ಬಂಗಾರ ಅಭಿವೃದ್ಧಿ ಆಗಲು ಏನು ಮಾಡಬೇಕು? ಬಂಗಾರ ಖರೀದಿಸಲು ಯಾವ ದಿನ ಶ್ರೇಷ್ಠ?

0 6

What is the best day to buy gold?ಬಂಗಾರ ಖರೀದಿ ಮಾಡಬೇಕು ಎಂದರೆ ಶುಭ ದಿನ ಶುಭ ಲಗ್ನ ಶುಭ ಮುಹೂರ್ತ ಎಂದು ನೋಡಿ ಖರೀದಿ ಮಾಡಿದರೆ ಬಂಗಾರ ಶಾಶ್ವತವಾಗಿ ಇರುತ್ತವೆ.ಬಂಗಾರ ಎಂದರೆ ಮಹಾಲಕ್ಷ್ಮಿ ಎಂದು ಭಾವಿಸುತ್ತಾರೆ.ಬಂಗಾರ ಖರೀದಿ ಮಾಡುವಾಗ ಅಶ್ವಿನಿ ನಕ್ಷತ್ರದಲ್ಲಿ ಖರೀದಿ ಮಾಡಿದರೆ ತುಂಬಾನೇ ಒಳ್ಳೆಯದು ಮತ್ತು ಲಕ್ಷ್ಮಿಗೆ ಪ್ರಿಯ ಆಗಿರುವ ಶುಕ್ರವಾರ ದಿನಗಳಲ್ಲಿ ನೀವು ಬಂಗಾರವನ್ನು ಖರೀದಿ ಮಾಡಿದರೆ ತುಂಬಾನೇ ಶ್ರೇಷ್ಠ ಮತ್ತು ಶಾಶ್ವತವಾಗಿ ನೆಲೆಸುತ್ತದೆ.

ಬಂಗಾರ ಖರೀದಿ ಮಾಡುವುದಕ್ಕೆ ಪಂಚಮಿ ತಿಥಿ ಅಶ್ವಿನಿ ನಕ್ಷತ್ರ ಶುಕ್ರವಾರದ ದಿನ ಬಂಗಾರವನ್ನು ಖರೀದಿ ಮಾಡಿದರೆ ನಿಮಗೆ ಮನೆಗೆ ತಂದಿರುವ ಬಂಗಾರ ತುಂಬಾನೇ ಅಭಿವೃದ್ಧಿ ಆಗುತ್ತದೆ ಮತ್ತು ದ್ವಿಗುಣ ಆಗುತ್ತದೆ. ಬಂಗಾರ ತೆಗೆದುಕೊಂಡ ತಕ್ಷಣ ಅಮ್ಮನವರ ದೇವರ ಬಳಿ ತೆಗೆದುಕೊಂಡು ಹೊಗಿ ಒಂದು ಸರಿ ಅರ್ಚನೇ ಮಾಡಿ ಕುಂಕುಮ ತೆಗೆದುಕೊಂಡು ಬಂದು ನೀವು ತಂದಿರುವ ಬಂಗಾರವನ್ನು ದೇವರ ಬಳಿ ಇಟ್ಟು ಪೂಜೆ ಮಾಡಿ ಧರಿಸಿದರೆ ನಿಮಗೆ ತುಂಬಾ ಅಭಿವೃದ್ಧಿ ಆಗುತ್ತದೆ.

ನಿಮ್ಮ ಮನೆಗೆ ಬಂಗಾರ ಬರುವುದಕ್ಕೆ ಏನು ಮಾಡಬೇಕು ಎಂದರೆ..?-ಸಾಧ್ಯವಾದರೆ ಶುಕ್ರವಾರ ಅಥವಾ ಅಶ್ವಿನಿ ನಕ್ಷತ್ರ ಇರುವ ದಿನಗಳಲ್ಲಿ ನಿಮ್ಮ ಶಕ್ತಿ ಅನುಸಾರವಾಗಿ ಒಂದು ಪುಟ್ಟ ಬೆಳ್ಳಿ ಬೋಟ್ಟಲು ಅಥವಾ ಬೆಳ್ಳಿ ವಿಗ್ರಹವನ್ನು ತಂದು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದಕ್ಕೆ ಪ್ರಾರಂಭ ಮಾಡಿ. ಇದರಿಂದ ಸಾಕಷ್ಟು ಅಭಿವೃದ್ಧಿ ಆಗುತ್ತದೆ.

ಇನ್ನು ಅಡ ಇಟ್ಟಿರುವ ಬಂಗಾರವನ್ನು ತಂದ ತಕ್ಷಣ ನೇರವಾಗಿ ಧರಿಸಬಾರದು. ಮೊದಲು ಶುಭ್ರವಾದ ನೀರಿನಿಂದ ಶುದ್ಧಗೊಳಿಸಿ ಅರಿಶಿನದಿಂದ ತೋಳೆದು. ನಂತರ ಅರಿಶಿನ ಬಟ್ಟೆಗೆ ಒಂದು ಇಡೀ ಉಪ್ಪು ಹಾಕಿ ಗಂಟು ಕಟ್ಟಿ ಹಾಗು ನೀವು ತಂದಿರುವ ಬಂಗಾರವನ್ನು ಇದರ ಜೊತೆ ಇಟ್ಟು ದೇವರ ಮುಂದೇ ಇಟ್ಟು ಮೂರು ದಿನ ಪೂಜೆ ಮಾಡಿ. ನಂತರ ಅದನ್ನು ಉಪ್ಪಿನ ಸಮೇತ ಬೀರುವಿನಲ್ಲಿ ಇಡೀ.ಈ ರೀತಿ ಮಾಡಿದರೆ ಮತ್ತೆ ಬಂಗಾರ ಇಡುವ ಪ್ರಸಂಗ ಕಂಡಿತಾವಾಗಿ ಬರುವುದಿಲ್ಲ.

ನೀವು ತಂದಿರುವ ಬಂಗಾರ ಮತ್ತು ಅಡ ಇಟ್ಟಿರುವ ಬಂಗಾರ ಶಾಶ್ವತವಾಗಿ ನಿಮ್ಮಲ್ಲಿ ನೆಲೆಸಬೇಕು ಎಂದರೆ ತೆಗೆದುಕೊಂಡು ಬಂದ ಬಂಗಾರವನ್ನು ದೇವರ ಮನೆಯಲ್ಲಿ ಇಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡುವಾಗ 108 ಮಲ್ಲಿಗೆ ಹೂವು ತೆಗೆದುಕೊಳ್ಳಿ ಲಕ್ಷ್ಮಿಯ ಅಷ್ಟೊತ್ತರ ಒಂದೊಂದೇ ಹೇಳಿಕೊಂಡು ನೀವು ತಂದಿರುವ ಬಂಗಾರದ ಮೇಲೆ ಹಾಕಬೇಕು. ಈ ರಿತು ಮಾಡಿದರೆ ಲಕ್ಷ್ಮಿಗೂ ಖುಷಿ ಆಗುತ್ತದೆ ಮತ್ತು ನಿಮ್ಮ ಬಂಗಾರ ಶಾಶ್ವತವಾಗಿ ಉಳಿಯುತ್ತದೆ.

Leave A Reply

Your email address will not be published.