ರುದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿಲ್ಲದ 10 ವೈಜ್ಞಾನಿಕ ರಹಸ್ಯಗಳು ಮತ್ತು ಮಹತ್ವಗಳು

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯು ತುಂಬಾ ಮಹತ್ವ ಸ್ಥಾನವನ್ನು ಪಡೆದುಕೊಂಡಿದೆ. ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ಕೆಲವು ವಿಶೇಷ ಶಕ್ತಿಯು ನಮಗೆ ದೊರೆಯುತ್ತದೆ. ಇದು ಎಲ್ಲಿ ಸಿಗುತ್ತದೆ ಯಾವ ರೀತಿ ರುದ್ರಾಕ್ಷಿ ಧರಿಸಬೇಕು ಯಾರು ಯಾರು ಬಳಸಬಹುದು ಎಂದು ತಿಳಿದುಕೊಳ್ಳೋಣ.

ರುದ್ರಾಕ್ಷಿಯನ್ನು ಶಿವನ ಮೂರನೇ ಕಣ್ಣು ಎಂದು ಪರಿಗಣಿಸಲಾಗಿದೆ. ರುದ್ರಾಕ್ಷಿಯನ್ನು ಪೂಜೆಯಲ್ಲಿ ಬಳಸುತ್ತಾರೆ ಮತ್ತು ಜಪಮಾಲೆಯಲ್ಲಿ ಮತ್ತು ಕೊರಳಿಗೆ ಧರಿಸಲು ಬಳಸುತ್ತಾರೆ. ರುದ್ರಾಕ್ಷಿಯು ರುದ್ರಾಕ್ಷಿ ಮರದ ಒಣ ಬೀಜವಾಗಿದೆ. ಈ ಗಿಡವು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ರುದ್ರಾಕ್ಷಿಯನ್ನು ರೇಷ್ಮೆ ನೌಲು ಅಥವಾ ಅತ್ತಿ ನೂಲಿನಲ್ಲಿ ಪೋಣಿಸಿ ಬಳಸುತ್ತಾರೆ.

ರುದ್ರಾಕ್ಷಿಯ ಮಹತ್ವ ಇದನ್ನು ಸಾಮಾನ್ಯವಾಗಿ ಸನ್ಯಾಸಿಗಳು ಋಷಿಮುನಿಗಳು ಹೆಚ್ಚಾಗಿ ಬಳಸುತ್ತಾರೆ. ರುದ್ರಾಕ್ಷಿಯನ್ನು ಧರಿಸಿದಾಗ ಇದು ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಜಾತಿಭೇದ ಭಾವವಿಲ್ಲದೆ ರುದ್ರಾಕ್ಷಿಯನ್ನು ಎಲ್ಲರೂ ಸಹ ಧರಿಸಬಹುದು. ರುದ್ರಾಕ್ಷಿಯನ್ನು ಧರಿಸಿದರೆ ಬೇರೆ ಶಕ್ತಿಗಳು ನಿಮ್ಮ ದೇಹವನ್ನು ಬಾಧಿಸುವುದಿಲ್ಲ. ಇದು ವಿಷದ ವಿರುದ್ಧ ಹೋರಾಡುವುದು. ಅನೇಕ ಋಷಿಮುನಿಗಳು ರುದ್ರಾಕ್ಷಿಯನ್ನು ಮಾಲೆಯಾಗಿ ಧರಿಸುತ್ತಿದ್ದರು. ಅವರು ಹೆಚ್ಚು ನಡೆಯುತ್ತಿದ್ದರು ಈ ರುದ್ರಾಕ್ಷಿ ಅವರಿಗೆ ತುಂಬಾ ಸಹಕಾರಿಯಾಗುತ್ತಿತ್ತು. ರುದ್ರಾಕ್ಷಿಯಿಂದ ನಮ್ಮ ಪ್ರಯಾಣದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು.

ರುದ್ರಾಕ್ಷಿ ಮಣಿಯನ್ನು ಧರಿಸುವುದರಿಂದ ಇದು ಅಧಿಕ ಒತ್ತಡವನ್ನು ತಡೆಯುತ್ತದೆ. ಇದನ್ನು ಅನೇಕ ಪೂಜೆ ಹೋಮ ಅವಮಾನಗಳಲ್ಲಿ ಬಳಸುತ್ತಾರೆ ಮೂರು ಮುಖ ಅಥವಾ ಐದು ಮುಖದ ರುದ್ರಾಕ್ಷಿಯನ್ನು ಒಂದು ಲೋಟ ನೀರಿಗೆ ಹಾಕಿ ಇಡಬೇಕು. ಮರುದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ರುದ್ರಾಕ್ಷಿಯ ನೀರನ್ನು ಸೇವಿಸಬೇಕು ಇದರಿಂದ ಅಜೀರ್ಣತೆಯ ದೂರವಾಗುತ್ತದೆ.

ರುದ್ರಾಕ್ಷಿಯನ್ನು ಯಾರು ಬೇಕಾದರೂ ದರಿಸಬಹುದಾಗಿದೆ ಇದರ ಮೇಲೆ ನಂಬಿಕೆ ಇದ್ದರೆ ಮಾತ್ರ ಇದರ ಪ್ರಯೋಜನವನ್ನು ನಾವು ತೆಗೆದುಕೊಳ್ಳಲು ಸಾಧ್ಯ. ರುದ್ರಾಕ್ಷಿಯನ್ನು ಧರಿಸುವುದರಿಂದ ಮನಸ್ಸಿನ ಏಕಾಗ್ರತೆಯು ಹೆಚ್ಚಾಗುತ್ತದೆ. ಈ ಕಾರಣದಿಂದ ಇದನ್ನು ಯಾರು ಬೇಕಾದರೂ ಧರಿಸಬಹುದು. ಇದು ನಮ್ಮ ಜೀವನದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಬೇರೆ ಬೇರೆ ಮುಖದ ರುದ್ರಾಕ್ಷಿಯನ್ನು ನೀವು ಬಳಸಬಹುದು. ರುದ್ರಾಕ್ಷಿಯನ್ನು ಚಿನ್ನ ಅಥವಾ ತಾಮ್ರ ಬೆಳ್ಳಿ ಇವುಗಳಲ್ಲಿ ಸರವನ್ನು ಮಾಡಿ ಧರಿಸಬಹುದು.

ಪಂಚಮುಖಿ ರುದ್ರಾಕ್ಷಿ ಇದನ್ನು 14 ವರ್ಷಕ್ಕಿಂತ ಹೆಚ್ಚು ಮೇಲ್ಪಟ್ಟಿರುವವರು ಬಳಸಬಹುದು. ಆರು ಮುಖದ ರುದ್ರಾಕ್ಷಿ ಇದನ್ನು 14 ವರ್ಷದ ಕೆಳಗಿನ ವ್ಯಕ್ತಿಗಳು ಧರಿಸಬೇಕು. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

Leave a Comment