ಕನಸಿನಲ್ಲಿ ಮೀನು ಬಂದರೆ!

If a fish comes in a dream!ಜ್ಯೋತಿಷ್ಯ, ಸ್ವಪ್ನ ಶಾಸ್ತ್ರ ಅಥವಾ ಶಕುನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ಯಾವುದೇ ಘಟನೆಯು ಆಳವಾದ ಅರ್ಥವನ್ನು ಹೊಂದಿದೆ. ಕನಸುಗಳ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎನ್ನುವುದರ ಬಗ್ಗೆ ಉಲ್ಲೇಖವಿದೆ. ವಿಶೇಷವಾಗಿ ಕನಸಿನಲ್ಲಿ ಯಾವುದೇ ಪ್ರಾಣಿ, ಮನುಷ್ಯ ಮತ್ತು ಪಕ್ಷಿ ಮುಂತಾದವುಗಳು ಕಾಣಿಸಿಕೊಂಡರೆ ಅದು ನಮ್ಮ ಭವಿಷ್ಯದ ಬಗ್ಗೆ ಹೇಳುತ್ತದೆ ಎನ್ನುವ ನಂಬಿಕೆಯಿದೆ. ಅದೇ ರೀತಿ ಕನಸಿನಲ್ಲಿ ಮೀನು ಕಂಡರೆ ಅದು ಯಾವೆಲ್ಲಾ ಶುಭ ಸೂಚನೆಯನ್ನು ನೀಡುತ್ತೆ ಗೊತ್ತೇ..?

​ಇದು ಶುಭ ಕನಸು–ಕನಸಿನಲ್ಲಿ ಮೀನುಗಳನ್ನು ನೋಡುವುದು ಬಹಳ ಮಂಗಳಕರ ಸಂಕೇತವಾಗಿದೆ. ನಂಬಿಕೆಗಳ ಪ್ರಕಾರ, ಮೀನನ್ನು ದೈವಿಕತೆ ಮತ್ತು ಶ್ರೇಷ್ಠತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

​ಕನಸಿನಲ್ಲಿ ಮೀನು–ಕನಸಿನಲ್ಲಿ ಮೀನನ್ನು ನೋಡಿದರೆ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ ಎಂದರ್ಥ.]ಇದು ಅಶುಭದ ಸೂಚನೆ–ಕನಸಿನಲ್ಲಿ ಶಾರ್ಕ್, ತಿಮಿಂಗಲ ಅಥವಾ ದೊಡ್ಡ ಜಾತಿಯ ಮೀನುಗಳನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ಸಾಲದ ಹೊರೆ ಮತ್ತು ದುಃಖವನ್ನು ಸೂಚಿಸುತ್ತದೆ.

​ಇದು ಧನಾಗಮನದ ಸೂಚನೆ–ನಿಮ್ಮ ಕನಸಿನಲ್ಲಿ ಡಾಲ್ಫಿನ್ ಮೀನುಗಳನ್ನು ನೋಡಿದರೆ ಶೀಘೃದಲ್ಲೇ ನಿಮ್ಮ ಅದೃಷ್ಟವು ಹೊಳೆಯುತ್ತದೆ ಮತ್ತು ನೀವು ಹಣವನ್ನು ಪಡೆಯಲಿದ್ದೀರಿ ಎಂದರ್ಥ.ವಿತ್ತೀಯ ಲಾಭ ತರುವ ಕನಸು–ಕನಸಿನಲ್ಲಿ ಮೀನು ಹಿಡಿಯುವಾಗ ದೊಡ್ಡ ಮೀನು ಬಲೆ ಅಥವಾ ಮುಳ್ಳಿನಲ್ಲಿ ಸಿಕ್ಕಿಹಾಕಿಕೊಂಡರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಭಾರಿ ವಿತ್ತೀಯ ಲಾಭಕ್ಕೆ ಕಾರಣವಾಗಬಹುದು.

​ದೇವರ ಆಶೀರ್ವಾದದ ಕನಸು–ಕನಸಿನಲ್ಲಿ ಮೀನು ಕಾಣಿಸಿಕೊಂಡರೆ, ಆ ವ್ಯಕ್ತಿಯು ಭಗವಂತನಿಂದ ಆಶೀರ್ವದಿಸಲ್ಪಡುತ್ತಾನೆ ಮತ್ತು ಅರ್ಧದಲ್ಲೇ ನಿಂತು ಹೋದ ಕೆಲಸವು ಪೂರ್ಣಗೊಳ್ಳುತ್ತದೆ ಎಂಬ ಸಂಕೇತವಾಗಿದೆ.​ಯಶಸ್ಸಿನ ಸೂಚನೆ–ಕನಸಿನಲ್ಲಿ ಸಣ್ಣ ಮತ್ತು ಬಣ್ಣಬಣ್ಣದ ಮೀನುಗಳನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಭವಿಷ್ಯದಲ್ಲಿ ಯಶಸ್ಸು ಮತ್ತು ಸಂತೋಷ ಇರುತ್ತದೆ ಎಂಬುದರ ಸಂಕೇತವಾಗಿದೆ. ಇದು ಮಂಗಳಕರ ಘಟನೆಗಳ ಸಂಕೇತವೂ ಆಗಿದೆ.

​ನಕಾರಾತ್ಮಕ ಶಕ್ತಿಗಳ ಸಂಕೇತ–ಒಂದು ಕನಸಿನಲ್ಲಿ ದೊಡ್ಡ ಮತ್ತು ಭಯಾನಕ ಮೀನುಗಳನ್ನು ನೋಡಿದರೆ ಇದರರ್ಥ ಆ ವ್ಯಕ್ತಿಯೊಳಗೆ ನಕಾರಾತ್ಮಕ ಶಕ್ತಿಗಳು ಬೆಳೆಯುತ್ತವೆ ಎಂದರ್ಥ.

Leave a Comment