ಕೇರಳದವರ ತರಾ ದಟ್ಟ ಉದ್ದ ಕೂದಲು ಸೀಕ್ರೆಟ್ ಕೂದಲು ತಕ್ಷಣ ಉದುರುವುದು ನಿಲ್ಲುತ್ತದೆ!

ತಲೆ ಕೂದಲಿನ ಸಮಸ್ಸೆಗೆ ಶಾಶ್ವತ ಪರಿಹಾರವನ್ನು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಆದಷ್ಟು ನ್ಯಾಚುರಲ್ ಆಗಿ ಕೂದಲು ಉದುರುವಿಕೆ ಆಗುವುದನ್ನು ತಡೆಗಟ್ಟಬಹುದು. ತಲೆ ಕೂದಲು ಉದುರುವುದಕ್ಕೆ ಮೊದಲು ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಇನ್ನು ಆಜೀರ್ಣ ಸಮಸ್ಸೆ ಇದ್ದರೆ ತಲೆ ಕೂದಲು ಉದುರುತ್ತದೆ, ಮಲಬದ್ಧತೆ ಸಮಸ್ಸೆಯಿಂದ, ನಿದ್ರಾ ಹೀನತೆ ಸಮಸ್ಸೆಯಿಂದ, ಮಾನಸಿಕ ಒತ್ತಡದಿಂದ, ಪೋಷಕ ತತ್ವ ಕೊರತೆಯಿಂದ ಕೂದಲು ಉದುರುತ್ತದೆ.

ಕೂದಲು ಉದುರುವಿಕೆ ಕಡಿಮೆ ಮಾಡುವುದಕ್ಕೆ ಪರಿಹಾರ..!

1, ಬೆಟ್ಟದ ನೆಲ್ಲಿಕಾಯಿ ಜ್ಯೂಸ್–4-5 ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅರ್ಧ ಗ್ಲಾಸ್ ನೀರಿನಲ್ಲಿ ಚೆನ್ನಾಗಿ ತೊಳೆದು ನೆಲ್ಲಿಕಾಯಿ ಬೀಜ ತೆಗೆದು ಪೇಸ್ಟ್ ಮಾಡಿ ರಸವನ್ನು ತೆಗೆಯಿರಿ. ಇದಕ್ಕೆ ಸ್ವಲ್ಪ ನೀರು, ಜೇನುತುಪ್ಪ, ಸಾಲಿಂದ್ರ ಲವಣ ಬೆರೆಸಿ ಮಿಕ್ಸ್ ಮಾಡಿ ಸೇವನೇ ಮಾಡಿದರೆ ನಿಮ್ಮ ಕೂದಲಿಗೆ ಬೇಕಾಗಿರುವ ಎಲ್ಲಾ ಪೋಷಕ ತತ್ವಗಳು ಇದರಲ್ಲಿ ಸಿಗುತ್ತವೆ. ಜೊತೆಗೆ ಕೂದಲಿಗೆ ಕಾರಣ ಆಗಿರುವ ಆಜೀರ್ಣ ಮಲಬದ್ಧತೆ ಸಮಸ್ಸೆಯನ್ನು ಕೂಡ ಹೋಗಲಾಡಿಸುತ್ತದೆ. ಆದಷ್ಟು ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆಯನ್ನು ಮಾಡಬೇಕು. ಅಷ್ಟೇ ಅಲ್ಲದೆ ಧೂಮಪಾನ ಮಧ್ಯಾಪನ ಫಾಸ್ಟ್ ಫುಡ್ ಇಂಡ ದೂರ ಇರಬೇಕು.

ಇನ್ನು 50 ಗ್ರಾಂ ಅಷ್ಟು ದಾಸವಾಳದ ಹೂವು ಮತ್ತು 50ಗ್ರಾಂ ಅಷ್ಟು ಮೃಂಗರಾಜ, 50 ಗ್ರಾಂ ಬೆಟ್ಟದ ನೆಲ್ಲಿಕಾಯಿ ಪೇಸ್ಟ್,50 ಗ್ರಾಂ ಆಲೂವೆರಾ ಜೆಲ್,50 ಗ್ರಾಂ ಕರಿಬೇವಿನ ಎಲೆ ಪೇಸ್ಟ್,50 ಗ್ರಾಂ ಮೆಂತೆ ಪೇಸ್ಟ್ . ಇವೆಲ್ಲವನ್ನೂ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ನಂತರ ಅಂಟುವಳ್ಳಿ ಕಾಯಿಯಿಂದ ತಲೆಯನ್ನು ತೊಳೆಯಿರಿ.ಇದಿಷ್ಟು ಮಾಡಿದರೆ ನಿಮ್ಮ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.

Leave a Comment