ನುಗ್ಗೆಸೊಪ್ಪು ತಿಂತಿರಾ…? ನೂರಾರು ಸಮಸ್ಯೆಗಳಿಗೆ ದಿವ್ಯ ಔಷಧಿ …!!

ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಕಾಯಿ ಪರಿಹಾರವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇದರ ಉಲ್ಲೇಖವಿದೇ. ದೇಹದಲ್ಲಿ ಕಿಡ್ನಿಗಳು ಮತ್ತು ಇನ್ನಿತರ ಕೆಲವೊಂದು ಅಂಗಗಳು ತಮ್ಮ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ನುಗ್ಗೆ ಕಾಯಿಯಲ್ಲಿ ಕಂಡುಬರುವಂತಹ ಕೆಲವೊಂದು ಅಂಶಗಳನ್ನು ಸ್ವೀಕರಿಸುತ್ತವೆ. ನುಗ್ಗೆಕಾಯಿ ಮತ್ತಷ್ಟು ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.

1, ಮಧುಮೇಹ ಸಮಸ್ಯೆ ಇರುವವರು ನುಗ್ಗೆಕಾಯಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.
2, ನುಗ್ಗೆಕಾಯಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆಯಾಗದಂತೆ ತಡೆಯುವುದು ಮಾತ್ರವಲ್ಲದೆ ಕಿಡ್ನಿಗಳಲ್ಲೂ ಕಲ್ಲುಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.

3, ಮೂತ್ರಪಿಂಡಗಳಿಗೆ ದೇಹದಲ್ಲಿನ ಪ್ರಮುಖ ಕೆಲಸವೆಂದರೆ ದೇಹವನ್ನು ಸ್ವಚ್ಛವಾಗಿ ಇಡುವುದು.ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗೆ ಹಾಕುವುದು.

4, ರಕ್ತ ಶುದ್ಧಿ ಮಾಡುವುದಕ್ಕೆ ಇದು ಹೆಚ್ಚು ಸಹಾಯ ಮಾಡುವುದು ಮಾತ್ರವಲ್ಲದೇ ಕಿಡ್ನಿ ಭಾಗದಲ್ಲಿ ಯಾವುದೇ ವಿಷಕಾರಿ ಅಂಶಗಳ ಒತ್ತಡ ಇಲ್ಲದಂತೆ ನೋಡಿಕೊಳ್ಳುತ್ತದೇ. ಇದರಿಂದ ರಕ್ತನಾಳಗಳು ಕೂಡ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಡೀ ದೇಹದ ತುಂಬಾ ಸರಾಗವಾದ ರಕ್ತಸಂಚಾರವನ್ನು ಉಂಟು ಮಾಡುತ್ತದೆ.

5, ನುಗ್ಗೆಕಾಯಿ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಅಂಶದ ಜೊತೆಗೆ ಕಬ್ಬಿಣ ಮತ್ತು ಇನ್ನಿತರ ವಿಟಮಿನ್ ಅಂಶಗಳು ಕೂಡ ನಿಮ್ಮ ದೇಹಕ್ಕೆ ಸಿಗುತ್ತದೆ.ಇದರಿಂದ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ ಮತ್ತು ಮೂಳೆಗಳ ಬಲ ಕೂಡ ಅಭಿವೃದ್ಧಿಯಾಗುತ್ತದೆ.

6, ಇನ್ನು ನುಗ್ಗೆಕಾಯಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಪೌಷ್ಟಿಕ ಸತ್ವಗಳ ಪ್ರಮಾಣ ಹೆಚ್ಚುತ್ತದೆ. ಬೇಡದ ಅಂಶಗಳು ನಿಮ್ಮ ಕಿಡ್ನಿಯಿಂದ ಹೊರಹೋಗುತ್ತದೆ. ಈಗಾಗಿ ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡಲು ನೀವು ಹಾಗಾಗ ನುಗ್ಗೆ ಸೊಪ್ಪು ಅಥವಾ ನುಗ್ಗೆಕಾಯಿ ಸೇವನೆಯನ್ನು ಮಾಡಬೇಕು.

Leave a Comment