾಫಿ ಮತ್ತು ಟೀ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಾನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಡುವುದು ಉತ್ತಮ.

ಕಾಫಿ, ಟೀ ಕುಡಿಯುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಚುಮುಚುಮು ಚಳಿಯಲ್ಲಿ, ಮಳೆ ಬರುವ ವೇಳೆ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಆಹ್ಲಾದಗೊಳಿಸುವ ಸಾಮರ್ಥ್ಯ ಚಹಾ ಹಾಗೂ ಕಾಫಿಗೆ ಇದೆ. ಹಾಗಾಗಿ ಪ್ರತಿದಿನ ಎರಡು ಹೊತ್ತಾದರೂ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಜನ ಹೊಂದಿರುತ್ತಾರೆ.

ಆದರೆ ಕೆಲವರು ದಿನದಲ್ಲಿ ನಾಲ್ಕೈದು ಬಾರಿ ಈ ಪಾನೀಯಗಳನ್ನು ಸೇವಿಸುತ್ತಾರೆ. ನಿಜಕ್ಕೂ ಇಷ್ಟು ಬಾರಿ ಕಾಫಿ ಮತ್ತು ಟೀ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಡುವುದು ಉತ್ತಮ.

ಅದೆಷ್ಟೋ ಜನ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸವನ್ನು ಬಿಡಬೇಕು ಅಂದುಕೊಂಡರೂ ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಅತಿಯಾದ ಟೀ ಕಾಫಿ ಚಟವು ನಿಮ್ಮ ದೇಹದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅಲ್ಲದೇ ನರಗಳನ್ನು ಹಾನಿಗೊಳಿಸುತ್ತದೆ.

ಹಾಗಾಗಿ ಅತಿಯಾದ ಟೀ ಕಾಫಿ ಸೇವನೆಯನ್ನು ಬಿಡಲು ಒಂದಷ್ಟು ಟಿಪ್ಸ್ ಫಾಲೋ ಮಾಡಬೇಕು. ಈ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅವು ಯಾವುವು ಅಂತೀರಾ ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಟೀ, ಕಾಫಿ ಬದಲಿಗೆ ಗ್ರೀನ್ ಟೀ ಕುಡಿಯಿರಿ. ಇದು ನಿಮ್ಮ ದೇಹದಲ್ಲಿರುವ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಅಲ್ಲದೇ ಇದನ್ನು ನೀವು ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಲು ಇಷ್ಟ ಪಡುತ್ತೀರಿ.

ಕೆಫೀನ್ ಸೇವಿಸುವ ಮೂಲಕ ನಿಮ್ಮ ಆಯಾಸವನ್ನು ತೊಡೆದುಹಾಕಲು ನೀವು ಪ್ರಯತ್ನಿಸುತ್ತಿದ್ದರೆ, ಬದಲಿಗೆ ಪವರ್ ನಪ್ ತೆಗೆದುಕೊಳ್ಳಿ ಮತ್ತು ಆಯಾಸವು ದೂರವಾಗುತ್ತದೆ. ಹೆಚ್ಚು ನೀರು ಕುಡಿಯಿರಿ, ಇದರಿಂದ ನಿಮ್ಮ ದೇಹದಲ್ಲಿನ ನೀರಿನ ಕೊರತೆ ಕಡಿಮೆಯಾಗುತ್ತದೆ.

ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿ, ಇದರಿಂದ ಬಹಳಷ್ಟು ಆಯಾಸವನ್ನು ಕಡಿಮೆ ಮಾಡಬಹುದು. ಇದರಿಂದ ಆಯಾಸ ಉಂಟಾಗುವುದಿಲ್ಲ.

Leave a Comment