ಬಾಳೆ ಎಲೆ ಮೇಲೆ ಬಂಗಾರ ಇಟ್ಟಿ ಹೀಗೆ ಈ ಪರಿಹಾರವನ್ನು ಮಾಡಿದರೆ ನಿಮ್ಮ ಜೀವನ ಸ್ವರ್ಣಮಯ

ಹೆಣ್ಣು ಮಕ್ಕಳಿಗೆ ಹಳದಿ ಲೋಹ ಅಂದರೆ ಚಿನ್ನ ಎಂದರೆ ಬಹಳ ಅಚ್ಚುಮೆಚ್ಚು. ಒಂದು ಮಗುವಿಗೂ ಸಹ ಚಿನ್ನ ಅಂತ ಕರೆದರೆ ಅದಕ್ಕೆ ಎಷ್ಟು ಖುಷಿಯಾಗುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಈ ಚಿನ್ನ ಎಂಬ ಪದದಿಂದಲೇ ಆಕರ್ಷಿತರಾಗಿದ್ದಾರೆ. ಚಿನ್ನ ಎಂಬುದು ಹಳದಿ ಲೋಹ. ಬಂಗಾರ. ಈ ಬಂಗಾರದ ಆಭರಣಗಳು ಎಂದರೆ ಎಲ್ಲರಿಗೂ ಬಹಳ ಪ್ರೀತಿ. ಎಲ್ಲ ಜನರು ಕೂಡ ಸಹ ನಮ್ಮ ಮನೆಗೆ ಬಂಗಾರ ಇರಬೇಕು ಎನ್ನುವ ಆಸೆ ಜಾಸ್ತಿ.
ಬಂಗಾರ ಇದ್ದರೆ ಶ್ರೀ ಲಕ್ಷ್ಮಿಯ ವಾಸವಾಗಿ ಇರುತ್ತದೆ ಎಂಬ ನಂಬಿಕೆ ಎಲ್ಲರದು ಆಗಿರುತ್ತದೆ. ಬಂಗಾರವು ಗುರುವಿನ ಸಂಕೇತವು ಕೂಡ ಆಗಿರುತ್ತದೆ. ಬಂಗಾರ ಯಾರ ಮನೆಯಲ್ಲಿ ಇರುತ್ತದೆಯೋ ಅಂತವರ ಮನೆಯಲ್ಲಿ ಸದಾ ಶ್ರೇಯಸಕರವಾದ ವಾತಾವರಣಗಳು ಇರುತ್ತವೆ. ಈ ಬಂಗಾರ ನಮ್ಮ ಮನೆಯಲ್ಲಿ ಸದಾ ನೆಲೆ ನಿಲ್ಲಬೇಕು ಎಂದರೆ ಒಂದು ಗುರುವಾರದ ದಿನ ಬಾಳೆಹಣ್ಣಿನ ಗಿಡದ ಕೆಳಗಡೆ ಬಾಳೆ ಎಲೆಯನ್ನು ಹಾಸಿ ಅದರ ಮೇಲೆ ಶ್ರೀ ಲಕ್ಷ್ಮಿ ಮತ್ತು ನರಸಿಂಹ ಅಥವಾ ವಿಷ್ಣುವಿನ ಯಾವುದಾದರೂ ಅವತಾರ ಜೊತೆಗೆ ಲಕ್ಷ್ಮಿ ಇರುವಂತಹ ಯಾವ ಅವತಾರ ವಾಗಲಿ ಫೋಟೋ ಇಡಿ.

