ತುಳಸಿ ಗಿಡ ಇರುವ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಮತ್ತು ಸಾಕಾರತ್ಮಕ ಶಕ್ತಿ ನೆಲೆಸಿರುತ್ತದೆ.ಯಾವ ಮನೆಯಲ್ಲಿ ತುಳಸಿ ನೆಲೆಸಿರುವುದಿಲ್ಲವೋ ನಕಾರಾತ್ಮಕ ಶಕ್ತಿ ಅವರಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಅನ್ನೋದು ಇರಲೇಬೇಕು. ವಿಶೇಷವಾಗಿ ಕೆಲವರ ಮನೆಯಲ್ಲಿ ತುಳಸಿ ಗಿಡ ಇದ್ದರು ಕೂಡ ಶಾಂತಿ ನೆಮ್ಮದಿ ಇರುವುದಿಲ್ಲ. ನಿಮ್ಮ ಮನೆಯಲ್ಲಿ ತೊಂದರೆಗಳು ಇದ್ದೆ ಇರುತ್ತದೆ. ಇದಕ್ಕೆ ಕಾರಣ ನೀವು ತುಳಸಿ ಗಿಡವನ್ನು ಸರಿಯಾಗಿ ನೋಡಿಕೊಳ್ಳುತ್ತಾ ಇರುವುದಿಲ್ಲ ಮತ್ತು ಕೆಲವೊಂದು ತಪ್ಪುಗಳನ್ನು ಮಾಡುತ್ತ ಇರುತ್ತೀರಾ. ಈ ಕಾರಣದಿಂದ ನಿಮಗೆ ಒಳ್ಳೆಯ ಫಲಗಳ ಬದಲು ಕೆಟ್ಟ ಫಲಗಳು ಲಭಿಸುತ್ತದೆ.
1, ತುಳಸಿ ಗಿಡ ನೆಡುವ ಮಣ್ಣು ತುಂಬಾ ಶುದ್ಧವಾಗಿ ಇರಬೇಕು. ಹಾಗಾಗಿ ಆದಷ್ಟು ಸ್ವಚ್ಛವಾಗಿ ಇಟ್ಟರೆ ನಿಮಗೆ ಒಳ್ಳೆಯ ಫಲಗಳು ಸಿಗುತ್ತವೆ.2, ತುಳಸಿ ಗಿಡದ ಎಲೆ ಒಣಗಿರಬಾರದು. ಒಣಗಿರುವ ಎಲೆಯಿಂದ ನಕಾರಾತ್ಮಕತೇ ಹೆಚ್ಚಾಗುತ್ತದೆ ಹಾಗು ನಿಮ್ಮ ಮನೆಗೆ ಕೆಟ್ಟ ಪ್ರಭಾವಗಳು ಅನ್ನೋದು ಬರುತ್ತದೆ. ಆದಷ್ಟು ಒಣಗದೆ ಇರುವ ಹಾಗೆ ನೋಡಿಕೊಳ್ಳಿ.
3, ಮಹಿಳೆಯರು ನಿಮ್ಮ ಪಿರೇಡ್ಸ್ ಸಮಯದಲ್ಲಿ ಗಿಡಗಳಿಗೆ ನೀರನ್ನು ಹಾಕಬಾರದು. ಅದರಲ್ಲೂ ವಿಶೇಷವಾಗಿ ತುಳಸಿ ಗಿಡಕ್ಕೆ ಮುಟ್ಟಕ್ಕೆ ಹೋಗಬಾರದು ಮತ್ತು ನೀರನ್ನು ಸಹ ಹಾಕಬಾರದು. ಇದರಿಂದ ಸಾಕಷ್ಟು ತೊಂದರೆಗಳು ಬರುತ್ತವೇ.4, ತುಳಸಿ ಗಿಡವನ್ನು ಆಗಾಗ ಸ್ವಚ್ಛವನ್ನು ಮಾಡಬೇಕು.5, ತುಳಸಿ ಗಿಡಕ್ಕೆ ನೀರು ಹಾಕುವಾಗ ಯಾವುದೇ ಕಾರಣಕ್ಕೂ ಪಾದ ರಕ್ಷೆ ಹಾಕಿಕೊಂಡು ನೀರನ್ನು ಹಾಕಬಾರದು. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.
6, ಯಾವುದೇ ಕಾರಣಕ್ಕೂ ಉಗುರಿನಿಂದ ತುಳಸಿ ಎಲೆಯನ್ನು ಕಟ್ ಮಾಡಬೇಡಿ.ಇದರಿಂದ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ.7, ಇನ್ನು ಕೆಟ್ಟ ಯೋಚನೆ ಹಾಗು ಭಾವನೆಯನ್ನು ಇಟ್ಟುಕೊಂಡು ತುಳಸಿ ಗಿಡವನ್ನು ಮನೆಗೆ ತೆಗೆದುಕೊಂಡು ಬರಬೇಡಿ. ಒಳ್ಳೆಯ ಆಲೋಚನೆಯನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ತುಳಸಿ ಗಿಡವನ್ನು ಮನೆಗೆ ತೆಗೆದುಕೊಂಡು ಬರಬೇಕು. ಈ ರೀತಿ ಇದ್ದಾಗ ಮಾತ್ರ ತುಳಸಿ ಯಿಂದ ಸಂಪೂರ್ಣ ಲಾಭ ನಿಮಗೆ ಸಿಗುತ್ತದೆ.8, ಮಾಂಸ ಆಹಾರ ಸೇವನೆ ಮತ್ತು ಮಧ್ಯಾಪನ ಮಾಡಿದಾಗ ಯಾವುದೇ ಕಾರಣಕ್ಕು ತುಳಸಿ ಅನ್ನು ಮುಟ್ಟಬಾರದು.
9, ತುಳಸಿ ಗಿಡ ಒಳಗೆ ಗಣೇಶನ ಪ್ರತಿಮೆ ಅಥವಾ ಶಿವ ಲಿಂಗವನ್ನು ಇಡಬಾರದು. ಇದು ಕೂಡ ಸಾಕಷ್ಟು ತೊಂದರೆಯನ್ನು ಕೊಡುತ್ತದೆ.10, ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೇ ಇದೆ ಎಂದರೆ ತುಳಸಿ ಗಿಡದ ಪಕ್ಕ ಬಾಳೆ ಗಿಡವನ್ನು ಬೆಳೆಸಿದರೆ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಳೆ.11,ಇನ್ನು ತುಳಸಿ ಗಿಡದ ಹತ್ತಿರ ಸಾಲಿಗ್ರಾಮವನ್ನು ಇಟ್ಟರೆ ನಿಮ್ಮ ಅದೃಷ್ಟ ಹತ್ತರಷ್ಟು ಹೆಚ್ಚಾಗುತ್ತದೆ.12, ತುಳಸಿ ಗಿಡವನ್ನು ಮಣ್ಣಿನ ಪೊಟ್ ನಲ್ಲಿ ಹಾಕಿದರೆ ಒಳ್ಳೆಯ ಲಾಭಗಳು ಸಿಗುತ್ತದೆ. ಇನ್ನ ಪ್ಲಾಸ್ಟಿಕ್ ಪೊಟ್ ನಲ್ಲಿ ಹಾಕಿದರೆ ಯಾವುದೇ ಫಲಗಳು ಸಿಗುವುದಿಲ್ಲ.