ವಾಸ್ತು ಪ್ರಕಾರ ನವಿಲುಗರಿ ಮನೆಯಲ್ಲಿಟ್ಟರೆ ಆಗಬಹುದಾದ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ….!

0 3

ವಾಸ್ತು ಶಾಸ್ತ್ರದ ಪ್ರಕಾರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕೂಡ ಮಾಡುತ್ತದೆ. ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಕ್ಕೆ ಸಾಧ್ಯ ಇಲ್ಲ. ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ.ಹಾಗಾಗಿ ಪ್ರತಿಯೊಬ್ಬರು ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪಾಸಿಟಿವ್ ಎನರ್ಜಿ ಇರುತ್ತದೆ.ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.

ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕು ಎಂದರೆ ಓದುವ ಟೇಬಲ್ ಹತ್ತಿರ 5 ನವಿಲು ಗರಿಯನ್ನು ಇಡಬೇಕು. ಇದರಿಂದ ಮಕ್ಕಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ವಿದ್ಯಾಭ್ಯಾಸದಲ್ಲಿ ಅರಿವು ಹೆಚ್ಚಾಗುತ್ತದೆ. ಸರಸ್ವತಿಗೆ ನವಿಲುಗರಿ ಎಂದರೆ ತುಂಬಾ ಇಷ್ಟ. ಗುರುವಾರದ ದಿನ ನವಿಲುಗರಿಯನ್ನು ತಂದು ಇಟ್ಟುಕೊಳ್ಳುವುದರಿಂದ ತುಂಬಾ ಒಳ್ಳೆಯದು.ರಾತ್ರಿ ಮಲಗಿದಾಗ ಕೆಲವು ಮಕ್ಕಳು ಹೆದರುತ್ತಾರೆ. ಈ ಸಮಯದಲ್ಲಿ ಮಕ್ಕಳು ಮಲಗುವ ದಿಂಬಿನ ಕೆಳಗೆ ನವಿಲು ಗರಿ ಇಡುವುದರಿಂದ ಅವರಿಗೆ ಕೆಟ್ಟ ಕನಸು ಬೀಳುವುದಾಗಲಿ, ಭಯ ಪಡುವುದು ಕೂಡ ಕಡಿಮೆ ಆಗುತ್ತದೆ. ಗಂಡ-ಹೆಂಡತಿ ಪ್ರತಿದಿನ ಜಗಳ ಆಡುತ್ತಿದ್ದಾರೆ ಎರಡು ನವಿಲುಗರಿಯನ್ನು ಇಟ್ಟು ಪೂಜೆ ಮಾಡುಬೇಕು. ಮಲಗುವ ಕೋಣೆಯಲ್ಲಿ ಪೂರ್ವದಿಕ್ಕಿನಲ್ಲಿ ನವಿಲುಗರಿಯನ್ನು ಇಟ್ಟರೆ ತುಂಬಾ ಒಳ್ಳೆಯದು.

ನೀವು ದುಡ್ಡು ಕೊಟ್ಟಿದ್ದು ರಿಟರ್ನ್ ಬರದೇ ಇದ್ದಾರೆ ದಕ್ಷಿಣ ದಿಕ್ಕಿನ ಗೋಡೆಗೆ ನವಿಲು ಗರಿಯನ್ನು ಇಡುವುದರಿಂದ ನಿಮ್ಮ ದುಡ್ಡಿನ ಸಮಸ್ಸೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಸುಖ, ಸಮೃದ್ಧಿ, ಲಕ್ಷ್ಮಿ, ಸಂತೋಷ ಹೆಚ್ಚಾಗಬೇಕು ಎಂದರೆ ಉತ್ತರ ದಿಕ್ಕಿಗೆ ಒಂದು ನವಿಲು ಗರಿಯನ್ನು ಇಡಬೇಕು. ಈ ರೀತಿ ಇಡುವುದರಿಂದ ನಿಮ್ಮಲ್ಲಿ ಯಾವುದೇ ಒಂದು ರೀತಿಯ ಕಷ್ಟಗಳು ಕಡಿಮೆ ಆಗಿ ಲಕ್ಷ್ಮಿ ಅನುಗ್ರಹ ಹೆಚ್ಚಾಗುತ್ತಾ ಹೋಗುತ್ತದೆ. ಈಶಾನ್ಯ ದಿಕ್ಕಿಗೆ ನವಿಲುಗರಿಗಳನ್ನು ಇಡುವುದರಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವುದಿಲ್ಲ. ಮುಖ್ಯವಾಗಿ 4 ನವಿಲು ಗರಿಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

ಹಣದ ಅರಿವು ಹೆಚ್ಚಾಗಬೇಕು ಎಂದರೆ ಕೃಷ್ಣ ದೇವಸ್ಥಾನಕ್ಕೆ ಹೋಗಿ ನವಿಲು ಗರಿಯನ್ನು ಕೊಟ್ಟು ಪೂಜೆಯನ್ನು ಮಾಡಬೇಕು.ನಂತರ ಮನೆಗೆ ತಂದು ಈಶನ್ಯ ಮೂಲೆಯಲ್ಲಿ ಇಡಬಹುದು. ಈ ರೀತಿ ಇಡುವುದರಿಂದ ಮನೆಯಲ್ಲಿ ತುಂಬಾ ಬದಲಾವಣೆಗಳು ಆಗುತ್ತವೆ. ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಎರಡಕ್ಕಿಂತ ಹೆಚ್ಚು ನವಿಲು ಗರಿಯನ್ನು ಇಡಬಹುದು ಮತ್ತು ದೇವರ ಮನೆಯಲ್ಲಿ ಎರಡು ನವಿಲು ಗರಿಯನ್ನು ಇಟ್ಟು ಪೂಜೆ ಮಾಡುತ್ತ ಬನ್ನಿ. ಮನೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡಾಗ ವಾಸ್ತುದೋಷ ಪರಿಹಾರವಾಗುತ್ತದೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ.

Leave A Reply

Your email address will not be published.