ಆ ಬಾಳೆ ಎಲೆ ಮೇಲೆ ಫೋಟೋ ಇಟ್ಟು ಅದರ ಮುಂದೆ ಚಿನ್ನದ ಉಂಗುರ, ಮೂಗುತಿ ಆಗಲಿ ಅಥವಾ ನಿಮ್ಮ ಶಕ್ತಿ ಅನುಸಾರವಾಗಿ ಯಾವ ಆಭರಣ ಇರುತ್ತದೆಯೋ ಆ ಆಭರಣಗಳನ್ನು ಇಟ್ಟು ಅದನ್ನು ಕೈ ಮುಟ್ಟಿ ಮುಗಿದು ಆ ಬಾಳೆಯ ಗಿಡಕ್ಕೆ ನೀವು ಭಕ್ತಿಯಿಂದ ಕೈ ಮುಗಿದು. ನಮ್ಮ ಮನೆಯಲ್ಲಿ ಸದಾ ಕಾಲ ಚಿನ್ನ ನೆಲೆ ನಿಲ್ಲುವಂತೆ ಮಾಡು ತಾಯಿ ಎಂದು ನೀವು ಬೇಡಿಕೊಂಡಿದ್ದೆ ಆದರೆ. ನಿಮ್ಮ ಮನೆಯಲ್ಲಿ ಸದಾ ಚಿನ್ನ ನೆಲೆ ನಿಂತು ಇರುತ್ತದೆ. ಮತ್ತು ಬೇರೆ ಬೇರೆ ರೀತಿಯಲ್ಲಿ ಚಿನ್ನದ ಆಗಮನವಾಗುತ್ತದೆ.
ಪರಿಹಾರ ಎಂದರೆ.
ಯಾವಾಗಲೂ ಚಿನ್ನವನ್ನು ಸಾಯಂಕಾಲ ಸಮಯದಂದು ನೀವು ನಿಮ್ಮ ಮೈಯಿಂದ ಕೆಳಗಡೆ ತೆಗೆಯಬೇಡಿ. ಅಂದರೆ ಸಾಯಂಕಾಲ ವೇಳೆ ಮರು ಸಂಜೆ ಹೊತ್ತು. ದೀಪ ಆರಾಧನೆ ನಂತರ ಓಲೆ ಆಗಲಿ ಮೂಗುತಿಯಾಗಲಿ ಅಥವಾ ಬಳೆ ಆಗಲಿ ಯಾವುದೇ ಆಗಲಿ ಬೆಳಗ್ಗೆ ಸಮಯದಲ್ಲಿ ತೆಗೆದರೆ ಪರವಾಗಿಲ್ಲ. ಸಾಯಂಕಾಲ ಸಮಯದಲ್ಲಿ ತೆಗೆಯಬೇಡಿ. ಸಾಯಂಕಾಲ ಸಮಯ ತೇಗದಲ್ಲಿ ಅಂತ ಸ್ಥಳದಲ್ಲಿ ಲಕ್ಷ್ಮಿ ಇರಲು ಬಯಸುವುದಿಲ್ಲ. ಇನ್ನೊಂದು ವಿಷಯ ಏನಪ್ಪಾ ಅಂದರೆ.

ಚಿನ್ನವನ್ನು ಮಕ್ಕಳಿಗೆ ಹಾಕಿದ್ದಲ್ಲಿ ನೀವು ಅದನ್ನು ಭಾನುವಾರ ಮಾತ್ರ ನೀವು ತೆಗೆಯಲು ಹೋಗಬೇಡಿ. ತೆಗೆದಿದ್ದೆ ಆದಲ್ಲಿ ಚಿನ್ನವು ನಿಮ್ಮ ಮನೆಯಿಂದ ಮಾಯವಾಗುವಂತ. ಸಂದರ್ಭಗಳು ಇರುತ್ತವೆ. ಕಳು ವಾದಂತಹ ಸಂದರ್ಭವೂ ಇರುತ್ತದೆ. ಯಾವಾಗಲೂ ಚಿನ್ನವನ್ನು ಕೊಳ್ಳುವಾಗ ಬೆಳಗಿನ ಸಮಯದಲ್ಲಿ ಕೊಂಡುಕೊಂಡರೆ ಒಳ್ಳೆಯದು. ಸಾಯಂಕಾಲ 6:00 ಮೇಲ್ಪಟ್ಟು ಚಿನ್ನವನ್ನು ಕೊಂಡಲ್ಲಿ ಅಷ್ಟು ಶುಭಕರವಾದ ಫಲ ದೊರೆಯುವುದಿಲ್ಲ ಎಂದು ಹೇಳುತ್ತಾರೆ

Leave a Comment