ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಸೀಳು ಬಿಟ್ಟರೆ ಏನರ್ಥ!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ-ಪುನಸ್ಕಾರಗಳಿಗೆ ಸಾಕಷ್ಟು ಮಹತ್ವವನ್ನು ನೀಡುತ್ತೇವೆ, ಅದೇ ರೀತಿಯಾಗಿ ಕಳಶ ಸ್ಥಾಪನೆಗೂ ಕೂಡ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ, ಯಾವುದೇ ಶುಭ ಸಮಾರಂಭಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕಳಶವನ್ನು ಸ್ಥಾಪಿಸಿ ನಂತರ ಪೂಜೆಯನ್ನು ಮಾಡುತ್ತೇವೆ, ಇನ್ನೂ ಹಲವಾರು ಮನೆಗಳಲ್ಲಿ ಪ್ರತಿನಿತ್ಯ ಕಳಶವನ್ನು ಸ್ಥಾಪಿಸಿ ಪೂಜೆಯನ್ನು ಮಾಡುತ್ತಾರೆ, ಕಳಸ ಗಳಲ್ಲಿ ಎಷ್ಟೋ ವಿಧಗಳು ಇವೆ ಅದರಲ್ಲಿ ತೆಂಗಿನಕಾಯಿಯನ್ನು ಇಟ್ಟು ಕಳಸ ಸ್ಥಾಪಿಸಿ ಪೂಜಿಸುವುದು ಕೂಡ ಒಂದು. ಇನ್ನು ತೆಂಗಿನಕಾಯಿಯಲ್ಲಿ ಕೆಲಸವನ್ನು ಸ್ಥಾಪಿಸಿದ ನಂತರ ತೆಂಗಿನಕಾಯಿಯಲ್ಲಿ ಆಗುವ ಬದಲಾವಣೆಗಳು ಗೊಂದಲಕ್ಕೆ ಕಾರಣವಾಗುತ್ತದೆ ವಿಷಯದಲ್ಲಿ ಏನಾದರೂ ಬದಲಾವಣೆಗಳು ಕಂಡು ಬಂದರೆ ಸಾಮಾನ್ಯವಾಗಿಯೇ ಆತಂಕಗಳು ಹೆಚ್ಚಾಗುತ್ತದೆ, 

ಯಾಕೆ ಹೀಗಾಗಿದೆ ಎಂದು. ಹೌದು ಕಳಸದಲ್ಲಿ ಸಾಕ್ಷಾತ್ ದೇವಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ, ಹಾಗಾಗಿ ಕಳಸದಲ್ಲಿ ಸ್ವಲ್ಪ ಬದಲಾವಣೆಯಾದರೂ ಗೊಂದಲಗಳು ಉಂಟಾಗುತ್ತದೆ. ಇನ್ನು ತೆಂಗಿನಕಾಯಿಯನ್ನು ಇಟ್ಟು ಕಳಸವನ್ನು ಸ್ಥಾಪಿಸುವ ಮನೆಗಳಲ್ಲಿ ಏನಾದರೂ ತೆಂಗಿನಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಹಲವಾರು ಪ್ರಶ್ನೆಗಳು ಆತಂಕಗಳು ಹುಟ್ಟಿಕೊಳ್ಳುತ್ತದೆ, ಇದರ ಅರ್ಥ ಏನು ಇದು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವ ಆತಂಕಗಳು ಉಂಟಾಗುತ್ತದೆ, ಹಾಗಾದರೆ ಮನೆಯಲ್ಲಿ ಇಟ್ಟ ಕಳಶದ ತೆಂಗಿನಕಾಯಿಯಲ್ಲಿ ಏನಾದರೂ ಬಿರುಕುಗಳು ಉಂಟಾದರೆ ಅಥವಾ ಮೊಳಕೆಗಳು ಬಂದರೆ ಇದರ ಅರ್ಥವೇನು ಇದನ್ನು ಏನು ಮಾಡಬೇಕು ಎಂದು ನೋಡೋಣ. ಸಾಮಾನ್ಯವಾಗಿ ನಾವು ಮನೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸುವಾಗ ಮಹಾಲಕ್ಷ್ಮಿ ದೇವಿಯ ಸ್ವರೂಪವಾಗಿ ಅಥವಾ ಮನೆದೇವರ ಸ್ವರೂಪವಾಗಿ ದುರ್ಗಾದೇವಿ ಸ್ವರೂಪವಾಗಿ ನಾವು ಕಳಶವನ್ನು ಪೂಜಿಸುತ್ತೇವೆ .

