ನವ ವಧು ವರರಿಗೆ ಅರುಂಧತಿ ನಕ್ಷತ್ರ ತೋರಿಸೋದು ಯಾಕೆ? ಯಾರಿ ಈ ಅರುಂಧತಿ?

ಮದುವೆಯಾದ ಪ್ರತಿಯೊಂದು ಜೋಡಿಗೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಅದ ತಕ್ಷಣ ಮದ್ಯದಲ್ಲಿ ಸಂಬಂಧ ಮುರಿಯುವುದು ಹಾಗೂ ಮಸಣ ಸೇರುವುದು. ಹಾಗಾಗಿ ಮದುವೆ ಅದ ಮೇಲೆ ಯಾವುದೇ ರೀತಿ ತೊಂದರೆ ಆಗಬಾರದು ಎಂದು ಮದುವೆ ಸಮಾರಂಭದಲ್ಲಿ ಅರುಂಧತಿ ನಕ್ಷತ್ರವನ್ನು ತೋರಿಸುವುದು. ಮದುವೆಗೂ ಅರುಂಧತಿಗೆ ಏನು ವ್ಯತ್ಯಾಸ ಎಂದು ತಿಳಿಯಲು ಈ ಪುರಾಣ ಕಥೆಯನ್ನು ತಿಳಿದುಕೊಳ್ಳಿ.

ಅರುಂಧತಿ ಸಪ್ತರ್ಷಿ ಗಳಲ್ಲಿ ಒಬ್ಬರಾದ ವಸಿಷ್ಠರ ಹೆಂಡತಿ. ಹೆಂಡತಿಯನ್ನು ಅರ್ಧಂಗಿ ಎಂದು ಹೇಳುತ್ತಾರೆ.ಇವಳು ಕರ್ದಾಮ ಹಾಗೂ ದೇಹಮುನಿ ದಂಪತಿಯ ಮಗಳು. ಕರ್ದಾಮ ವೇದಾದ ಪರಂಗತ. ಅವನ ಆಶ್ರಮದಲ್ಲಿ ಸಾವಿರಾರು ಮಕ್ಕಳು ವಿದ್ಯೆಯನ್ನು ಕಲಿಯುತ್ತಿದ್ದರು. ಅರುಂಧತಿಗೂ ವೇದವಿದ್ಯೆಯನ್ನು ಕಲಿಯಲು ಆಸೆಯಾಯಿತು. ತಾಯಿ ಹೇಳಿದ ಮನೆ ಕೆಲಸವನ್ನು ಬೇಗ ಮುಗಿಸಿ ತಂದೆ ಕಲಿಸುತಿದ್ದ ಕಡೆ ಹೋಗಿ ಕುಳಿತುಕೊಳ್ಳುತ್ತಿದ್ದಳು.

ಶ್ರದ್ಧಾಭಕ್ತಿಯಿಂದ ತಂದೆಯ ಪಾಠವನ್ನು ಕಲಿತೂಬಿಟ್ಟಳು. ತಂದೆ ಹೇಳುವ ಪುರಾಣ ಪ್ರವಚನಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದಳು. ಅರ್ಥವಾಗದೆ ಇದ್ದರೆ ಪ್ರಶ್ನೆ ಮಾಡಿ ತಿಳಿದುಕೊಳ್ಳುತ್ತಿದ್ದರು. ಅರುಂಧತಿ ಯುಕ್ತ ವಯಸ್ಸಿಗೆ ಬಂದಾಗ ಅವಳನ್ನು ವಸಿಷ್ಠರಿಗೆ ಮದುವೆಯನ್ನು ಮಾಡಲಾಯಿತು ಮತ್ತು ಅರುಂಧತಿ ಗಂಡನ ಆಶ್ರಮದಲ್ಲಿ ಕಲಿಕೆಯನ್ನು ಮುಂದುವರಿಸಿದಳು.ತನ್ನ ಗೃಹಿಣಿ ಧರ್ಮಕ್ಕೆ ಚುತಿ ಬರಬಾರದು ಎಂದು ಸಮಸ್ತ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿಕೊಂಡೆ ಕಲಿಕೆಯಲ್ಲೂ ಆಸಕ್ತಿ ತೋರುತ್ತಾ ಹೋದರು.

ವಸಿಷ್ಠರು ತಮ್ಮ ಶಿಷ್ಯರಿಗೆ ಬೋಧಿಸುವ ಪ್ರವಚನವನ್ನು ಕೇಳುತ್ತಿದ್ದಳು ಅರುಂಧತಿ. ಹೀಗೆ ವಸಿಷ್ಠರು ಪ್ರವಚನವನ್ನು ಮಾಡುವಾಗ ಮನೆಗೆಲಸ ಮುಗಿಸಿ ಪ್ರವಚನಕ್ಕೆ ಬಂದ ಅರುಂಧತಿ ನೀವು ಮಾಡುತ್ತಿರುವ ಪ್ರವಚನವನ್ನು ನಾನು ಮುಂದುವರಿಸಲೇ ಎಂದು ಕೇಳಿಕೊಂಡರು. ಬ್ರಹ್ಮಜ್ಞಾನ ವಸಿಷ್ಠರು ಒಪ್ಪಿಗೆಯನ್ನು ಕೊಟ್ಟರು. ಪ್ರವಚನ ಮುಂದುವರೆಸಿ ಶಿಷ್ಯರು ಕೇಳಿದ ಪ್ರೆಶ್ನೆಗೆ ಸರಿಯಾದ ಉತ್ತರ ಕೊಟ್ಟು ಮುಗಿಸಿದಳು.ಪತಿಗೆ ಪತ್ನಿಯ ಜಾಣತನ ನೋಡಿ ಸಂತಸ ಆಯಿತು.

