ಆಹಾರದ ವಿಷಯದಲ್ಲಿ ಈ 10 ತಪ್ಪುಗಳನ್ನು ಮಾಡ್ಬೇಡಿ ಅನ್ನಪೂರ್ಣೇಶ್ವರಿ ತಾಯಿಯನ್ನು ಅವಮಾನಿಸಿದಂತೆ!

ಪ್ರತಿಯೊಂದು ಮನೆಯಲ್ಲಿ ಪ್ರತಿಯೊಬ್ಬ ಮನುಷ್ಯ ಆಹಾರ ಇಲ್ಲದೆ ಇರುವುದಿಲ್ಲ. ಆಹಾರಕ್ಕೆ ಅಧಿಪತಿಯಾದ ಅನ್ನಪೂರ್ಣನೇಶ್ವರಿ ತಾಯಿಯನ್ನು ಪೂಜಿಸುವುದು ತುಂಬಾ ಮುಖ್ಯ. ಪ್ರತಿ ಮನೆಯಲ್ಲಿ ಅನ್ನಪೂರ್ಣೇಶ್ವರಿ ಪೂಜೆ ಆರಾಧನೆ ಕಂಡಿತಾ ಇದ್ದರೆ ಆ ಮನೆಯಲ್ಲಿ ಯಾವತ್ತು ಅನ್ನಕ್ಕೆ ಕೊರತೆ ಇರುವುದಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಅನ್ನಪೂರ್ಣೇಶ್ವರಿ ಫೋಟೋ ಅಥವಾ ವಿಗ್ರಹ ಇಟ್ಟು ಪೂಜಿಸಿ ಆರಾಧನೆ ಮಾಡಿ.

ನಿಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ವಿಗ್ರಹ ಇದ್ದರೆ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅಥವಾ ಒಂದು ಸೇರುನಲ್ಲಿ ಅಕ್ಕಿ ಹಾಕಿ ಪ್ರತಿಷ್ಟಾಪನೆ ಮಾಡಿ ಪೂಜೆಯನ್ನು ಸಹ ಮಾಡಬೇಕು. ಇನ್ನು ಯಾವುದೇ ಕಾರಣಕ್ಕೂ ಅನ್ನಪೂರ್ಣೇಶ್ವರಿಗೆ ಈ ರೀತಿಯ 10 ತಪ್ಪುಗಳನ್ನು ಮಾಡಬೇಡಿ.

1, ಅಕ್ಕಿಯನ್ನು ಅಳೆಯುವಾಗ ತಲೆ ಸವಾರಿ ಅಳೆಯಬಾರದು. ರಾಶಿಯಾಗಿ ಅಕ್ಕಿ ತೆಗೆದುಕೊಂಡು ನಂತರ ಅಡುಗೆಯನ್ನು ಮಾಡಿ.

2, ಅಕ್ಕಿಯನ್ನು ತೋಳೆಯುವಾಗ ಅಕ್ಕಿಯನ್ನು ಚೆಲ್ಲಾಬಾರದು.
3, ನೀರು ಕುದಿ ಬಂದಮೇಲೆ ಅಕ್ಕಿಯನ್ನು ಹಾಕಬೇಕು.

4, ಅನ್ನ ಕುಡಿಯುವಾಗ ಸ್ಟವ್ ಅನ್ನು ಚಿಕ್ಕದಾಗಿ ಇಟ್ಟುಬಿಡಿ. ಏಕೆಂದರೆ ಕುಕ್ಕರ್ ಗಿಂತ ಪಾತ್ರೆಯಲ್ಲಿ ಅನ್ನ ಮಾಡುವುದು ತುಂಬಾ ಒಳ್ಳೆಯದು. ಆ ರೀತಿ ಪಾತ್ರೆಯಲ್ಲಿ ಅನ್ನವನ್ನು ಮಾಡುವಾಗ ಕುದಿಯುವ ಸಮಯದಲ್ಲಿ ಸ್ಟವ್ ಜಾಸ್ತಿ ಇಟ್ಟರೆ ಅಕ್ಕಿ ಚೆಲ್ಲುತ್ತದೆ. ಹಾಗಾಗಿ ಅನ್ನ ಕುದಿಯುವ ಸಮಯದಲ್ಲಿ ಸ್ಟವ್ ಅನ್ನು ಕಡಿಮೆ ಇಟ್ಟುಬಿಡಿ.

5, ಅನ್ನ ಕುದಿಯುವಾಗ ಅನ್ನದ ಕೈಯಿಂದ ಅನ್ನವನ್ನು ತಿರುವಾಗ ಅನ್ನ ಸೌಟುಗೆ ಹತ್ತಿದರೆ ಪಾತ್ರೆಗೆ ಜೋರಾಗಿ ಒಡೆಯಬೇಡಿ. ಇದು ಅನ್ನಪೂರ್ಣೇಶ್ವರಿ ತಾಯಿಯನ್ನು ತಟ್ಟಿದಷ್ಟು ತಪ್ಪಾಗುತ್ತದೆ.

6, ಗಂಜಿ ಬಸಿಯುವಾಗ ಅನ್ನವನ್ನು ಚೆಲ್ಲಿಕೊಂಡು ಅನ್ನವನ್ನು ಬಸಿಯಬಾರದು.

7, ಊಟ ಬಡಿಸುವಾಗ ಅನ್ನವನ್ನು ಯಾವುದೇ ಕಾರಣಕ್ಕೂ ಕೆಳಗೆ ಚೆಲ್ಲಾಬಾರದು.

8, ಊಟ ಬಡಿಸುವಾಗ ಅನ್ನದ ಕೈಯಲ್ಲಿ ಅನ್ನ ಅಂಟಿಕೊಂಡಿದ್ದಾರೆ ಅನ್ನದ ಕೈಯನ್ನು ಅನ್ನದ ಪಾತ್ರೆಗೆ ತಟ್ಟಬಾರದು.

9, ಊಟ ತಿನ್ನುವಾಗ ಕಂಡಿತ ಆದಷ್ಟು ಅನ್ನವನ್ನು ಚೆಲ್ಲಾಬಾರದು. ಅನ್ನವನ್ನು ಚೆಲ್ಲದೆ ತಿನ್ನುವ ರೂಡಿ ಮಾಡಿಕೊಳ್ಳಿ. ಮನೆಯಲ್ಲಿ ಸಹ ಚಿಕ್ಕ ಮಕ್ಕಳು ಊಟ ಮಾಡುವಾಗ ಅನ್ನವನ್ನು ಚೆಲ್ಲುತ್ತಿದ್ದಾರೆ ಅದನ್ನು ಅವರಿಗೆ ಇವಾಗಿಂದಲೇ ರೂಡಿ ಮಾಡಿ.

10, ರಾತ್ರಿ ಮಲಗುವಾಗ ಅನ್ನವನ್ನು ಪೂರ್ತಿಯಾಗಿ ಖಾಲಿ ಮಾಡಬೇಡಿ. ಸ್ವಲ್ಪ ಅನ್ನವನ್ನು ಪಾತ್ರೆಯಲ್ಲಿ ಇಟ್ಟು ಪಾತ್ರೆಗೆ ನೀರನ್ನು ಸ್ವಲ್ಪ ಹಾಕಿ ಬಿಡಿ ಸ್ಟವ್ ಮೇಲೆ ಇಡಬೇಕು.

Leave A Reply

Your email address will not be published.