ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ಏನಾಗುತ್ತದೆ ಗೊತ್ತಾ..?

ಮನೆಯ ಮೂಲೆಯಲ್ಲಿ ಜೇಡರ ಬಲೆ ಕಟ್ಟಿದರೆ ಅದು ಬಡತನಕ್ಕೆ ಕಾರಣವಾಗಬಹುದು. ಈಗಿನ ಆಧುನಿಕ ಯುಗದಲ್ಲಿ ಮನೆಯ ಮಂದಿಗೆಲ್ಲ ತಲಾ ಒಂದೊಂದು ಕೆಲಸ ಇರುತ್ತದೆ. ಹಾಗಾಗಿ ಮನೆಯ ಆರು ತಿಂಗಳಿಗೊಮ್ಮೆ ಅಥವಾ ಹಬ್ಬ ಹರಿದಿನಗಳಲ್ಲಿ ಮಾತ್ರ ಶುಚಿಗೊಳಿಸುವ ಕಾರ್ಯ ನಡೆಯುತ್ತದೆ. ಆದರೆ ಇಂಥ ಕಾರ್ಯಗಳನ್ನು ಮಾಡುವುದು ಶ್ರೇಷ್ಠವಲ್ಲ.

ಮನುಷ್ಯ ತಾನು ಎಷ್ಟೇ ದುಡಿದರು ಸಹ ಅವನ ಕೈಯಲ್ಲಿ ಹಣ ನಿಲ್ಲುವುದಿಲ್ಲ.ಹಣವನ್ನು ಉಳಿಸಿಕೊಳ್ಳಲು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ. ಇನ್ನು ಕೆಲ ಜ್ಯೋತಿಷ್ಯರ ಮರೆ ಹೋಗುತ್ತಾರೆ. ಆದರೆ ಮನೆಯಲ್ಲಿ ಕೆಲವೊಂದು ವಸ್ತುಗಳು ಸಹ ಇದಕ್ಕೆ ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಇಂತದ್ದೊಂದು ವಸ್ತು ಇದ್ದರೆ ತೆಗೆದುಹಾಕಿ ಬಡತನವನ್ನು ದೂರ ಮಾಡಿ ಕೊಳ್ಳಿ.ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮಾನಸಿಕ ಮತ್ತು ಶಾರೀರಿಕ ತೊಂದರೆಗೆ ಗುರಿ ಮಾಡುತ್ತವೆ.

ನೀವು ವಾಸಿಸುತ್ತಿರುವ ಮನೆಯ ಬಳಿಯಲ್ಲಿ ಜೇನುಗೂಡು ಕಟ್ಟಿದರೆ ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಮನೆಗೆ ಜೇನು ಕಟ್ಟುವುದು ಕೆಟ್ಟ ಸೂಚನೆ ಆಗಿರುತ್ತದೆ. ಇದು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕಬಹುದು.
ಇನ್ನು ನಿಮ್ಮ ಮನೆಯ ಬಳಿ ಬಾವುಲಿಗಳು ಗೂಡು ಕಟ್ಟಿದರೆ. ಅದನ್ನು ಸಹ ತಕ್ಷಣ ತೆಗೆದು ಹಾಕಬೇಕು. ಇದು ಕೂಡ ಪ್ರಗತಿಗೆ ಅಡ್ಡಿ ಆಗುವಂತ ಮಾಡುತ್ತದೆ. ಹಾಗೂ ನಿಮ್ಮ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಸಂಪತ್ತಿನ ನಾಶಕ್ಕೆ ಕಾರಣವಾಗಬಹುದು.

ಇಂದು ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಕಾಣಿಸುವ ಜೇಡರ ಬಲೆಯೂ ಒಳ್ಳೆಯ ಸೂಚನೆ ಅಲ್ಲ. ಮನೆಯಲ್ಲಿ ಜೇಡ ಕಟ್ಟದ ಹಾಗೆ ನೋಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಜೇಡ ಕಟ್ಟಿದಾದಲ್ಲಿ. ಲಕ್ಷ್ಮಿ ದೇವಿ ಮನೆ ಒಳಗೆ ಬರುವುದಿಲ್ಲ. ನಿಮ್ಮ ಮನೆಯಲ್ಲಿ ಗೂಡು ಕಟ್ಟಿದ ತಕ್ಷಣವೇ ತೆರವು ಮಾಡಿ. ತಕ್ಷಣವೇ ಕಷ್ಟಗಳನ್ನು ದೂರ ಮಾಡಿ ಕೊಳ್ಳಿ.

Leave A Reply

Your email address will not be published.