ಮನುಷ್ಯ ಅಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಬರುತ್ತಿರುತ್ತದೆ. ಕಷ್ಟ ಬಂದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಂದ ಕಷ್ಟಗಳನ್ನ ಎದುರಿಸಿದಾಯಿತು ಎಂದು ಚಿಂತೆ ಬಿಟ್ಟಿರುತ್ತಾರೆ. ಇಂಥ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಜ್ಯೋತಿಷ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲಿ ಹರಳುಗಳನ್ನ ಧರಿಸುವ ಸಲಹೆ ಕೂಡ ಒಂದು. ಇವತ್ತು ನಾವು ಹರಳುಗಳಲ್ಲಿ ಒಂದಾದ ಪಚ್ಚೆ ಹರಳನ್ನ ಯಾರು ಧರಿಸಬೇಕು..? ಯಾಕೆ ಧರಿಸಬೇಕು..? ಏನಿದರ ಮಹತ್ವ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪಚ್ಚೆ ರತ್ನ ಅಂದರೆ ಹಸಿರು ಹರಳು. ಒಂದೊಂದು ಹರಳಿಗೂ ಒಂದೊಂದು ಗ್ರಹದ ಸಂಬಂಧವಿರುತ್ತದೆ. ಅಂತೆಯೇ ಪಚ್ಚೆಗೆ ಬುಧಗ್ರಹ ಅಧಿಪತಿ. ಯಾರ ಜಾತಕಕ್ಕೆ ಪಚ್ಚೆ ಹರಳು ಆಗಿ ಬರುತ್ತದೆಯೋ, ಯಾರ ಜಾತಕದಲ್ಲಿ ಬುಧನು ಶುಭಸ್ಥಾನದಲ್ಲಿರುವನೋ, ಅವರು ಪಚ್ಚೆ ರತ್ನದ ಉಂಗುರ ಧರಿಸಬಹುದು.
ಇನ್ನು ಕೆಲವರು ಪಚ್ಚೆ ರತ್ನದ ಉಂಗುರದ ಜೊತೆಗೆ ಬೇರೆ ರತ್ನದ ಉಂಗುರವನ್ನೂ ಕೂಡ ಹಾಕಿಕೊಳ್ಳುತ್ತಾರೆ. 10 ಬೆರಳಿಗೂ 10 ರತ್ನದುಂಗುರ ಧರಿಸುತ್ತಾರೆ. ಇದು ಅಕ್ಷರಶಹ ತಪ್ಪು. ಹೀಗೆ ಮಾಡುವುದರಿಂದ ಲಾಭವಾಗುವ ಜಾಗದಲ್ಲಿ ನಷ್ಟವಾಗುತ್ತದೆ. ಒಳಿತಾಗುವ ಜಾಗದಲ್ಲಿ ಕೆಡಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕಕ್ಕೆ ಹೊಂದಿ ಬರುವ ಯಾವುದಾದರೂ ಒಂದು ರತ್ನದ ಉಂಗುರವನ್ನ ಧರಿಸಬೇಕು.