ತಾಮ್ರದ ಚೊಂಬಿನಲ್ಲಿ ಹೀಗೆ ಮಾಡಿದರೆ ಲಕ್ಷ್ಮಿದೇವಿ ನಿಮ್ಮ ಮನೆಗೆ ಬರುತ್ತಾರೆ.!!
Goddess Lakshmi will come to your home: ದೇವರ ಮನೆಯಲ್ಲಿ ತಾಮ್ರದ ಚೊಂಬಿನಲ್ಲಿ ಈ ವಸ್ತುವನ್ನು ಹಾಕಿ ಪೂಜೆ ಮಾಡಿದರೆ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ ಪ್ರತಿ ದಿನ ದೇವರ ಮನೆಯಲ್ಲಿ ತಾಮ್ರದ ಚೊಂಬು ಉಪಯೋಗಿಸಿ ಕೊಂಡು ಈ ಒಂದು ವಸ್ತುವನ್ನು ಇಟ್ಟು ತಾಮ್ರದ ಚೊಂಬು ಗೆ ಮನಸ್ಫೂರ್ತಿ ಆಗಿ ನಮಸ್ಕಾರ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಮತ್ತು ನೀವು ಓಂ ಶ್ರೀ ಮಹಾ ಲಕ್ಷ್ಮಿ ನಮೋ ನಮಃ ಮಂತ್ರವನ್ನು ಜಪಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ ತಾಮ್ರದ ಚೊಂಬು ಉಪಯೋಗಿಸಿ ಯಾವ ವಿಧಾನದಿಂದ ಈ ಪೂಜೆ ಮಾಡಬೇಕು ಎಂದು ನಾವು ತಿಳಿಯೋಣ ಬನ್ನಿ.
ನೀವು ಏನು ಮಾಡಬೇಕು ಎಂದರೆ ಹಿತ್ತಾಳೆ ತಟ್ಟೆ ಅಥವಾ ತಾಮ್ರದ ತಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಇಷ್ಟವಾದ ರಂಗೋಲಿ ಹಾಕಿ ಅದರಲ್ಲಿ ಅರಿಶಿಣ ಕುಂಕುಮದಿಂದ ಬೊಟ್ಟು ಇಟ್ಟು ತಟ್ಟೆಗೆ 5 ಅಥವಾ 9 ಕಡೆ ಬೊಟ್ಟು ಇಡಬೇಕು ಮತ್ತು ತಾಮ್ರದ ಚೊಂಬು ಉಪಯೋಗಿಸಿ ಕೊಂಡು ಈ ಪೂಜೆ ಮಾಡಬೇಕು ಸ್ಟೀಲ್ ಚೊಂಬು ಉಪಯೋಗಿಸಿ ಇದನ್ನು ಮಾಡಬಾರದು. ತಾಮ್ರದ ಚೊಂಬು ಗೆ ಹೀಗೆ ಅರಿಶಿಣ ಹಾಕಿ ಕುಂಕುಮ ಇಂದ ಬೊಟ್ಟು ಇಟ್ಟು ತಾಮ್ರದ ತಟ್ಟೆಯಲ್ಲಿ ಚೊಂಬು ಇಟ್ಟು ಚೊಂಬುವಿನಲ್ಲಿ ಕುಡಿಯುವ ನೀರನ್ನು ಹಾಕಬೇಕು.
ಇದರಲ್ಲಿ ಸ್ವಲ್ಪ ಅರಿಶಿನ ಕುಂಕುಮ ಮತ್ತು ಸ್ವಲ್ಪ ಗಂಧವನ್ನು ನೀವು ನೀರಿನಲ್ಲಿ ಹಾಕಬೇಕು ಮತ್ತು ಎರಡು ನಾಣ್ಯ ಹಾಕಿ ಅದರಲ್ಲಿ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಈ ನೀರಿನಲ್ಲಿ ಬಿಳಿ ಹೂವನ್ನು ಹಾಕಬೇಕು ಏಕೆಂದರೆ ಮಹಾ ಲಕ್ಷ್ಮಿ ದೇವಿಗೆ ಬಿಳಿ ಹೂವು ಎಂದರೆ ತುಂಬಾ ಇಷ್ಟ ಹೀಗೆ ನೀರಿನಲ್ಲಿ ಮತ್ತು ತಟ್ಟೆಯಲ್ಲಿ ಬಿಳಿ ಹೂವಿನಿಂದ ಅಲಂಕಾರ ಮಾಡಿ ನೀವು ಈ ವಿಧಾನದಿಂದ ತಾಮ್ರದ ಚೊಂಬು ಗೆ ಅಲಂಕಾರ ಮಾಡಿ ದೇವರ ಮನೆಯಲ್ಲಿ ಇಟ್ಟು ಪ್ರತಿ ದಿನ ಈ ತಾಮ್ರದ ಚೊಂಬು ಗೆ ಅಕ್ಷತೆ ಹಾಕಿ ಓಂ ಶ್ರೀ ಮಹಾ ಲಕ್ಷ್ಮಿ ನಮೋ ನಮಃ ಮಂತ್ರವನ್ನು 108 ಬಾರಿ ಅಥವಾ 21 ಬಾರಿ ಜಪಿಸಿ ಪೂಜೆಯನ್ನು ಮಾಡಿದರೆ ಲಕ್ಷ್ಮಿ ದೇವಿ ಅನುಗ್ರಹ ಲಭಿಸುತ್ತದೆ.
ದೇವರ ಮನೆಯಲ್ಲಿ ಜಾಗ ತುಂಬಾ ಚಿಕ್ಕದಾಗಿ ಇದೆ ಎಂದರೆ ನೀವು ಚಿಕ್ಕದಾಗಿ ತಾಮ್ರದ ಚೊಂಬು ಉಪಯೋಗಿಸಿ ಈ ವಿಧಾನ ಅನುಸರಿಸಬಹುದು ನೀವು ಈ ವಿಧಾನದಿಂದ ಪೂಜೆ ಮಾಡಿ ಲಕ್ಷ್ಮಿ ದೇವಿ ಕಟಾಕ್ಷ ಪಡೆಯಿರಿ ಮತ್ತು ತಾಮ್ರದ ಚೊಂಬು ಉಪಯೋಗಿಸಿ ಪ್ರತಿ ಮಂಗಳವಾರ ಇದೆ ವಿಧಾನದಿಂದ ಪೂಜೆ ಮಾಡಬಹುದು ನೀವು ಏನು ಮಾಡಬೇಕು ಎಂದರೆ ತಾಮ್ರದ ಚೊಂಬು ಇದೆ ರೀತಿ ಅಲಂಕಾರ ಮಾಡಿ ನೀವು ನಿಮ್ಮ ಸಿಂಹ ದ್ವಾರದ ಎಡ ಭಾಗದಲ್ಲಿ ಅರಿಶಿಣ ಕುಂಕುಮ ಲೇಪಿಸಿ ರಂಗೋಲಿ ಹಾಕಿ ರಂಗೋಲಿ ಮೇಲೆ ಇಟ್ಟರೆ ತುಂಬಾ ಒಳ್ಳೆಯ ಫಲಿತಾಂಶ ಕಾಣಬಹುದು.