ಅರುಂಧತಿ ನಿನ್ನನ್ನು ನನ್ನ ಅರ್ಧಾಂಗಿ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ. ಅರ್ಧಂಗಿ ಹೆಸರನ್ನು ಸಾರ್ಥಕಗೊಳಿಸಿರುವೆ ಎಂದು ಹೊಗಳಿದರು.ವಸಿಷ್ಠರು ಹೊರಗೆ ಹೋದಾಗ ಶಿಷ್ಯರ ಜವಾಬ್ದಾರಿ ಅರುಂಧತಿ ನೋಡಿಕೊಳ್ಳುತಿದ್ದಳು. ಅದರೆ ಹೊರಗೆ ಹೋದಾಗ ಗಂಡನ ಯೋಗ ಕ್ಷೇಮದ ಬಗ್ಗೆ ಪಾರ್ವತಿ ಧ್ಯಾನ ಮಾಡುತ್ತಿದ್ದಳು ಹಾಗೂ ವಸಿಷ್ಟರು ಕೂಡ ಹೆಂಡತಿ ಬಗ್ಗೆ ಯೋಚನೇ ಮಾಡುತ್ತಿದ್ದರು.ಇದನ್ನು ನೋಡಿದ ಶಿವನ ಮನಸ್ಸು ಕರಗಿತು.ಅದಕ್ಕಾಗಿ ಆಶ್ರಮದ ಕಾವಲಿಗೆ ಎಂದು ಹೋರಟ ಪರಶಿವ.

ವಸಿಷ್ಠರು ದೇಶ ಪಠನೆಗೆ ಹೋದಾಗ ಚಿಕ್ಕ ಬಾಲಕ ಶಿಷ್ಯ ವೃತ್ತಿ ಯಾಚಿಸಿ ಆಶ್ರಮಕ್ಕೆ ಬಂದ.ಆ ಬಾಲಕನನ್ನು ಸ್ವಾಗತಿಸಿದ ಅರುಂಧತಿ ವಸಿಷ್ಠರು ಆಶ್ರಮದಲ್ಲಿ ಇಲ್ಲಾ ಅವರು ಬರುವವರೆಗೂ ನಾನೆ ಪಾಠವನ್ನು ಹೇಳಿ ಕೊಡುತ್ತೇನೆ ಎಂದು ಹೇಳಿದಾಗ ಆ ಬಾಲಕ ಒಪ್ಪಿಕೊಂಡು ಆಶ್ರಮವಾಸಿ ಆಗಿದ್ದ.ಅದರಂತೆ ಅರುಂಧತಿ ತನಗೆ ಗೊತ್ತಿರುವ ಸಮಸ್ತ ವಿದ್ಯೆಯನ್ನಲ್ಲ ನಿರ್ವಚನೆಯಿಂದ ಬಾಲಕನಿಗೆ ದಾರೆಯನ್ನು ಎರೆದಳು.ಆ ಬಾಲಕ ಸಹ ಆಶ್ರಮದಲ್ಲಿ ಶಿಷ್ಯರು ಮಾಡುವ ಎಲ್ಲಾ ಕೆಲಸವನ್ನು ಮಾಡುತ್ತಿದ್ದ.ಅರುಂಧತಿ ಸೇವೆಯನ್ನು ಕೂಡ ಮಾಡುತ್ತಿದ್ದ.

ವಸಿಷ್ಠರು ವಾಪಾಸ್ ಬಂದಾಗ ಅರುಂಧತಿ ಆ ಬಾಲಕನನ್ನು ತೋರಿಸಿ ವಿಷಯವನ್ನೆಲ್ಲ ಹೇಳಿದರೂ. ವಸಿಷ್ಠರು ಆ ಬಾಲಕನನ್ನು ನೋಡಿ ಚಿಂತಿತಾರಾದರು ಏಕೆಂದರೆ ಆ ಬಾಲಕ ಮಾರು ವೇಷದಲ್ಲಿ ಇದ್ದ ಪರಮೇಶ್ವರ ಆಗಿದ್ದ. ವಸಿಷ್ಠರು ಇಲ್ಲದೆ ಇದ್ದಾಗ ಅರುಂಧತಿ ಹಾಗೂ ಆಶ್ರಮದ ರಕ್ಷಣೆಯನ್ನು ಮಾಡುವುದಕ್ಕೆ ಬಾಲಕನ ವೇಷವನ್ನು ಧರಿಸಿ ಬಂದಿದ್ದ ಜಗದೀಶ.ವಿಷಯ ತಿಳಿದ ಮೇಲೆ ಶಿವ ತನ್ನ ನಿಜ ರೂಪಕ್ಕೆ ಬಂದ.ಅರುಂಧತಿ ಮತ್ತು ವಸಿಷ್ಟರ ಪರಸ್ಪರ ಕಾಳಜಿಯನ್ನು ನೋಡಿ ಈಶ್ವರ ಸುಪ್ರಿತನಾದ.ನೀವು ಇಬ್ಬರು ಸದಕಾಲ ಜೊತೆಯಾಗಿ ಇರಿ ಎಲ್ಲಾ ದಂಪತಿಗಳಿಗೆ ಆಧರ್ಶ ಆಗಿ ಇರಿ ಎಂದು ಆರೈಸಸಿದ. ಹೀಗಾಗಿ ವಿವಾಹಿತರು ವಸಿಷ್ಟರ ಅರುಂಧತಿ ಹಾಗೆ ಪರಸ್ಪರ ಒಗ್ಗಟೀನಿಂದ ಪ್ರೀತಿಯಿಂದ ಇರಬೇಕು ಎಂದು ನವ ವಧು ವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸಲಾಗುತ್ತದೆ.

https://youtu.be/9hN0D5vPmNI

Leave a Comment