ಎಷ್ಟು ದಿನಕೊಮ್ಮೆ ದೇವರ ಗೆಜ್ಜೆ ವಸ್ತ್ರವನ್ನು ಬದಲಾಯಿಸಬೇಕು ನಮ್ಮ ದಾರಿದ್ರ್ಯ ಕಳೆಯು……..

ಸಾಮಾನ್ಯವಾಗಿ ಮನೆಯಲ್ಲಿ ದೇವರ ಫೋಟೋಗೆ ಅಥವಾ ವಿಗ್ರಹಗಳಿಗೆ ಕಳಶ ಗಳಿಗೆ ಗೆಜ್ಜೆ ವಸ್ತ್ರವನ್ನು ಹಾಕುವುದನ್ನು ನೋಡುತ್ತೇವೆ, ಇದು ಪೂಜಾ ಕಾರ್ಯದ ಒಂದು ಸಂಪ್ರದಾಯಿಕ ಪದ್ಧತಿ ಹಿಂದಿನಿಂದಲೂ ಕೂಡ ಬಂದಿದೆ, ದೇವಾಲಯಗಳಲ್ಲಿಯು ಕೂಡ ದೇವರಿಗೆ ಗೆಜ್ಜೆ ವಸ್ತ್ರವನ್ನು ಹಾಕುವುದು ವಿಶೇಷ. ಸಾಮಾನ್ಯವಾಗಿ ಮನೆಯಲ್ಲಿ ದೇವರಿಗೆ ಗೆಜ್ಜೆ ವಸ್ತ್ರವನ್ನು ಬಳಸುವಾಗ ಸಾಕಷ್ಟು ಸಂಶಯಗಳು ಬರುತ್ತವೆ ಗೆಜ್ಜೆ ವಸ್ತ್ರ ಯಾವ ರೀತಿಯಾಗಿರಬೇಕು ಎಷ್ಟು ಎಳೆಯ ಗೆಜ್ಜೆ ವಸ್ತ್ರ ಹಾಕಿದರೆ ಒಳ್ಳೆಯದು ಮತ್ತು ಅದನ್ನು ಬಳಸುವ ರೀತಿ ಹಾಗೂ ಬದಲಾಯಿಸುವುದರ ಬಗ್ಗೆ ಸಾಕಷ್ಟು ಅನುಮಾನಗಳು ಇರುತ್ತವೆ, ಹಾಗಾದರೆ ದೇವರಿಗೆ ಹಾಕುವ ಗೆಜ್ಜೆ ವಸ್ತ್ರ ಯಾವ ರೀತಿ ಇರಬೇಕು ಹಾಕಬೇಕು ಮತ್ತು ಯಾವಾಗ ಬದಲಾಯಿಸಬೇಕು ಎನ್ನುವುದನ್ನು ನೋಡೋಣ.

ಮೊದಲನೆಯದಾಗಿ ದೇವರಿಗೆ ಮಾಡುವಂತಹಾ ಗೆಜ್ಜೇವಸ್ತ್ರದ ಹತ್ತಿಯ ಕಡೆ ಗಮನ ಕೊಡಬೇಕು, ಯಾವಾಗಲೂ ಗೆಜ್ಜೆವಸ್ತ್ರ ಮಾಡುವ ಹತ್ತಿರ ಶುದ್ಧವಾಗಿರಬೇಕು, ಹಾಗಾಗಿ ನೀವು ಮನೆಯಲ್ಲಿ ಶುದ್ಧವಾದ ಹತ್ತಿಯನ್ನು ತೆಗೆದುಕೊಂಡು ನೀವೇ ಗೆಜ್ಜೆವಸ್ತ್ರ ವನ್ನು ತಯಾರಿಸುವುದು ಒಳ್ಳೆಯದು, ಹೊರಗಡೆ ನೀವು ನೇರವಾಗಿ ಗೆಜ್ಜೆ ವಸ್ತ್ರವನ್ನು ತೆಗೆದುಕೊಳ್ಳುತ್ತೇನೆ ಎಂದರೆ ಶುದ್ಧವಾದ ಹತ್ತಿಯನ್ನು ಪರಿಶೀಲಿಸಿ ನಂತರ ತೆಗೆದುಕೊಳ್ಳಿ. ಇನ್ನು ಎರಡನೆಯದಾಗಿ ಗೆಜ್ಜೆ ವಸ್ತ್ರದಲ್ಲಿ ಎಷ್ಟು ಕುಂಕುಮದ ಅಚ್ಚುಗಳು ಇರಬೇಕು ಎಂದು ನೋಡುವುದಾದರೆ 21 ಕುಂಕುಮದ ಅಚ್ಚುಗಳು ಇರಬೇಕು ಅಥವಾ 21 ಹತ್ತಿಯ ಉಂಡೆಗಳು ಇರುವ ಹಾಗೆ ನೀವು ಗೆಜ್ಜೆ ವಸ್ತ್ರವನ್ನು ಧರಿಸಬೇಕು. ಇನ್ನು ಎಷ್ಟು ಎಳೆಯ ಗೆಜ್ಜೆ ವಸ್ತ್ರವನ್ನು ಧರಿಸಬೇಕು ಎಂದರೆ ಎರಡು ಎಳೆಯ ಗೆಜ್ಜೆ ವಸ್ತ್ರವನ್ನು ಧರಿಸಬೇಕು ಯಾವುದೇ ಕಾರಣಕ್ಕೂ ಒಂದು ಎಳೆಯ ಗೆಜ್ಜೆ ವಸ್ತ್ರವನ್ನು ಧರಿಸುವುದು ಅಷ್ಟು ಒಳ್ಳೆಯದಲ್ಲ.

