ಹೆಂಗಸರು ಜಡೆ ಹಾಕಿಕೊಳ್ಳುವಾಗ ಈ ನಿಯಮವನ್ನು ಪಾಲಿಸಿದರೆ ಲಕ್ಷ್ಮಿ ನಿಮ್ಮನ್ನು ಖಂಡಿತ ಇಷ್ಟ ಪಡುತ್ತಾರೆ!

ಮಹಿಳೆಯರು ಮನೆಯಲ್ಲಿ ಜಡೆಯನ್ನು ಹಾಕಿಕೊಳ್ಳುವಾಗ ದೇವರ ಮನೆ ಅಡುಗೆ ಮನೆ ಅಥವಾ ಮುಖ್ಯದ್ವಾರದ ಕೊಣೆಯ ಬಳಿ ಯಾವುದೇ ಕಾರಣಕ್ಕೂ ತಲೆ ಬಾಚಿ ಜಡೆಯನ್ನು ಹಾಕಿಕೊಳ್ಳಬಾರದು ಹಾಗೂ ಓಡಾಡುತ್ತಾ ಜಡೆ ಹಾಕಿಕೊಳ್ಳಬಾರದು ಮತ್ತು ಮುಖ್ಯದ್ವಾರದ ಬಳಿ ನಿಂತು ಜಡೆ ಹಾಕಿಕೊಳ್ಳಬಾರದು ಈ ರೀತಿಯಾಗಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಜೇಷ್ಠಾದೇವಿ ಅಂದರೆ ದರಿದ್ರ ದೇವಿ ವಾಸ ಆಗುತ್ತಾಳೆ ಹಾಗಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹ ಆಗುತ್ತದೆ.

ಗೆಳೆಯರೇ ತಲೆ ಬಾಚಿಕೊಂಡುಜೆಡಿ ಹಾಕಿಕೊಳ್ಳುವಾಗ ಮಲಗುವ ಕೋಣೆಯಲ್ಲಿ ಕುಳಿತುಕೊಂಡು ಜೆಡೆ ಹಾಕಿಕೊಳ್ಳಬೇಕು ಇದು ಮಂಗಳಕಾರಕ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗಾಗಿ ಮಹಿಳೆಯರು ತಪ್ಪದೇ ನಿಯಮವನ್ನು ಪಾಲನೆ ಮಾಡಬೇಕು. ಹಾಗೂ ತಲೆ ಬಾಚಿಕೊಳ್ಳುವಾಗ ನೆಲಕ್ಕೆ ಬಿದ್ದ ಕೂದಲನ್ನು

ಯಾವುದೇ ಕಾರಣಕ್ಕೂ ತುಳಿಯಬಾರದು ಇದರಿಂದಾಗಿ ಮನೆಯಲ್ಲಿ ದರಿದ್ರ ದೇವತೆ ಆಹ್ವಾಹನೆ ಮಾಡಿಕೊಂಡಂತಾಗುತ್ತದೆ ಸಿಕ್ಕು ಬಿಡಿಸಿದ ಕೂದಲನ್ನು ತೆಗೆದುಕೊಂಡು ಕಸದ ಬುಟ್ಟಿಗೆ ಹಾಕಬೇಕು ಇದರಿಂದಾಗಿ ಲಕ್ಷ್ಮಿ ಅನುಗ್ರಹ ಮನೆಗೆ ಉತ್ತಮ ರೀತಿಯಲ್ಲಿ ಆಗುತ್ತದೆ ಅದೇ ರೀತಿ ಹೆಚ್ಚಿನ ಸಮಯ ಬಾಚಣಿಕೆಯಲ್ಲಿ ಕೂದಲನ್ನು ಬಿಡುವುದರಿಂದ ಸ್ವತಹ ಮಹಿಳೆಯರೇ ಮನೆಯಲ್ಲಿರುವ ಕುಟುಂಬದ ಸದಸ್ಯರ ಕೆಲಸಕ್ಕೆ ವಿಘ್ನಗಳನ್ನು ತಂದಂತೆ ಆಗುತ್ತದೆ ನಷ್ಟ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಸಿಕ್ಕು ಬಿಡಿಸಿದ ಕೂದಲನ್ನು ಕೈಯಲ್ಲಿ ಇಟ್ಟುಕೊಳ್ಳುವುದರಿಂದ ಸಂತಾನವೃದ್ಧಿಗೆ ಅಡ್ಡಿ ಆತಂಕಗಳು ಎದುರಾಗುತ್ತದೆ ದಾಂಪತ್ಯದಲ್ಲಿ ಅನ್ಯೂನತೆ ಕಡಿಮೆ ಆಗುತ್ತದೆ ಹಾಗಾಗಿ ಈ ರೀತಿ ಕೂದಲನ್ನು ಹಿಡಿದು ಕೊಳ್ಳಬಾರದು. ಗೆಳೆಯರೇ ಮಹಿಳೆಯರು ತಲೆ ಸ್ನಾನವನ್ನು ಮಾಡುವಾಗ ಶುಕ್ರವಾರ ಹಾಗೂ ಮಂಗಳವಾರ ಯಾವುದೇ ಕಾರಣಕ್ಕೂ ತಲೆ ಸ್ನಾನವನ್ನು ಮಾಡಬಾರದು

