ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು? ಖಿನ್ನತೆಯಾಗುವುದು ಒಬ್ಬ … Read more