ನಾವು ಯಾವ ದೇವರ ಹೆಸರಿನಲ್ಲಿ ಕಳಶವನ್ನು ಪೂಜಿಸುತ್ತೇವೆ ಆ ದೇವರು ಕಳಶದಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆ ನಮ್ಮ ಹಿಂದಿನ ಕಾಲದಿಂದಲೂ ಕೂಡ ಇದೆ, ಹಾಗಾಗಿ ಸಾಂಪ್ರದಾಯಿಕವಾಗಿ ಕಳಶವನ್ನು ಸ್ಥಾಪಿಸಲಾಗುತ್ತದೆ. ಇನ್ನು ಮನೆಯಲ್ಲಿ ತೆಂಗಿನಕಾಯಿ ಕಳಶದಲ್ಲಿ ಏನಾದರೂ ತೆಂಗಿನಕಾಯಿ ಮೊಳಕೆ ಬಿಟ್ಟರೆ ಇದರ ಅರ್ಥ ಮನೆಯಲ್ಲಿ ಸುಖ ಸಂಪತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ, ಹಾಗಾಗಿ ಮನೆಯಲ್ಲಿ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅದು ಶುಭ ಸೂಚನೆ, ನೀವು ಅದನ್ನು ಪೂಜೆ ಮಾಡಿ ನಿಮ್ಮ ಮನೆಯಲ್ಲಿ ಜಾಗವಿದ್ದರೆ ಅಥವಾ ಜಮೀನಿನಲ್ಲಿ ಜಾಗ ಇದ್ದರೆ ನೀವು ಮೊಳಕೆಬಂದಿರುವ ತೆಂಗಿನಕಾಯಿಯನ್ನು ನೆಟ್ಟು ಮರವಾಗಿ ಬೆಳೆಸಿ ಇಲ್ಲದೆ ಹೋದರೆ ಯಾವುದಾದರೂ ದೇವಾಲಯಕ್ಕೆ ನೀಡಿ ಅದನ್ನು ಸಮೃದ್ಧಿಯಾಗಿ ಬೆಳೆಸಿ,

ಅದು ಯಾವ ರೀತಿ ಸಮೃದ್ಧಿಯಾಗಿ ಬೆಳೆಯುತ್ತದೆಯೋ ಅದೇ ರೀತಿಯಾಗಿ ನಿಮ್ಮ ಮನೆ ಸಮೃದ್ಧಿಯಾಗುತ್ತದೆ. ಇನ್ನು ತೆಂಗಿನಕಾಯಿ ಏನಾದರೂ ಬಿರುಕು ಬಿಟ್ಟರೆ ಅದು ಬಿಸಿಲಿನ ತಾಪಕ್ಕೆ ಬಿರುಕು ಬಿಟ್ಟಿರುತ್ತದೆ, ಅದರಿಂದ ಯಾವುದೇ ರೀತಿಯ ಕೆಟ್ಟ ಸೂಚನೆ ಆಗುವುದಿಲ್ಲ, ನೀವು ಹೆಚ್ಚು ದಿನಗಳ ಕಾಲ ತೆಂಗಿನಕಾಯಿಯನ್ನು ಕಳಶದಲ್ಲಿ ಇಡುವುದಾದರೆ ತೆಂಗಿನಕಾಯಿಯಲ್ಲಿ ಹೆಚ್ಚು ನಾರು ಇರುವಂತೆ ನೋಡಿಕೊಳ್ಳಿ ನಾರನ್ನು ಹೆಚ್ಚಾಗಿ ತೆಗೆಯಬೇಡಿ, ಇದರಿಂದ ತೆಂಗಿನಕಾಯಿಗೆ ಹೆಚ್ಚು ಉಷ್ಣಾಂಶ ತಗಲುವುದಿಲ್ಲ ಅದು ಬಿರುಕು ಬಿಡುವುದಿಲ್ಲ. 

Leave A Reply

Your email address will not be published.