ಬಿಳಿ ಸಾಸಿವೆಯ ಅದ್ಬುತಗಳು….!!
ಕಣ್ಣು ದೃಷ್ಟಿ ಮಾಟ ಮಂತ್ರ ತಂತ್ರಗಳು ದುಷ್ಟ ಶಕ್ತಿಗಳು ಮತ್ತು ನೆಗೆಟಿವಿಟಿ ಇವೆಲ್ಲಾ ಮನೆಯಿಂದ ಹೊರಟು ಹೋಗಿ ಒಳ್ಳೆಯದಾಗಬೇಕು ಎಂದರೆ ಇದು ಒಂದು ಅದ್ಬುತವಾದ ಸಣ್ಣ ಪರಿಹಾರವನ್ನು ಮಾಡಿ ನೋಡಿ.ಇನ್ನೂ ಒಳ್ಳೆಯ ವಿಷಯ ಇದೆ ಎಂದರೆ ಕೆಟ್ಟ ವಿಷಯನು ಕೂಡ ಇರುತ್ತದೆ. ದೇವರು ಇದ್ದಾನೆ ಎಂದರೆ ದುಷ್ಟ ಶಕ್ತಿಗಳು ಇದ್ದೆ ಇರುತ್ತದೆ. ಈ ಮಂತ್ರ ತಂತ್ರ ಮಾಡಿಸಿದರೆ ಯಾರ ಮೇಲೆ ಪ್ರಭಾವ ಇರುತ್ತದೆಯೋ ಅದು 100 ದಿನಗಳು ಅಷ್ಟೇ ಪ್ರಭಾವ ಬಿರುತ್ತದೆ. ನಂತರ ಆ ಕೆಟ್ಟ ಪ್ರಭಾವ ಮಾಡಿಸಿದವರ ಮೇಲೇನೆ ಪ್ರಭಾವ ಬಿರುವುದಲ್ಲದೆ ಅವರ ವಂಶದ ಮೇಲೆ ಪ್ರಭಾವ ಬಿರುತ್ತದೆ.
ಇದರ ಲಕ್ಷಣ ಏನು ಎಂದರೆ ಚೆನ್ನಾಗಿ ಸಂತೋಷವಾಗಿದ್ದ ಕುಟುಂಬದಲ್ಲಿ ಜಗಳ ಕಲಹ ಗಲಾಟೆಗಳು ಇದ್ದಕ್ಕಿದಂತೆ ಗಂಡ ಹೆಂಡತಿ ಅಪ್ಪ ಮಗ ಅಕ್ಕ ತಂಗಿ ಅಣ್ಣ ತಂಗಿ ಈ ರೀತಿ 2 ಸಂಬಂಧಗಳ ನಡುವೆ ಮನಸ್ತಾಪಗಳು ಹಬ್ಬ ದಿನಗಳಲ್ಲಿ ಮನೆಯಲ್ಲಿ ನೆಮ್ಮದಿ ಇಲ್ಲದೆ ಯಾವುದಾದರು ಒಂದು ಜಗಳ ಇದ್ದೆ ಇರುತ್ತದೆ. ಈ ರೀತಿ ಕೆಟ್ಟ ವಿಷಯಗಳು ಮೊದಲಿಗೆ ಆಕರ್ಷಿಸಿಸುವುದು ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರು ಹಾಗು ಭಯದ ಸ್ವಭಾವವುಳ್ಳವರನ್ನು.
ಮುಖ್ಯವಾಗಿ ಮನಸ್ಸಿನಲ್ಲಿ ನಮ್ಮನ್ನು ಯಾರು ಏನು ಮಾಡಲು ಆಗುವುದಿಲ್ಲ ಮತ್ತು ಯಾವ ಕೆಟ್ಟ ಶಕ್ತಿಯು ನಮ್ಮ ಹತ್ತಿರ ಸುಳಿಯುವುದಿಲ್ಲ ಎನ್ನುವ ಧೈರ್ಯ ತುಂಬಾ ಮುಖ್ಯವಾಗಿರುತ್ತದೆ. ಈ ಸಣ್ಣ ಪರಿಹಾರವನ್ನು ಮಾಡಿಕೊಂಡರೆ ಎಲ್ಲಾ ದುಷ್ಟ ಶಕ್ತಿಗಳು ದೂರ ಆಗುತ್ತದೆ. ಸಾಂಬ್ರಾಣಿ ದೀಪ ಹಾಕುವಾಗ ಬಿಳಿ ಸಾಸಿವೆಯನ್ನು ಹಾಕಬೇಕು. ಮನೆಯಲ್ಲಿ ಸ್ವಲ್ಪ ಜಾಗಾ ಬಿಡದೆ ಎಲ್ಲಾ ಹೊಗೆಯನ್ನು ತೋರಿಸಬೇಕು.
ಬಿಳಿ ಸಾಸಿವೆ ಹೊಗೆ ದುಷ್ಟ ಶಕ್ತಿಗಳಿಗೆ ಆಗುವುದಿಲ್ಲ. ಆ ಹೊಗೆಯಿಂದ ಕಣ್ಣು ಕಾಣಿಸದೆ ದಿಕ್ಕ ಪಾಲಗಿ ಓಡಿ ಹೋಗುತ್ತದೆ. ಇದನ್ನು ಭಾನುವಾರ ಬೈರವ ದೇವರನ್ನು ನೆನಸಿಕೊಳ್ಳುತ್ತಾ ಶುರು ಮಾಡಿ. ಪ್ರತಿದಿನ ಬಿಳಿ ಸಾಸಿವೆ ಹಾಕುವುದನ್ನು ತುಂಬಾ ಒಳ್ಳೆಯದು ಅಥವಾ ವಾರಕ್ಕೆ ಒಂದು ದಿನ ಎರಡು ದಿನ ಕೂಡ ಹಾಕಬಹುದು. ಇದೆ ರೀತಿ 48 ದಿನ ತಪ್ಪದೆ ಮಾಡಿ. ಬಿಳಿ ಸಾಸಿವೆ ಎನ್ನುವುದು ದೈವ ಗುಣ ಮತ್ತು ಅರೋಗ್ಯ ಇರುವ ವಸ್ತು. ಇದು ತಪ್ಪದೆ ಒಳ್ಳೆಯ ಫಲ ಕೊಡುತ್ತದೆ.