ಮನೆಯಲ್ಲಿ ಆನೆಯ ವಿಗ್ರಹ ಇಟ್ಟರೆ ಏನಾಗುತ್ತದೆ ಗೊತ್ತಾ..?

an idol of an elephant at home: ಸಾಮಾನ್ಯವಾಗಿ ಮನೆಯ ಅಂದವನ್ನು ಹೆಚ್ಚಿಸಲು ಮನೆಗೆ ಅಲಂಕಾರಕ್ಕಾಗಿ ಸಾಕಷ್ಟು ಚಿತ್ರಪಟಗಳನ್ನು ಪ್ರತಿಮೆಗಳನ್ನು ಇರಿಸುತ್ತೇವೆ. ಅದರಂತೆಯೇ ಮನೆಯಲ್ಲಿ ಏನಾದರೂ ಆನೆಯ ಪ್ರತಿಮೆಗಳನ್ನು ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ, ಇದು ಮನೆಯಲ್ಲೇ ಇರುವ ಸಮಸ್ಯೆಗಳನ್ನು ಹೋಗಲಾಡಿಸಿ ಮನೆಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಆನೆಯ ಪ್ರತಿಮೆಗಳನ್ನು ಮನೆಯಲ್ಲಿ ಇಡುವುದರಿಂದ ಯಾವ ಉಪಯೋಗಗಳು ಸಿಗುತ್ತದೆ, ಇದನ್ನು ಎಲ್ಲಿ ಇಡಬೇಕು ಯಾವ ರೀತಿ ಇರಬೇಕು ಎಂದು ನೋಡೋಣ.

ಫೆಂಗ್ ಶೂಯಿಯಲ್ಲಿ ಹೇಳಿರುವ ಪ್ರಕಾರ ಆನೆಯನ್ನು ರಕ್ಷಣೆ ಅದೃಷ್ಟ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಹೇಳಲಾಗಿದೆ, ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಜೋಡಿ ಆನೆಯ ವಿಗ್ರಹವನ್ನು ಇಟ್ಟರೆ ಅದು ಮನೆಗೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವೃತ್ತಿ ಜೀವನದ ಯಶಸ್ಸು ಮತ್ತು ಲಾಭಕ್ಕಾಗಿ ಕೆಲಸ ಮಾಡುವಂತಹ ಸ್ಥಳಗಳಲ್ಲಿ ಮುಖ್ಯ ಟೇಬಲ್ ಮೇಲೆ ಆನೆಯ ಪ್ರತಿಮೆಯನ್ನು ಇಡುವುದರಿಂದ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಎನ್ನುವುದು ಲಭಿಸುತ್ತದೆ.

ವಿಶೇಷವಾಗಿ ಮಲಗುವ ಕೋಣೆಯಲ್ಲಿ ತಾಯಿ ಮತ್ತು ಮರಿ ಇರುವಂತಹ ಬಿಳಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಆ ಮನೆಯಲ್ಲಿ ಸುಖ ಸಂತೋಷ ಎನ್ನುವುದು ನೆಲೆಸುತ್ತದೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗಳು ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ಇನ್ನು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವಂತಹ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಅವರ ಚುರುಕುತನ ಹೆಚ್ಚಾಗಲು ಮಕ್ಕಳು ಓದುವ ಟೇಬಲ್ ಮೇಲೆ ಆನೆಯ ವಿಗ್ರಹ ಅಥವಾ ಫೋಟೋಗಳು ಇಡುವುದು ಬಹಳ ಒಳ್ಳೆಯದು.

ಆನೆಯು ತನ್ನ ಸೊಂಡಿಲಿನಲ್ಲಿ ಸ್ಪಟಿಕ ಚೆಂಡನ್ನು ಹೊಂದಿರುವಂತಹ ಆನೆಯ ಫೋಟೋವನ್ನು ಮನೆಯಲ್ಲಿ ಇಟ್ಟು ಕೊಳ್ಳುವುದು ಬಹಳ ಎಂದು ಹೇಳಲಾಗುತ್ತದೆ. ಇನ್ನು ಮನೆಯ ಮುಖ್ಯದ್ವಾರದಲ್ಲಿ ಆನೆಯ ಪ್ರತಿಮೆಯನ್ನು ಇಡುವುದರಿಂದ ಇದು ಮನೆಗೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಇನ್ನು ಉತ್ತಮ ದಾಂಪತ್ಯ ಜೀವನ ಕಾಗಿ ದಂಪತಿಗಳು ಮಲಗುವ ಕೋಣೆಯಲ್ಲಿ ಎರಡು ಜೋಡಿಗಳ ಆನೆ ಒಟ್ಟಿಗೆ ಇರುವಂತಹ ಪ್ರತಿಮೆ ಅಥವಾ ಫೋಟೋವನ್ನು ಇಟ್ಟುಕೊಳ್ಳಬಹುದು. ಈ ರೀತಿಯಾಗಿ ಮನೆಯಲ್ಲಿ ಆನೆಯನ್ನು ಇಟ್ಟುಕೊಳ್ಳುವುದು ಬಹಳ ಮಂಗಳಕರ ಎಂದು ಹೇಳಲಾಗುತ್ತದೆ.

Leave A Reply

Your email address will not be published.