ಎಲೆ ಆಡಿಕೆ ಈ ರೀತಿ ತಿಂದರೆ ಮಾತ್ರ ಅಮೃತ ಬದಲಾಗಿ ಬೇರೆ ರೀತಿ ತಿಂದರೆ ವಿಷ!

ಯಾವ ರೀತಿ ತಾಂಬೂಲ ಸೇವನೆ ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ. ತಾಂಬೂಲವನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಅದು ಅಮೃತಕ್ಕೆ ಸಾಮಾನ. ಅದರ ಬಗ್ಗೆ ತಿಳಿಯದೆ ಸೇವನೆ ಮಾಡಿದರೆ ಅದು ವಿಷವು ಕೂಡ ಹೌದು. ಇನ್ನು ತಾಂಬೂಲ ಹಾಕಿಕೊಳ್ಳುವುದಕ್ಕೆ ಎರಡು ತರ ಆಡಿಕೆ ಬರುತ್ತದೆ. ಒಂದು ಪುರಾಣ ಆಡಿಕೆ ಹಾಗು ಒಂದು ನವೀನ ಆಡಿಕೆ. ತಿನ್ನಲು ಮತ್ತು ಅರೋಗ್ಯಕರ ಆಗಿರಲು ಅದು 3 ತಿಂಗಳ ಆಡಿಕೆ ಆಗಿರಬೇಕು. ಇನ್ನು ಆಡಿಕೆಯಲ್ಲಿ ತುಂಬಾ ಒಗರು ರಸ ಇರುವುದು ದೇಹಕ್ಕೆ ಒಳ್ಳೆಯದಲ್ಲ. ಅದು ಹೃಯದಯಕ್ಕೆ ಹಾನಿಕಾರಕ.ಹಾಗಾಗಿ ಆಡಿಕೆಗೆ ಸಂಸ್ಕಾರವನ್ನು ಕೊಡಬೇಕು.ಮೂರು ತಿಂಗಳ ಅಡಿಕೆಯನ್ನು ಬೆಲ್ಲದಲ್ಲಿ ಚೆನ್ನಾಗಿ ಬೇಯಿಸಬೇಕು. ಬೆಲ್ಲದಲ್ಲಿ ಬೇಯಿಸಿರುವ ಅಡಿಕೆಯನ್ನು ತುಪ್ಪದಲ್ಲಿ ಉರಿದು ಸೇವನೆ ಮಾಡಬೇಕು.

ಇನ್ನು ಎಲೆಯಲ್ಲಿ ತುಂಬಾ ಹಣ್ಣಗಿ ಇರುವುದು ಮತ್ತು ತುಂಬಾ ಒಣಗಿ ಇರುವ ಎಲೆಯನ್ನು ಸೇವನೆ ಮಾಡಬಾರದು. ಅಂದರೆ ತುಂಬಾ ತಾಜಾ ಇರುವ ಎಲೆಯನ್ನು ತೆಗೆದುಕೊಂಡು ತುದಿ ಮತ್ತು ತುಂಬನ್ನು ತೆಗೆದುಕೊಳ್ಳಬೇಕು. ಇನ್ನು ತುಂಬನ್ನು ಸೇವನೇ ಮಾಡಿದರೆ ಜೀರ್ಣ ಕ್ರಿಯೆ ನಾಶ ಆಗುತ್ತದೆ. ನಾವು ಎಲೆ ಆಡಿಕೆ ಸೇವನೆ ಮಾಡುವುದೇ ಜೀರ್ಣ ಕ್ರಿಯೆ ಆಗುವುದಕ್ಕೆ.

ಇನ್ನು ಯಾವ ದ್ರವ್ಯವನ್ನು ಎಲೆಗೆ ಹಾಕಬೇಕು-ಎಲೆ ಆಡಿಕೆ ಸುಣ್ಣ ಲವಂಗ ಪಚ್ಚ ಕರ್ಪೂರ ಏಲಕ್ಕಿ ಜಾಜಿ ಕಾಯಿ, ಖಾಜು ಇವೆಲ್ಲವನ್ನೂ ತಕ್ಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇನ್ನು ಊಟ ಆದ ನಂತರ ಎಲೆ ಆಡಿಕೆ ಹಾಕಬೇಕು. ಎಲೆ ಆಡಿಕೆ ಜಗಿಯುವಾಗ ಯಾವುದೇ ಕಾರಣಕ್ಕೂ ರಸವನ್ನು ನುಗ್ಗೋಬಾರದು. ನಂತರ ಜಗಿತ ಜಗಿತ ಬರುವ ರಸವನ್ನು ನುಗ್ಗಿದರೆ ಅದು ಶ್ರೇಷ್ಠವಾದದ್ದು. ಎಲೆ ಆಡಿಕೆ ಸೇವನೆ ಮಾಡಿದರೆ ಬಾಯಿಯ ದುರ್ಗಾಧ ನಿವಾರಣೆ ಆಗುತ್ತದೆ ಹಾಗು ತಿಂದ ಆಹಾರ ಚೆನ್ನಾಗಿ ಜೀರ್ಣ ಆಗಲು ಸಹಾಯ ಆಗುತ್ತದೆ.

ಇನ್ನು ಮಕ್ಕಳು,ವೃದ್ಧರು, ಬಿಪಿ, ಸಮಸ್ಸೆ ಇರುವವರು, ವಾಂತಿ ಬರುವವರು ಸಹ ತಾಂಬೂಲ ಸೇವನೆಯನ್ನು ಮಾಡಬೇಡಿ.ಇನ್ನು ಯಾವುದೇ ಕಾರಣಕ್ಕೂ ಎಲೆ ಆಡಿಕೆ ಜೊತೆ ತಂಬಾಕು ಸೇವನೆ ಮಾಡಬಾರದು. ಇದು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಡಿಕೆ ಎಲೆಯಲ್ಲಿ ಸುಂಗಧ ದ್ರವ್ಯ ವರೆತು ಪಡಿಸಿ ಯಾವುದೇ ರೀತಿಯ ತಂಬಾಕು, ಗುಟುಕ ಸೇವನೆ ಮಾಡಬೇಡಿ.

Leave a Comment