ತಂಗಡಿ ಗಿಡದ ಹೊ ನಿಂದ ಚರ್ಮದ ಕಲೆಗಳನ್ನು ತೆಗೆಯಬಹುದು , ರಸ್ತೆ ಬದಿಯ ಔಷಧಿ ಗಿಡ!

ತಂಗಡಿಕೆ ಗಿಡವು ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿರುತ್ತದೆ. ತಂಗಡಿಕೆ ಇನ್ನೊಂದು ಹೆಸರು ಹೊನ್ನು ಬಾರಿಕೆ ಅಂದರೆ ಬಂಗಾರ. ಅಂಬರ ಅಂದರೆ ಆಕಾಶ. ಇದು ಸಾಮಾನ್ಯವಾಗಿ ಬೆಳೆದಿರುತ್ತದೆ. ಇದಕ್ಕೆ ನೀರು ಹಾಕುವುದಿಲ್ಲ ಬೀಜ ಹಾಕುವುದಿಲ್ಲ. ಇದು ಬಿಜಾಪುರ ಜಿಲ್ಲೆಯಲ್ಲಿ ಯತೇಚ್ಛವಾಗಿ ಬೆಳೆದಿರುತ್ತದೆ..ಇದು ಸಾಮಾನ್ಯವಾಗಿ ಹುಣಸೆ ಎಲೆಯ ಆಕಾರದಲ್ಲಿ ಇರುತ್ತದೆ. ಇದು ಶರಪುಂಕ ಹೊಂದಿರುತ್ತದೆ.

ಇದರ ಹೂಗಳು ನವಂಬರ್ ಇಂದ ಡಿಸೆಂಬರ್ ವರೆಗೆ ಇರುತ್ತವೆ.ಆನಂತರ ಕಾಯಿಗಳು ಬರುತ್ತವೆ. ಕಾಯಿಗಳು ಒಣಗಿ ಬೀಜ ಆಗುತ್ತದೆ. ಇದರ ಬೇರಿನಿಂದ ಪುರುಷರ ಲೈಂಗಿಕ ಸಮಸ್ಯೆಯನ್ನು ದೂರ ಮಾಡುತ್ತದೆ. ಈಶನ್ಯ ದಿಕ್ಕಿನ ಬೇರನ್ನು ಕತ್ತರಿಸಿ ಒಣಗಿಸಿ ಹಾಲಿನ ಜೊತೆ ಸೇವಿಸುತ್ತ ಬಂದರೆ ಪುರುಷರ ಶಕ್ತಿ ಜಾಸ್ತಿ ಆಗುತ್ತದೆ.

ಇದರ ಹೂವಿನಿಂದ ಗಾಯಗಳು ಅಥವಾ ಸುಟ್ಟಿರುವ ಕಲೆಗಳು. ಹೂವು ಕಾಯನ್ನು ಬಿಡಿಸಿ ಅಂಚಿನಲ್ಲಿ ಉರಿದು ಕಪ್ಪು ಬಣ್ಣ ಬಂದ ತಕ್ಷಣ ಪುಡಿ ಮಾಡಿ ಇಟ್ಟುಕೊಳ್ಳಿ. ಈ ಪುಡಿಗೆ ಎಣ್ಣೆಯನ್ನು ಮಿಕ್ಸ್ ಮಾಡಿ ಗಾಯ ಇರುವ ಜಾಗಕ್ಕೆ ಹಚ್ಚಿದರೆ ಗಾಯ ಬೇಗಾ ನಿವಾರಣೆ ಆಗುತ್ತದೆ.

ಇನ್ನು ಈ ಹೂವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಬಿಸಿಲಿಗೆ ಇಡಬೇಕು. ನಂತರ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಇನ್ನು ಈ ಗಿಡದ ಕಾಯಿಯನ್ನು ಹಾಲಿಗೆ ಹಾಕಿ ಕುಡಿದರೆ ರುಚಿಯಾಗಿರುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು.

Leave a Comment