ನೀವು ಇಪ್ಪತ್ತೊಂದು ಹತ್ತಿಯ ಉಂಡೆ ಇರುವಂತಹ ಗೆಜ್ಜೆ ವಸ್ತ್ರವನ್ನೇ 2 ಎಳೆಯನ್ನಾಗಿ ಮಾಡಿ ದೇವರಿಗೆ ಹಾಕಬಹುದು. ಕಳಶಕ್ಕೆ ಗೆಜ್ಜೆ ವಸ್ತ್ರವನ್ನು ಹಾಕುವಾಗ ಎರಡು ಅಥವಾ 5 ಎಳೆಯ ಗೆಜ್ಜೆ ವಸ್ತ್ರವನ್ನು ಹಾಕಬಹುದು, ಇನ್ನು ಶ್ರೀನಿವಾಸ ಅಥವಾ ತಿರುಪತಿ ತಿಮ್ಮಪ್ಪನಿಗೆ ಗೆಜ್ಜೆ ವಸ್ತ್ರ ಹಾಕುವಾಗ ಮೂರು ಎಳೆಯಲ್ಲಿ ಹಾಕಬಹುದು. ಎಲ್ಲಾ ದೇವರಿಗೂ ಕೂಡ ಗೆಜ್ಜೆ ವಸ್ತ್ರವನ್ನು ಹಾಕಬಹುದು, ಕೆಲವೊಮ್ಮೆ ದೇವರಫೋಟೋ ಗೆ ಹೊಗಳು ಇಲ್ಲ ಎನ್ನುವ ಸಂದರ್ಭದಲ್ಲಿ ಗೆಜ್ಜೆ ವಸ್ತ್ರವನ್ನೇ ಹಾಕಿ ಪೂಜೆಯನ್ನು ಮಾಡಬಹುದು. ಇನ್ನು ಯಾವಾಗ ಗೆಜ್ಜೆ ವಸ್ತ್ರವನ್ನು ಬದಲಾಯಿಸಬೇಕು ಎಂದರೆ ಪ್ರತಿಸಾರಿ ನೀವು ದೇವರ ವಿಗ್ರಹ, ದೇವರ ಫೋಟೋವನ್ನು ಸ್ವಚ್ಛ ಮಾಡಿದ ನಂತರ ಹೊಸದಾದ ಗೆಜ್ಜೆ ವಸ್ತ್ರವನ್ನು ಹಾಕಬೇಕು ಯಾವುದೇ ಕಾರಣಕ್ಕೂ ಹಳೆಯ ಗೆಜ್ಜೆ ವಸ್ತ್ರವನ್ನು ಮತ್ತೆ ಹಾಕಬಾರದು ಕಡ್ಡಾಯವಾಗಿ ನೀವು ದೇವರ ಫೋಟೋ ವಿಗ್ರಹವನ್ನು ಸ್ವಚ್ಛ ಮಾಡಿದಾಗ ಹೊಸ ಗೆಜ್ಜೆ ವಸ್ತ್ರ ಹಾಕಬೇಕು.

Leave a Comment