ಮನೆಯಲ್ಲಿ ಕನ್ನಡಿ ಅಲ್ಲಿಟ್ಟರೆ ದುಡ್ಡೇ ದುಡ್ಡು!

ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ. ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂಬ ಭಾವನೆ ಕೆಲವರಿಗಿರಬಹುದು. ಆದರೆ ಮನೆಯಲ್ಲಿ ಇಡುವಂತಹ ಪುಟ್ಟ ಕನ್ನಡಿಯೂ ಕೂಡ ನಿಮ್ಮ ಮನೆ, ಜೀವನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ನಂಬಲಾಗುವಂತೆ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆಂದು ಹೇಳಲಾಗುತ್ತದೆ.

ಸಾಂಪ್ರದಾಯಿಕವಾಗಿ ಕನ್ನಡಿಯನ್ನು ಮುಖವನ್ನು ನೋಡುವ ಗಾಜಿನಂತೆ ಬಳಸುತ್ತೇವೆಯಾದರೂ, ಅದು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರವು ಕನ್ನಡಿಯನ್ನು ಶಕ್ತಿಯನ್ನು ನಿಶ್ಚಲಗೊಳಿಸುವ ಹಾಗೂ ಹದಗೆಡಿಸುವ ಸಾಮರ್ಥ್ಯ ಹೊಂದಿರುವ ಕನ್ನಡಿ ಎಂದು ಎರಡು ವಿಧಗಳಾಗಿ ವಿಂಗಡಿಸುತ್ತದೆ. ಹಾಗಾಗಿ ನೆಮ್ಮದಿ ಹಾಗೂ ಶಾಂತಿಯುತ ಜೀವನವನ್ನು ನಡೆಸಲು ಕನ್ನಡಿಗಳನ್ನು ಮನೆಯ ಸೂಕ್ತ ಸ್ಥಾನದಲ್ಲಿ ಇರಿಸುವುದು ಮುಖ್ಯ.

ಕನ್ನಡಿಯ ಧನಾತ್ಮಕ ಪ್ರಭಾವ–ಕನ್ನಡಿಯನ್ನು ಹಣ ಇಡುವಂತಹ ಲಾಕರ್‌ನ ವಿರುದ್ಧವಾಗಿಟ್ಟರೆ ಸಂಪತ್ತು ದುಪ್ಪಟ್ಟಾಗುವುದು.ಉತ್ತರ ದಿಕ್ಕು ಸಂಪತ್ತಿನ ದೇವ ಕುಬೇರ ಮೂಲೆಯಾಗಿರುವುದರಿಂದ ಕನ್ನಡಿಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ಫಲಪ್ರದ. ಮುಖ್ಯವಾಗಿ ಈ ದಿಕ್ಕು ಬಹಳ ಶಕ್ತಿಯುತವಾದ ಹಾಗೂ ಧನಾತ್ಮಕವಾಗಿದೆ.

ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುವಂತಹ ಉತ್ತಮ ಶಕ್ತಿಯನ್ನು ಉಳಿಸಿಕೊಳ್ಳಲು ಉದ್ಯಮಿಗಳು, ವ್ಯಾಪಾರಸ್ಥರು ನಗದು ಪೆಟ್ಟಿಗೆಯ ಪಕ್ಕದಲ್ಲಿ ಕನ್ನಡಿಗಳನ್ನು ಇರಿಸಬಹುದು, ಇದು ಸಂಪತ್ತನ್ನು ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಗ್ರಾಹಕರನ್ನು ಸೆಳೆಯುವುದು.ಉತ್ತಮ ಆರೋಗ್ಯವನ್ನು ಪಡೆಯಲು ಸ್ನಾನದ ಮನೆಯಲ್ಲಿರುವ ಕನ್ನಡಿಯು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು. ಇದು ಋಣಾತ್ಮಕ ಅಂಶಗಳನ್ನು ನಿವಾರಣೆ ಮಾಡುವುದಲ್ಲದೇ ಬೆಳಕನ್ನು ನೀಡುತ್ತದೆ.

ಡ್ರೆಸ್ಸಿಂಗ್‌ ರೂಂನಲ್ಲಿರುವ ಕನ್ನಡಿಯನ್ನು ನೆಲಕ್ಕಿಂತ 4ರಿಂದ 5 ಅಡಿ ಮೇಲೆ ಇರಿಸಬೇಕು.ಆಗ್ನೇಯವು ಬೆಂಕಿಯ ದಿಕ್ಕು ಆಗಿರುವುದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದರೆ ಜಗಳಗಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬಾರದು.ಕನ್ನಡಿಯನ್ನು ಎಂದಿಗೂ ಎದುರುಬದುರಾಗಿ ಇರಿಸಬಾರದು, ಇದು ವಿಶ್ರಾಂತಿಯಿಲ್ಲದ ಜೀವನವನ್ನು ಪ್ರತಿನಿಧಿಸುವುದು.

