ಮಂಗಳೂರು ಸೌತೆಕಾಯಿ ಇಂತವರು ತಿನ್ನೋದ್ರಿಂದ ಏನಾಗತ್ತೆ ಗೊತ್ತಾ?

Kannada Health tips :ಸಾಮಾನ್ಯವಾಗಿ ಸುಲಭವಾಗಿ ಎಲ್ಲಾರು ತಿನ್ನುವ ತರಕಾರಿ ಎಂದರೆ ಅದು ಸೌತೆಕಾಯಿ. ಸಾಂಬಾರು ಸೌತೆಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ.ಈ ಸೌತೆಕಾಯಿ ಜೀರ್ಣ ಆಗುವುದಕ್ಕೆ ತುಂಬಾನೇ ಸುಲಭವಾಗುತ್ತದೆ. ಹಾಗಾಗಿ ದೊಡ್ಡವರು ಚಿಕ್ಕವರು ಕೂಡ ತಿನ್ನಬಹುದು. ಇದರಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ ಹಾಗು ನಮ್ಮ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಇ ಹೆರಾಳವಾಗಿ ಸಾಂಬಾರು ಸೌತೆಕಾಯಿಯಲ್ಲಿ ಸಿಗುತ್ತವೆ. ಒಂದು ವೇಳೆ ಯಾರಿಗಾದರೂ ಪದೇ ಪದೇ ಇನ್ಫ್ಯಾಕ್ಷನ್ ಆಗುತ್ತಿದ್ದರೆ ಅವುಗಳನ್ನು ದೂರ ಇಡುವುದಕ್ಕೆ ಈ ಸೌತೆಕಾಯಿಯನ್ನು ಬಳಸಬಹುದು.

ಇನ್ನು ಮಲಬದ್ಧತೆ ಸಮಸ್ಸೆ ಇರುವವರಿಗೆ ತುಂಬಾ ಒಳ್ಳೆಯದು. ಇದರಲ್ಲಿ ನೀರಿನ ಅಂಶ ಹೇರಳವಾಗಿ ಸಿಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಸೆ ಇರುವುದಿಲ್ಲ.ಇನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಂಬಾರ್ ಸೌತೆಕಾಯಿ ಸೇವನೇ ಮಾಡುವುದು ತುಂಬಾ ಒಳ್ಳೆಯದು. ಇದು ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಅಧಿಕ ರಕ್ತ ಒತ್ತಡ ಇರುವವರಿಗೂ ಕೂಡ ತುಂಬಾ ಒಳ್ಳೆಯದು.ಬ್ಲಡ್ ಪ್ರೆಷರ್ ಅನ್ನು ನಿಯಂತ್ರಣ ಇಡುವುದಕ್ಕೆ ಇದು ಸಹಯ ಮಾಡುತ್ತದೆ.ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದಕ್ಕೆ ಈ ಸಾಂಬಾರ್ ಸೌತೆಕಾಯಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.

Leave A Reply

Your email address will not be published.