ಇದು ಅರಿಶಿಣ ಗಿಡ ತರಾನೇ ಕಾಣ್ತಾ ಇದೆ ಆದರೆ ಇದು ಅರಿಶಿನದ ಗಿಡವಲ್ಲ, ಕಾಡು ಅರಿಶಿಣ. ಇದರ ಸೈಂಟಿಫಿಕ್ ನೇಮ್ ಖರ್ಚುಮಾ ಆರೋಮೆಟಿಕ್. ಈ ಸಸ್ಯ ಮಲೆನಾಡ ಪ್ರದೇಶಗಳಲ್ಲಿ ಆಗುತ್ತದೆ. ಮಳೆಗಾಲ ಸಮಯದಲ್ಲಿ ಎಲೆಗಳೆಲ್ಲ ಹಚ್ಚೋಗಿರುತ್ತೆ. ಬೇಸಿಗೆಯಲ್ಲಿ ಎಲೆಗಳೆಲ್ಲ ಒಣಗಿರುವುದು. ಗಡ್ಡೆ ಇರುತ್ತೆ ಆ ಗಡ್ಡೆಯಿಂದ ಹಾರ ಹಿಟ್ಟನ್ನು ತಯಾರು ಮಾಡುತ್ತಾರೆ.
ಇದಕ್ಕೆ ಗುಲಾಬಿ ಬಣ್ಣದ ಹೂವು ಆಗುತ್ತೆ. ಈ ಹೂವುಗಳು ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೆ, ಬೇಸಿಗೆಯಲ್ಲಿ ಇರುವುದಿಲ್ಲ ಬೇಸಿಗೆಯಲ್ಲಿ ಎಲೆಗಳೆಲ್ಲ ಒಣಗ್ಬಿಟ್ಟು. ಗಡ್ಡೆ ಆಗುತ್ತೆ. ಆ ಗಡ್ಡೆ ನೀಲಿ ಬಣ್ಣದಾಗಿರುತ್ತೆ. ಅಂದರೆ ಅದರಲ್ಲಿ ಚೆನ್ನಾಗಿ ಇಟ್ಟು ಬರುತ್ತೆ. ನೀಲಿ ಬಣ್ಣದ ಗಡ್ಡೆ ಇರಲಿಲ್ಲ ಅಂದರೆ, ಅದರಲ್ಲಿ ಇಟ್ಟು ಬರುವುದಿಲ್ಲ.
ಆ ಇಟ್ಟು ತುಂಬಾ ಉಪಯೋಗ ಹಾಗೂ ಔಷಧಿ ಗುಣವನ್ನು ಹೊಂದಿದೆ. ಈಗ ಚಿಕ್ಕ ಮಕ್ಕಳಿಗೆ ಮಲ ವಿಸರ್ಜನೆ ಆಗದೇ ಇರುವಂತಹ ಸಮಯದಲ್ಲಿ ಅವರಿಗೆ ನಾಲ್ಕು ಚಮಚ ಮಾಲ್ಟ್ ಮಾಡಿ ತಿನ್ನಿಸುವುದರಿಂದ ಮಲ ವಿಸರ್ಜನೆ ತುಂಬಾ ಚೆನ್ನಾಗಿ ಆಗುತ್ತದೆ. ತುಂಬಾ ಜಾಸ್ತಿ ಕುಡಿಸಬಾರದು ಯಾಕೆಂದರೆ ಅದು ತಂಪಿನ ಅಂಶ ಹೊಂದಿರುವುದರಿಂದ ಮಕ್ಕಳಿಗೆ ತಂಪು ಆಗುವ ಸಾಧ್ಯತೆ ಇರುತ್ತದೆ.
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ಮಾಲ್ಟ್ ಕುಡಿಯುವುದರಿಂದ ಹೆಚ್ಚು ಉಪಯೋಗವಿದೆ. ತಲೆಹೊಟ್ಟು ಮತ್ತು ಕೂದಲಿನ ಆರೋಗ್ಯಕ್ಕೂ ಈ ಹಿಟ್ಟು ಹೆಚ್ಚು ಅಜೀರ್ಣ ಸಮಾಯೆಯಾದಾಗ ಇದನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿಯುವುದರಿಂಅ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು. ಈ ಹಿಟ್ಟಿನಿಂದ ಹಲ್ವಾ ಮಾಡಿ ತುಪ್ಪದೊಂದಿಗೆ ನಿಯ್ಮಿತವಾಗಿ ಸೇವಿಸುತ್ತಾರೆ.