ವಾಸ್ತು ಪ್ರಕಾರ ಮನೆಯ ಈ ಕೆಲವು ಜಾಗಗಳಲ್ಲಿ ಚಪ್ಪಲಿ ಶೂ ಧರಿಸಬೇಡಿ!ತೊಂದರೆ ಗ್ಯಾರಂಟಿ

ಮನೆಕಟ್ಟಿ ವಾಸ್ತುಪ್ರಕಾರ ಮದುವೆ ಮಾಡಿ ಜಾತಕದ ಪ್ರಕಾರ.ಇದು ಹಿರಿಯರು ಹೇಳಿರುವ ಮಾತು. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತು ಇದೆ. ಇವೆರಡನ್ನು ಮಾಡಿ ಮುಗಿಸುವುದು ದೊಡ್ಡ ಕೆಲಸ. ಮನೆ ಕಟ್ಟುವುದು ಜೀವನದಲ್ಲಿ ಒಂದೇ ಬಾರಿ. ಜೀವನ ಉದ್ದಕ್ಕೂ ಮಕ್ಕಳು-ಮರಿ ಜೀವಿಸುವುದು ಇದೇ ಗೂಡಿನಲ್ಲಿ.ಹೀಗಾಗಿ ಎಲ್ಲವು ವಾಸ್ತು ಪ್ರಕಾರ ಇರಲಿ ಎಂದು ವಾಸ್ತು ಪ್ರಕಾರ ಮನೆಯನ್ನು ಕಟ್ಟಿಸುತ್ತಾರೆ.ಅದರೆ ಮನೆ ಕಟ್ಟಿ ಆದಂತೆ ವಾಸ್ತು ಎನ್ನುವುದನ್ನು ಮರೆತು ಬಿಡುತ್ತಾರೆ.

ಮನೆ ವಾಸ್ತವಾಗಿ ಇದ್ದರೆ ಸಾಲದು ಮನೆಯಲ್ಲಿರುವ ಕೆಲವು ವಸ್ತುಗಳು ವಾಸ್ತು ಪ್ರಕಾರವಾಗಿ ಇರಬೇಕು. ಅದರಲ್ಲೂ ಮುಖ್ಯವಾಗಿ ಚಪ್ಪಲಿಗಳನ್ನು ಇತ್ತೀಚಿನ ದಿನಗಳಲ್ಲಿ ಮನೆಯ ಒಳಗೆ ಕೂಡ ಹಾಕಿಕೊಂಡು ಓಡಾಡುವುದಕ್ಕೆ ಶುರುಮಾಡಿದ್ದಾರೆ. ದೇವರ ಕೋಣೆಯಿಂದ ಹಿಡಿದು ಮನೆಯ ಮೂಲೆ ಮೂಲೆಗೂ ಚಪ್ಪಲಿಯನ್ನು ಹಾಕಿಕೊಂಡು ಓಡಾಡುತ್ತಾರೆ. ಯಾವುದೇ ಕಾರಣಕ್ಕೂ ಮನೆಯ ಈ 5 ಜಾಗದಲ್ಲಿ ಶೂ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡಬಾರದು.

1, ಯಾವುದೇ ಮನೆಯಲ್ಲಾದರೂ ಸ್ಟೋರ್ ರೂಮ್ ಇದ್ದೆ ಇರುತ್ತದೆ.ಅಕ್ಕಿ ದವಸ ದಾನ್ಯಗಳನ್ನು ಈ ರೂಮ್ ನಲ್ಲಿ ಇಟ್ಟಿರುತ್ತಾರೆ.ಇವುಗಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಆದ್ದರಿಂದ ಚಪ್ಪಲಿ ಧರಿಸಿ ಹೋಗುವುದು ಶುಭವಲ್ಲ.

2, ತಿಜೋರಿ ಇಡುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಓಡಾಡಬಾರದು.ಏಕೆಂದರೆ ಹಣ ಇಡುವ ಸ್ಥಳ ಲಕ್ಷ್ಮಿಯ ವಾಸ ಸ್ಥಳ ಆಗಿರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿ ಹತ್ತಿರ ಚಪ್ಪಲಿಯನ್ನು ಕೂಡ ಬಿಡಬಾರದು.

3, ಮನೆಯಲ್ಲಿ ದೇವರ ಮನೆ ಬಿಟ್ಟರೆ ಅಡುಗೆ ಮನೆಗೆ ಮಹತ್ವ ಸ್ಥಾನವಿದೇ.ಲಕ್ಷ್ಮಿ ದೇವಿಗೆ ಅಡುಗೆ ಮನೆ ಎಂದರೆ ತುಂಬಾನೇ ಪ್ರೀತಿ.ಅಡುಗೆ ಮನೆಯಲ್ಲಿ ಚಪ್ಪಲಿ ಬಿಡುವುದು ಮತ್ತು ಹಾಕಿಕೊಂಡು ಓಡಾಡುವುದನ್ನು ಎಂದಿಗೂ ಮಾಡಬಾರದು.

4, ಪೂಜಾ ಮಂದಿರಕ್ಕೂ ಚಪ್ಪಲಿ ಶೂ ಅನ್ನು ಹಾಕಿಕೊಂಡು ಹೋಗಬಾರದು.
5, ಊರೆಲ್ಲ ಸುತ್ತಿಕೊಂಡು ಬರುವ ಚಪ್ಪಲಿಗೆ ಮನೆಯ ಹೊರಗೆ ಬಿಡಬೇಕು. ಮನೆ ಮುಂದೆ ಚಪ್ಪಲಿ ಬಿಡುಬಾರದು ಮತ್ತು ಚಪ್ಪಲಿಗಳನ್ನು ಸರಿಯಾಗಿ ಇಡಬೇಕು.ಹಾಗಾಗಿ ಚಪ್ಪಲಿ ವಿಷಯದಲ್ಲಿ ಜೋಪಾನವಾಗಿ ಇರಿ.ಒಂದು ವೇಳೆ ಈ ರೀತಿ ತಪ್ಪು ಮಾಡಿದರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ ಮತ್ತು ನಷ್ಟ ಆಗುವ ಸಾಧ್ಯತೆ ಇದೆ.

Leave a Comment