ಇಷ್ಟು ಮಾಡಿ ನೋಣಗಳು ಜನ್ಮದಲ್ಲಿ ನಿಮ್ಮ ಮನೆ ಹತ್ರ ಸುಳಿಯಲ್ಲ….!!

ಈ ಮನೆಮದ್ದು ಬಳಸುವುದರಿಂದ ಸೊಳ್ಳೆಗಳ ನೋಣಗಳ ಕಾಟ ಇರುವುದಿಲ್ಲ.ಇನ್ನು ನ್ಯಾಪಾತಲಿನ್ ನುಸಿ ಗುಳಿಗೆಯನ್ನು ತೆಗೆದುಕೊಳ್ಳಬೇಕು.ಇದನ್ನು ಬಟ್ಟೆ ಹಾಳಾಗಬಾರದು ಅಂತ ಇದನ್ನೇ ಇಡುತ್ತಾರೆ.ಇನ್ನು 4 ನ್ಯಾಪಾತಲಿನ್ ಪುಡಿಯನ್ನು ತೆಗೆದುಕೊಂಡು ಸ್ಪ್ರೇ ಬಾಟಲ್ ಗೆ ಹಾಕಬೇಕು ಮತ್ತು 1 ಚಮಚ ಉಪ್ಪನ್ನು ಹಾಕಬೇಕು. ನಂತರ ಮುಕ್ಕಾಲು ಭಾಗ ನೀರನ್ನು ಹಾಕಬೇಕು. ನಂತರ ಸ್ವಲ್ಪ ವಿನೆಗರ್, 2 ಚಮಚ ಡೇಟಲ್ ಅನ್ನು ಹಾಕಬೇಕು.ನಂತರ ಎಲ್ಲವನ್ನು ಶೇಕ್ ಮಾಡಿ ಮಿಕ್ಸ್ ಮಾಡಬೇಕು.

ಇನ್ನು ಇದನ್ನು ಒಂದು ಸರಿ ಮಾಡಿದರೆ 2 ರಿಂದ 3 ತಿಂಗಳು ಬಳಸಬಹುದು.ಇನ್ನು ಇದನ್ನು ಪ್ರತಿದಿನ ನೆಲ ವರೆಸುವ ನೀರಿಗೆ ಎರಡು ಚಮಚ ಹಾಕಿಕೊಂಡು ನೆಲ ವರೆಸಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಇರುವ ಸೊಳ್ಳೆಗಳು ಹೊರಗೆ ಓಡುತ್ತಾದೆ ಮತ್ತು ಹೊರಗಿನ ಸೊಳ್ಳೆಗಳು ಈ ಪರಿಮಳಕ್ಕೆ ಮನೆ ಒಳಗೆ ಬರುವುದಿಲ್ಲ.ಮನೆ ತುಂಬಾ ಸ್ವಚ್ಛವಾಗಿ ಇರುತ್ತದೆ ಮತ್ತು ಯಾವುದೇ ಕ್ರಿಮಿ ಕಿಟಗಳು ಕೂಡ ಬರುವುದಿಲ್ಲ.

ಇನ್ನು ಎರಡು ಪ್ಲಾಸ್ಟಿಕ್ ಬೌಲ್ ತೆಗೆದುಕೊಂಡು ಕಾಟನ್ ಇಡಬೇಕು.ನಂತರ ಹತ್ತಿ ನೆನೆಯುವಷ್ಟು ಈ ನೀರನ್ನು ಹಾಕಬೇಕು.ಈ ರೀತಿ ಬೌಲ್ ಅನ್ನು ಸೊಳ್ಳೆ ಬರುವ ಜಾಗಾದಲ್ಲಿ ಇಟ್ಟರೇ ಸೊಳ್ಳೆಗಳು ನೋಣಗಳು ಬರುವುದಿಲ್ಲ.

ಇನ್ನು ಕರ್ಪೂರವನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಕಪೋರದ ಸ್ಮೆಲ್ ಸೊಳ್ಳೆಗಳಿಗೆ ಇಷ್ಟ ಆಗುವುದಿಲ್ಲ.ನಂತರ ಕಹಿ ಬೇವಿನ ಎಣ್ಣೆಯನ್ನು ಹಾಕಬೇಕು ಹಾಗೂ ಪಲಾವ್ ಎಲೆಯನ್ನು ಕಟ್ ಮಾಡಿ ಬೌಲ್ ನಲ್ಲಿ ಹಾಕಬೇಕು.ನಂತರ ಕಹಿ ಬೇವಿನ ಎಣ್ಣೆಯನ್ನು ಪಲಾವ್ ಎಲೆಗೆ ಸ್ವಲ್ಪ ಹಾಕಿ ಬೆಂಕಿ ಹಾಕಬೇಕು. ಇದನ್ನು ಸಂಜೆ ಸಮಯದಲ್ಲಿ ಮಾಡಬೇಕು. ಇದರ ವಾಸನೆಗೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ ಮತ್ತು ಮನೆಯ ಒಳಗೆ ಬರುವುದಿಲ್ಲ.ಇನ್ನು ಕಹಿ ಬೇವಿನ ಎಣ್ಣೆ ಹಾಗೂ ಕರ್ಪೂರವನ್ನು ಹಾಕಿ ದೀಪ ಹಚ್ಚಿದರೆ ಸಾಕು ಸೊಳ್ಳೆಗಳು ಮನೆಯ ಒಳಗೆ ಬರುವುದಿಲ್ಲ.

Leave a Comment