ತುಳಸಿಗೆ ಯಾವ ದಿನ ನೀರು ಹಾಕಬಾರದು…! ತುಳಸಿ ಪೂಜೆ ಮಾಡುವ ವಿಧಾನ!

ತುಳಸಿ ವಿಶೇಷತೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಯಾವ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಒಂದು ಮನೆ ತುಂಬಾನೇ ಶ್ರೇಷ್ಠ ಆಗುತ್ತದೆ ಎಂದು ಹೇಳಬಹುದು. ಇದರಿಂದ ಲಕ್ಷ್ಮಿ ದೇವಿ ಕೃಪೆ ಸದಾಕಾಲ ಮನೆಯ ಮೇಲೆ ಇರುತ್ತದೆ.ತುಳಸಿ ಗಿಡ ಮನೆಯಲ್ಲಿ ಇದ್ದಾಗ ಯಾವ ರೀತಿ ತಪ್ಪುಗಳನ್ನು ಮಾಡಬಾರದು ಎನ್ನುವುದು ಮನೆಯವರಿಗೆ ಗೊತ್ತಿರುವುದಿಲ್ಲಾ.

1, ತುಳಸಿ ಪಾರ್ಟ್ ನಲ್ಲಿ ಇರುವ ಮಣ್ಣನ್ನು ಸ್ವಚ್ಛವಾಗಿ ಇಡಬೇಕು.ಒಂದು ವೇಳೆ ಕಸ ಇದ್ದಾರೆ ಲಕ್ಷ್ಮಿ ಬೇಸರಗೊಳ್ಳುತ್ತಾಳೆ ಮತ್ತು ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ.ಹಾಗಾಗಿ ಈ ಒಂದು ಚಿಕ್ಕ ವಿಚಾರವನ್ನು ನೀವು ನೆನಪಿನಲ್ಲಿ ಇಟ್ಟುಕೊಂಡು ಸ್ವಚ್ಛವಾಗಿ ತುಳಸಿ ಗಿಡವನ್ನು ಇಟ್ಟುಕೊಳ್ಳಿ.

2, ತುಳಸಿ ಎಲೆಯನ್ನು ಎಂದಿಗೂ ಕೂಡ ಒಣಗುವುದಕ್ಕೆ ಬಿಡಬಾರದು.ಒಣಗಿದ ಎಲೆಯನ್ನು ಕಿತ್ತು ನೀರಿಗೆ ವಿಸರ್ಜನೆ ಮಾಡಿದರೆ ಒಳ್ಳೆಯದು.ಯಾವುದೇ ಕಾರಣಕ್ಕೂ ಒಣಗಿದ ಎಲೆಯನ್ನು ಗಿಡದಲ್ಲಿ ಬಿಡಬಾರದು.ಇದರಿಂದ ದಾರಿದ್ರ ಬರುವ ಸಾಧ್ಯತೆ ಇದೆ.

3, ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡಕ್ಕೆ ಯಾವುದೇ ಕಾರಣಕ್ಕೂ ನೀರನ್ನು ಹಾಕಬಾರದು.

4,ಇನ್ನು ತುಳಸಿ ಗಿಡಕ್ಕೆ ಜಲ ಅರ್ಪಣೆ ಮಾಡುವಾಗ ಚಪ್ಪಲಿ ಧರಿಸಿಕೊಂಡು ಎಂದಿಗೂ ಜಲವನ್ನು ಹಾಕಬಾರದು. ಏಕೆಂದರೆ ತುಳಸಿ ಗಿಡವನ್ನು ದೇವರಿಗೆ ಹೋಲಿಸಲಾಗಿದೆ. ಹಾಗಾಗಿ ಚಪ್ಪಲಿ ಹಾಕಿಕೊಂಡು ನೀರನ್ನು ಹಾಕಬಾರದು.

5, ತುಳಸಿ ಗಿಡ ಪೊಟ್ ನಲ್ಲಿ ಮತ್ತೊಂದು ಗಿಡ ಹುಟ್ಟಿದರೆ ತುಂಬಾನೇ ಒಳ್ಳೆಯದು. ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತದೆ.ಈ ಗಿಡವನ್ನು ತೆಗೆದು ಅಕ್ಕ ಪಕ್ಕದವರಿಗೆ ಕೊಡಬಹುದು.ಯಾವುದೇ ಕಾರಣಕ್ಕೂ ಇದನ್ನು ಎಸೆಯಬಾರದು.

6, ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡವನ್ನು ನೋಡುವುದರಿಂದ ಒಳ್ಳೆಯ ಲಾಭ ಸಿಗುತ್ತದೆ .

Leave A Reply

Your email address will not be published.