ವಾಸ್ತು ಪ್ರಕಾರ ಕನ್ನಡಿಯು ಉತ್ತರ ಅಥವಾ ಪೂರ್ವಕ್ಕೆ ಕಾಣಿಸುವಂತೆ ಇರಬಾರದು, ಇದು ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯನ್ನು ಪ್ರತಬಿಂಬಿಸುವುದು.ಉತ್ತಮ ಆರೋಗ್ಯ ಹಾಗೂ ಶಾಂತವಾದ ನಿದ್ದೆಯನ್ನು ಪಡೆಯಬೇಕೆಂದರೆ ಬೆಡ್‌ರೂಂನಲ್ಲಿ ಕನ್ನಡಿಯನ್ನು ಇಡಬಾರದು. ಕನ್ನಡಿಯನ್ನು ಇಟ್ಟರೂ ಅದು ಹಾಸಿಗೆಯನ್ನು ಪ್ರತಿಬಿಂಬಿಸುವಂತೆ ಇಡಬಾರದು.

ಕನ್ನಡಿಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಾಣುವಂತೆ ಇರಿಸಬಾರದು, ಇದು ಮನೆಯನ್ನು ಪ್ರವೇಶಿಸುವಂತಹ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.ಕನ್ನಡಿಯನ್ನು ಮನೆಯಲ್ಲಿ ಇಡುವಾಗ ಚೌಕ ಅಥವಾ ಆಯತಾಕಾರದಲ್ಲಿರುವ ಕನ್ನಡಿಯನ್ನು ಆಯ್ಕೆ ಮಾಡಿ, ಅಂಡಾಕಾರದ, ವೃತ್ತಾಕಾರದ ಕನ್ನಡಿಯು ಒಳ್ಳೆಯದಲ್ಲ.

ಬಾತ್‌ರೂಂನಲ್ಲಿ ಕನ್ನಡಿಯನ್ನು ಇಡುವಾಗ ಬೆಳಕು ಬರುವ ಕಡೆ ಇಡಿ, ಕತ್ತಲಿನಲ್ಲಿ ಇಡಬಾರದು.ಕನ್ನಡಿಗೆ ಸೂರ್ಯನ ಬೆಳಕು ನೇರವಾಗಿ ಬೀಳುವಂತಿದ್ದರೆ ಮನೆಯ ಮುಖ್ಯ ದ್ವಾರವು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವುದು. ಹಾಗಾಗಿ ಕನ್ನಡಿಯನ್ನು ಇಡುವಾಗ ಎಚ್ಚರಿಕೆಯನ್ನು ವಹಿಸಿ.ಒಡೆದ ಕನ್ನಡಿ, ಬಳಸದೇ ಇರುವಂತಹ ಕನ್ನಡಿ ಹಾಗೂ ಧೂಳು ಹಿಡಿದಿರುವ ಕನ್ನಡಿಯನ್ನು ಬಳಸಬೇಡಿ ಇದರಿಂದ ಮನೆಯಲ್ಲಿ ಇರುವ ಧನಾತ್ಮಕ ಶಕ್ತಿಗೂ ಅಡ್ಡಿಯುಂಟಾಗುವುದು.

ಡ್ರೆಸ್ಸಿಂಗ್‌ ಟೇಬಲ್‌ ಮೇಲೆ ಇಡುವಂತಹ ಕನ್ನಡಿಯು ಹಾಸಿಗೆಯನ್ನು ಪ್ರತಿಬಿಂಬಿಸಬಾರದು, ಇದು ಹಾಸಿಗೆಯ ಮೇಲೆ ಇರುವಂತಹ ವ್ಯಕ್ತಿಯನ್ನು ಪ್ರತಿಬಿಂಬಿಸುವಂತಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗುವುದು.ಕನ್ನಡಿಯನ್ನು ನೇತು ಹಾಕುವಾಗ ಸೀಲಿಂಗ್‌ನಲ್ಲಿ ಅಥವಾ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಇಟ್ಟರೆ ಋಣಾತ್ಮಕ ಶಕ್ತಿಯು ಪ್ರವೇಶಿಸುವುದು.

ಮನೆಯ ಕಿಟಕಿಯ ಮುಂದೆ ಸುಂದರವಾದ ಹಸಿರು ತೋಟ, ಗಾರ್ಡನ್‌ ಇದ್ದಲ್ಲಿ ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಹಸಿರು ತೋಟ ಪ್ರತಿಫಲಿಸುವಂತೆ ಕನ್ನಡಿಯನ್ನು ಇಟ್ಟರೆ ಒಳ್ಳೆಯದು. ಇದು ಧನಾತ್ಮಕ ಶಕ್ತಿಯನ್ನು ಹಾಗೂ ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡುವುದು.ಡೈನಿಂಗ್‌ ಟೇಬಲನ್ನು ಪ್ರತಿಬಿಂಬಿಸುವಂತೆ ಕನ್ನಡಿಯನ್ನು ಇಟ್ಟರೆ ಮನೆಯಲ್ಲಿ ಆಹಾರದ ಕೊರತೆ ಉಂಟಾಗದು ಜೊತೆಗೆ ಸಂಪತ್ತು ಕೂಡಾ ವೃದ್ಧಿಯಾಗುವುದು.ಮಕ್ಕಳ ಓದುವ ಕೋಣೆಯಲ್ಲಿ ಕನ್ನಡಿಯನ್ನು ಇಡಬಾರದು, ಇದು ಏಕಾಗ್ರತೆಗೆ ಭಂಗವುಂಟು ಮಾಡುವುದು.

Leave A Reply

Your email address will not be published.