ಮಹಾಲಕ್ಷ್ಮಿ ವಶೀಕರಣಕ್ಕಾಗಿ ಬೆಳಿಗ್ಗೆ ರಂಗೋಲಿ ಹಾಕುವಾಗ ಈ ವಿಷಯಗಳನ್ನು ಪಾಲಿಸಿ!    

ವಿಶೇಷ ಸಂದರ್ಭಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಹಿಂದೂ ಧರ್ಮದಲ್ಲಿ ಮನೆಯ ಅಂಗಳದಲ್ಲಾಗಿರಬಹುದು ಅಥವಾ ಮನೆಯ ಪೂಜೆ ಕೋಣೆಯಲ್ಲಾಗಿರಬಹುದು ಬಣ್ಣ ಬಣ್ಣದ ರಂಗೋಲಿ ಹಾಕಿರುವುದನ್ನು ನೀವು ನೋಡಿರಬಹುದು. ಯಾಕೆಂದರೆ ಹಿಂದೂ ಧರ್ಮದಲ್ಲಿ ಶುಭ ಸಂದರ್ಭಗಳಲ್ಲಿ ರಂಗೋಲಿಯನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಈ ರಂಗೋಲಿಗಳು ಆಧ್ಯಾತ್ಮಿಕ ದೃಷ್ಟಿಕೋಮ ಮತ್ತು ಪ್ರಯೋಜನಗಳನ್ನು ಹೊಂದಿದೆ ಎನ್ನುವ ನಂಬಿಕೆಯಿದೆ. ನಾವು ಬಿಡಿಸುವ ರಂಗೋಲಿಯ ಬಣ್ಣ, ವಿನ್ಯಾಸ ಮತ್ತು ರೂಪದ ಆಧಾರದ ಮೇಲೆ ಅದರ ಕಂಪನವೂ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಅದ್ಭುತ ರಂಗೋಲಿಯನ್ನು ಬಿಡಿಸುವಾಗ ನಾವು ಈ ಎಲ್ಲಾ ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಪ್ರತಿ ಶುಕ್ರವಾರದಂದು ಬೆಳಿಗ್ಗೆ ಮನೆ ಮುಂದೆ ರಂಗೋಲಿ ಹಾಕುವಾಗ ಒಂದು ಚಿಕ್ಕ ಸಲಹೆ ಪಾಲಿಸುವುದರಿಂದ ಕಂಡಿತಾ ಮಹಾಲಕ್ಷ್ಮಿ ವಶೀಕರಣ ಆಗುತ್ತದೆ. ಬೆಳಿಗ್ಗೆ ಬ್ರಹ್ಮ ಮುಹೂರ್ತ ಸಮಯದಲ್ಲಿ ಮನೆ ಮುಂದೆ ಕಸ ಗೂಡಿಸಿ ನೀರು ಹಾಕಿ ಮತ್ತು ಹಸು ಸಗಣಿ ಸಿಕ್ಕರೆ ನೆಲ ಸಾರಿಸಿ ರಂಗೋಲಿಯನ್ನೂ ಹಾಕಬೇಕು.

ರಂಗೋಲಿ ಮಧ್ಯ ಭಾಗದಲ್ಲಿ ಸ್ವಲ್ಪ ಅರಿಶಿನ ಕುಂಕುಮವನ್ನು ಇಟ್ಟು ಕೆಂಪು ಬಣ್ಣದ ಹೂವು ಅಥವಾ ಹಳದಿ ಬಣ್ಣದ ಹೂವು ಇಟ್ಟು ಹಾಗು ತುಳಸಿ ಅಥವಾ ಮುಖ್ಯದ್ವಾರದ ಹತ್ತಿರ ಒಂದು ದೀಪವನ್ನು ಹಚ್ಚಿಡಿ. ಇದರಿಂದ ಮಹಾಲಕ್ಷ್ಮಿ ವಶೀಕರಣ ಕಂಡಿತಾ ಆಗುತ್ತದೆ. ಮಹಾಲಕ್ಷ್ಮಿ ಆಶೀರ್ವಾದ ಅನುಗ್ರಹ ಕಂಡಿತವಾಗಿ ಸಿಗುತ್ತದೆ.

Leave a Comment