ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಇವರು ಕ್ರಿಯೇಟಿವ್ ಆಗಿದ್ದು, ತುಂಬಾ ಕಾನ್ಫಿಡೆನ್ಸ್‌ನಲ್ಲಿ ಇರುತ್ತಾರೆ.
ಜ್ಯೋತಿಷ್ಯದ ಪ್ರಕಾರ ಭಾನುವಾರವನ್ನು ಸೂರ್ಯನ ವಾರವೆಂದು ಪರಿಗಣಿಸುತ್ತಾರೆ. ಭಾನುವಾರ ಜನಿಸಿದವರು ತಮ್ಮ ಜೀವನದಲ್ಲಿ ಸೂರ್ಯನಂತೆ ಬೆಳಗುತ್ತಾರೆ. ಇವರು ವಿಭಿನ್ನವಾದುದನ್ನು ಇಷ್ಟ ಪಡುತ್ತಾರೆ, ಇವರು ಅತ್ಯಂತ ಸೃಜನಶೀಲ ವ್ಯಕ್ತಿಗಳು, ಪ್ರತಿಯೊಂದು ವಿಷಯದಲೂ ಅವರು ಮೊದಲ ಸ್ಥಾನದಲ್ಲಿರಬೇಕು ಎಂದು ಬಯಸುತ್ತಾರೆ. ಇವರು ಅತ್ಯಂತ ಧೈರ್ಯಶಾಲಿಗಳು, ಸ್ವಾರ್ಥಿಗಳೂ, ಗೌರವಾನ್ವಿತ ಉದಾತ್ತರೂ ಹಾಗೂ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳು. ಈ ವ್ಯಕ್ತಿಗಳು ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಹಾಗೂ ಸಮಾಜವನ್ನು ಆಳುತ್ತಾರೆ. ಇವರ ಜೀವನದ ಮುಖ್ಯ ಧ್ಯೇಯವೆಂದರೆ ಮೋಜು ಮತ್ತು ಉದ್ದೇಶಪೂರ್ವಕ ಜೀವನ. ಇವರು ಹೊರಜಗತ್ತಿಗೆ ಆತ್ಮವಿಶ್ವಾಸದಿಂದ ಕಂಡರೂ, ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವಾಗ ತೊಂದರೆಗೊಳಗಾಗುತ್ತಾರೆ. ಇವರು ಆಕರ್ಷಣೆಯ ಕೇಂದ್ರವಾಗಲು ಅನುಮತಿಸುವ ಜನರೊಂದಿಗೆ ಮಾತ್ರ ಸ್ನೇಹಿತರಾಗುತ್ತಾರೆ.
ಭಾನುವಾರ ಜನಿಸಿದವರು ಸ್ವಾತಂತ್ರ್ಯಪ್ರಿಯರು. ಅದು ವೈಯಕ್ತಿಕ ಜೀವನದಲ್ಲಾಗಲಿ, ವೃತ್ತಿಜೀವನದಲ್ಲಾಗಲಿ, ಏಕಾಂಗಿಯಾಗಿ ಕೆಲಸ ಮಾಡುವುದು ಇವರಿಗೆ ಇಷ್ಟ.ಇವರು ಕಠಿಣ ಪರಿಶ್ರಮದ ವ್ಯಕ್ತಿ ಹಾಗೂ ಇವರು ತಮ್ಮ ತಿಳುವಳಿಕೆಗೆ ಅನುಸಾರವಾದ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾಯಕತ್ವದ ಪಾತ್ರಗಳು ಇವರಿಗೆ ಹೆಚ್ಚು ಸರಿಹೊಂದುತ್ತವೆ. ಇವರ ಚಾಣಾಕ್ಷತನ ಮತ್ತು ಸ್ವಂತ ಆಲೋಚನೆಗಳು ವೃತ್ತಿಜೀವನದ ಉದ್ದೇಶಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ. ಇವರಿಗೆ ಹೆಚ್ಚಿನ ಸ್ನೇಹಿತರು ಇರುವುದಿಲ್ಲ. ಕಾರಣ ಮೋಸ ಹೋಗಬಹುದೆಂಬ ಭಯ, ವಿಶ್ವಾಸಾರ್ಹತೆಯ ಇರುವುದರಿಂದ ಜೀವನದಲ್ಲಿ ಸಂಗಾತಿಯನ್ನು ಹುಡುಕುವುದು ಇವರಿಗೆ ಕಷ್ಟಕರವಾಗಿರುತ್ತದೆ. ಅವರು ಅಂದುಕೊಂಡ ಸಂಗಾತಿ ಸಿಕ್ಕ ನಂತರ ಅವರನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಭಾನುವಾರ ಜನಿಸಿದವರು ಹೆಚ್ಚಾಗಿ ಹಠಮಾರಿ ಹಾಗೂ ಕಡಿಮೆ ತಾಳ್ಮೆಯುಳ್ಳವರು.
ಇವರ ವೈವಾಹಿಕ ಜೀವನದಲ್ಲಿ ಮಿಶ್ರಭವಿಷ್ಯವನ್ನು ಹೊಂದಿರುತ್ತಾರೆ. ತಿರುಗಾಡಲು ಬಯಸುವ ವ್ಯಕ್ತಿತ್ವ ಇವರದ್ದು ಆಗಿರುತ್ತದೆ .ವೈಯಕ್ತಿಕ ಸ್ಥಳ ಮತ್ತು ಸ್ವಾತಂತ್ರ್ಯವು ಇವರ ಮುಖ್ಯ ಆದ್ಯತೆಯಾಗಿದ್ದು, ಇದನ್ನು ಆನಂದಿಸಲು ಬಯಸುತ್ತಾರೆ. ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಮಧ್ಯೆ ಸಮತೋಲನ ಸಾಧಿಸುವುದು ಇವರಿಗೆ ಕಷ್ಟಕರವಾಗಿರುತ್ತದೆ. ಉತ್ತಮ ಜೀವನವನ್ನು ಮುನ್ನಡೆಸಲು ಭಾನುವಾರ ಜನಿಸಿದವರು ಭಾನುವಾರವಾದರೂ ಸೂರ್ಯದೇವನನ್ನು ಪೂಜಿಸಬೇಕು.