ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

0 1,161

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ.

ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು ಕೂಡಾ ಚರ್ಮ ಹೊರಹಾಕಲು ಪ್ರಾರಂಭ ಮಾಡುತ್ತದೆ.

ಅದೇ ಈ ವಿಪರೀತ ನೋವಿನ ಕುರಗಳು,ಕಜ್ಜಿಗಳು ಬಹಳ ಕಾಡುತ್ತದೆ.ಅದಕ್ಕೆ ಹಲವಾರು ಮನೆಮದ್ದು ಗಳು ಇರುತ್ತವೆ.ಅದರಲ್ಲಿ ನೆಲಸುರುಳಿಯ ಮನೆಮದ್ದು ಕೂಡಾ ನೆನಪಿಟ್ಟುಕೊಳ್ಳಿ, ಅಗತ್ಯ ಬಂದಾಗ ಬಳಸಿ.. ನಿಮ್ಮ ಸಮಸ್ಯೆ ಗೆ ಪರಿಹಾರವನ್ನು ಪಡೆದುಕೊಳ್ಳಿ.ಬಹಳ ಉತ್ತಮ ಫಲಿತಾಂಶ ದೊರೆಯಲಿದೆ.ಹದಗಡಲೆ ಎಂಬುದು ದೇಹ ಹೆಚ್ಚು ನೋಯುವಾಗಲೇ ನರಗಳಲ್ಲಿ ಕಾಣಿಸಿಕೊಳ್ಳುತ್ತದೆ.ಮಕ್ಕಳಿಗೆ ಹೆಚ್ಚು ಕಂಡುಬರುತ್ತದೆ.ಕಾರಣ ಅವರು ಹಾರುವುದು,ನೆಗೆಯುವುದು ಇಂಥದ್ದು ಸಾಮಾನ್ಯ

ಎಲ್ಲೋ ಉಳುಕಿನಂತಹ ನೋವು ಆದಾಗಲೂ ಕೂಡಾ, ತೊಡೆಯ ಸಂದುಗಳಲ್ಲೂ ಸಾಲಾಗಿ ಇವು ಎದ್ದು ಬಿಡುತ್ತದೆ..ಈ ಹದಗಡಲೆಗೆ ಈಗಾಗಲೇ ಹಿಂದೆ ಮನೆಮದ್ದು ತಿಳಿಸಿದ್ದೇನೆ …ನೋಡಿ ಮಾಡಿ ಬಳಸಿ.ಏಕೆಂದರೇ? ಒಂದೊಂದು ಸಮಸ್ಯೆಗೆ ಒಂದೊಂದು ಪರಿಹಾರ ವಿಶೇಷ ವಾಗಿ ಬೇರೆ ಬೇರೆ ಇರುತ್ತದೆ..

ಧನ್ಯವಾದಗಳ

Leave A Reply

Your email address will not be published.