ತುಳಸಿ ಸಸ್ಯ ನೀಡುವ ಮೂರು ಸಂಕೇತಗಳು?

0 603

ತುಳಸಿ ಸಸ್ಯವು ತುಂಬಾ ಪವಿತ್ರವಾದ ಸಸ್ಯವಾಗಿದೆ, ಯಾವ ವ್ಯಕ್ತಿ ಪ್ರತಿನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೋ ಆ ವ್ಯಕ್ತಿಗೆ ಜೀವನದಲ್ಲಿ ಸುಖ, ಶಾಂತಿ,ನೆಮ್ಮದಿ ಎಲ್ಲವೂ ದೊರೆಯುತ್ತದೆ. ಭಗವಂತನಾದ ಶ್ರೀಕೃಷ್ಣನು ಹೇಳುವ ಪ್ರಕಾರ ಯಾರು ಪ್ರತಿನಿತ್ಯ ತುಳಸಿ ಸಸ್ಯಕ್ಕೆ ನಮಸ್ಕಾರ ಮಾಡುತ್ತಾರೋ ಅವರಿಗೆ ಸಂಕಷ್ಟಗಳು ಎದುರಾಗುವುದಿಲ್ಲ. ಇದರ ಜೊತೆಗೆ ಯಾವ ವ್ಯಕ್ತಿ ತುಳಸಿ ದಳದ ಸೇವನೆಯನ್ನು ಪ್ರತಿನಿತ್ಯ ಮಾಡುತ್ತಾರೋ ಆ ವ್ಯಕ್ತಿ ರೋಗಗಳಿಂದ ಮುಕ್ತಿಯನ್ನು ಹೊಂದುತ್ತಾನೆ. ಮನೆಯ ಮುಂಭಾಗದಲ್ಲಿ ತುಳಸಿ ಸಸ್ಯ ನೆಟ್ಟರೆ ಕೆಟ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಆಗದಂತೆ ತಡೆದು ಸಕಾರಾತ್ಮಕ ಶಕ್ತಿಯ ಸಂಚಲನ ಆಗುವಂತೆ ನೋಡಿಕೊಳ್ಳುತ್ತದೆ. ಹಾಗಾದರೆ ತುಳಸಿ ಸಸ್ಯ ನೀಡುವ ಸಂಕೇತದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕೆಲವೊಂದು ಬಾರಿ ತುಳಸಿ ಸಸ್ಯವು ಆಕಸ್ಮಿಕವಾಗಿ ಒಣಗಲು ಶುರುವಾಗುತ್ತದೆ, ಆಗ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಅಥವಾ ಮುಂದಿನ ದಿನಗಳಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ.

ಒಂದು ವೇಳೆ ತುಳಸಿ ಸಸ್ಯದ ಹಸಿರು ಎಲೆಗಳು ತಾವಾಗಿಯೇ ಉದುರಲು ಪ್ರಾರಂಭ ಮಾಡಿದರೆ ಮನೆಯಲ್ಲಿ ವಾದ-ವಿವಾದಗಳ ನಡೆಯುತ್ತದೆ, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಬರುತ್ತದೆ ಎಂಬುದನ್ನು ತಿಳಿಸುತ್ತದೆ.ಒಂದು ವೇಳೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭ ಮಾಡಿದರೆ ಯಾವುದೇ ಪ್ರಕಾರದಲ್ಲಿ ಹೆದರುವ ಅವಶ್ಯಕತೆ ಇರುವುದಿಲ್ಲ.

ತುಳಸಿ ಸಸ್ಯದ ಅಕ್ಕಪಕ್ಕದಲ್ಲಿ ಬೇರೆ ಸಸ್ಯಗಳು ಹುಟ್ಟಿಕೊಂಡರೆ ಅದು ಒಳ್ಳೆಯ ಸಂಕೇತವಾಗಿರುತ್ತದೆ. ಮನೆಯೊಳಗೆ ಇನ್ನೂ ಹೆಚ್ಚಿನ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇದರ ಜೊತೆಗೆ ವ್ಯಾಪಾರದಲ್ಲಿ ಅಭಿವೃದ್ಧಿ ಹಾಗು ಯಾವುದಾದರೂ ಒಂದು ಕಡೆಯಿಂದ ಧನ ಪ್ರಾಪ್ತಿ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ.

 ಒಂದು ವೇಳೆ ತುಳಸಿ ಸಸ್ಯದ ಮೇಲೆ ಯಾವುದಾದರೂ ಪಕ್ಷಿಗಳು ಬಂದು ಕುಳಿತುಕೊಂಡರೆ ಹಾಗೂ ಅದನ್ನು ನೋಡಿದಾಗ ನಿಮಗೆ ತುಳಸಿ ಸಸ್ಯ ಸುಂದರವಾಗಿ ಕಂಡರೆ ಬಹಳ ಬೇಗ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಅಥವಾ ನಿಮ್ಮ ಮನಸ್ಸಿನ ಇಚ್ಛೆ ನೆರವೇರುತ್ತದೆ ಎಂಬುದನ್ನು ಅದು ಸೂಚಿಸುತ್ತದೆ.

Leave A Reply

Your email address will not be published.