ಏಕೆಂದರೆ ಮಹಿಳೆಯರ ಸುಖ ಸಂತೋಷಕ್ಕೆ ಹಾನಿ ಉಂಟಾಗುತ್ತದೆ ದಾಂಪತ್ಯದಲ್ಲಿ ನೆಮ್ಮದಿ ಇರುವುದಿಲ್ಲ ಹಾಗಾಗಿ ಶುಕ್ರವಾರ ಹಾಗೂ ಮಂಗಳವಾರ ತಲೆ ಸ್ನಾನವನ್ನು ಮಾಡಬಾರದು ಒಂದು ವೇಳೆ ಶುಕ್ರವಾರದಿಂದ ತಲೆ ಸ್ನಾನ ಮಾಡುವಾಗ ಶಾಂಪು ಸೀಗೆಕಾಯಿ ಹಾಕಿಕೊಂಡು ತಲೆಸ್ನಾನ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಗೆಳೆಯರೇ ತಲೆ ಸ್ನಾನವನ್ನು ಶನಿವಾರದಂದು ಮಾಡಿದರೆ ತುಂಬಾ ಒಳ್ಳೆಯದು

ಅಷ್ಟ ಐಶ್ವರ್ಯ ವೃದ್ಧಿಯಾಗುವ ಯೋಗ ಫಲಗಳು ನಿಮಗೆ ದೊರೆಯುತ್ತವೆ ಇನ್ನು ಗೆಳೆಯರೆ ಮುಖ್ಯವಾಗಿ ತಲೆ ಸ್ನಾನವನ್ನು ಮಾಡಿದಾಗ ಕೂದಲನ್ನು ಬಿಟ್ಟುಕೊಂಡು ಮನೆಯ ತುಂಬಾ ಓಡಾಡಬಾರದು ಏಕೆಂದರೆ ಕೂದಲನ್ನು ಬಿಡುವುದರಿಂದ ದುಷ್ಟಶಕ್ತಿಗಳ ಪ್ರಭಾವ ನಮ್ಮ ಮೇಲೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಇದರಿಂದ ಸಾಕಷ್ಟು ಹಾನಿ ಉಂಟಾಗುತ್ತದೆ ಮನೆಯ ಅಭಿವೃದ್ಧಿಗೆ ಕೂಡ ಇದು ಒಳ್ಳೆಯದಲ್ಲ ಹಾಗೂ

ತಲೆಕೂದಲನ್ನು ಬಿಟ್ಟುಕೊಂಡು ದೇವರ ಪೂಜೆ ಮಾಡುವುದು ಹಾಗೂ ದೇವರ ದರ್ಶನವನ್ನು ಮಾಡಬಾರದು ತಲೆ ಸ್ನಾನದ ನಂತರ ಸ್ವಲ್ಪ ತಲೆಯನ್ನು ಆರಿಸಿಕೊಂಡು ಜಡೆ ಹಾಕಿಕೊಳ್ಳಬೇಕು ನಂತರ ದೇವರ ದರ್ಶನ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ. ಗೆಳೆಯರೇ ಮಹಿಳೆಯರು ಈ ಕೆಲವೊಂದು ಮುಖ್ಯವಾದ ನಿಯಮಗಳನ್ನು ಪಾಲನೆ ಮಾಡುವುದರಿಂದ ಖಂಡಿತವಾಗಿಯೂ ಮನೆಯಲ್ಲಿ ಲಕ್ಷ್ಮಿ ಅನುಗ್ರಹ ಆಗುತ್ತದೆ ಹಾಗೂ ಹಾಗೂ ಮನೆಯ ಸದಸ್ಯರು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಸಂಪೂರ್ಣವಾದ ಜಯವನ್ನು ಕಾಣುತ್ತಾರೆ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ.

Leave A Reply

Your email address will not be published.