ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿ ಇಟ್ಟರೆ ನಿಮ್ಮ ಮನೆಗೆ ದುಡ್ಡೇ ದುಡ್ಡು

0 758

ಇಂದು ಸಂಪ್ರದಾಯದಲ್ಲಿ ಲೋಹಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ತಾಮ್ರಕ್ಕೆ ನೀಡಲಾಗುತ್ತದೆ. ಮನೆಯಲ್ಲಿ ಒಂದು ಚಿಕ್ಕ ತಾಮ್ರದ ತುಂಡು ಇದ್ದರೆ ಸಾಕು, ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ತಾಮ್ರವು ಆರೋಗ್ಯಕ್ಕೆ ಉತ್ತಮವಾದ ಲೋಹ ಎಂದು ಸಹ ಪರಿಗಣಿಸಲಾಗಿದೆ. ಹಳೆಯ ಕಾಲದ ಪೂರ್ವಜರು ಅಡುಗೆಗಾಗಿ ತಾಮ್ರತ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದರು.

ತಾಮ್ರದಿಂದ ಆಗುವ ಉಪಯೋಗಗಳು ಒಂದು ಎರಡು ಅಲ್ಲ. ಇದನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಆಕರ್ಷಿಸಲಾಗುತ್ತದೆ. ಅದರಲ್ಲೂ ತಾಮ್ರದ ತಂಬಿಗೆಯನ್ನು ನೀರು ತುಂಬಿ ಈ ಸ್ಥಳದಲ್ಲಿ ಇಟ್ಟರೆ ನಿಮ್ಮ ಅದೃಷ್ಟದ ಬಾಗಿಲುಗಳು ತೆರೆಯುತ್ತದೆ. ಅಷ್ಟೇ ಅಲ್ಲದೆ ಐಶ್ವರ್ಯ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ನೆಲೆಯೂರುತ್ತಾಳೆ.

ಅಡುಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಇಟ್ಟರೆ ನಿಮ್ಮ ಮನೆಯು ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರವಾಗುತ್ತದೆ. ಎಷ್ಟೇ ದುಡಿಯುತ್ತಾ ಬಂದರೂ ನಿಮಗೆ ಫಲಿತಾಂಶ ಸಿಗುತ್ತಿಲ್ಲವೆಂದರೆ ನೀವು ಮಲಗುವ ಮಂಚದ ಕೆಳಗೆ ಅದರಲ್ಲೂ ತಲೆಯ ಭಾಗದ ಕೆಳಗೆ ಒಂದು ತಾಮ್ರದ ಬಟ್ಟಲಿಗೆ ನೀರನ್ನು ತುಂಬಿ ಅದಕ್ಕೆ ಗಂಧದ ಪುಡಿಯನ್ನು ಸೇರಿಸಿ ನಿಮ್ಮ ತಲೆಯ ಕೆಳಗೆ ಅಂದರೆ ಮಂಚದ ಕೆಳಗೆ ಇಟ್ಟು ಮಲಗುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ನಂತರ ಮಾರನೇ ದಿನ ಎದ್ದು ಸ್ನಾನ ಮಾಡಿ ಆ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು ಇದರಿಂದ ನಿಮ್ಮ ದುರಾದೃಷ್ಟಗಳು ದೂರವಾಗುತ್ತದೆ. ದೇವರ ಕೋಣೆಯಲ್ಲಿ ಶಿವನ ಮುಂದೆ ಅಥವಾ ಯಾವುದೇ ದೇವರ ಭಾವಚಿತ್ರದ ಮುಂದೆ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಇಟ್ಟರೆ ಅದು ದನಾಕರ್ಷಣೆಗೆ ಒಳಪಡುತ್ತದೆ. ಬೆಳಗಿನ ಸಮಯದಲ್ಲಿ ತಾಮ್ರದ ತಂಬಿಗೆಯಿಂದ ನೀರನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಅದೃಷ್ಟವೂ ಒಲಿತು ಬರುತ್ತದೆ.

Leave A Reply

Your email address will not be published.