ಶಂಖ ಪುಷ್ಪ ಈ ಗಿಡ ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ!

ಶಂಖ ಪುಷ್ಪ ದೇವರಿಗೆ ಪ್ರಿಯವಾದ ಹೂ .ಶಂಖ ಪುಷ್ಪ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಒಂದಾಗಿದೆ ಬಳ್ಳಿ ರೂಪದಲ್ಲಿ ಬೆಳೆದು ಹೂವು ಬಿಡುವ ಈ ಗಿಡ, ಕೋನ್ ಫ್ಲವರ್ ಫ್ಯಾಬಾಸೀ ಸೇರಿದ ಒಂದು ಬಳ್ಳಿ. ಇವುಗಳನ್ನು ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯಲಾಗುತ್ತದೆ. ಶಂಖ ಪುಷ್ಪ ಹೂವು ವಿಷ್ಣುಕ್ರಾಂತ ಮರಕ್ಕೆ ಸೇರಿದೆ. ಅದಾಗ್ಯೂ ಈ ಹೂವನ್ನು ದೇವರ ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇನ್ನು ಇದನ್ನು ದೇವರ ಪೂಜೆಗೆ ಮಾತ್ರವಲ್ಲದೇ ಶಂಖ ಪುಷ್ಪ ಹೂವು ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ರೈತರು ಶಂಖ ಪುಷ್ಪ ಬೆಳೆಯುವಲ್ಲಿ ಗಮನಹರಿಸುತ್ತಿದ್ದಾರೆ. ಆ ಮೂಲಕ ರೈತರು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಶಂಖ ಪುಷ್ಪವನ್ನು ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

ಶಂಖ ಪುಷ್ಪದ ಆರೋಗ್ಯಕರ ಪ್ರಯೋಜನಗಳು..ಹಸಿವಿನ ಹೆಚ್ಚಳ: ಶಂಖಪುಷ್ಪವು ಹಸಿವನ್ನು ಹೆಚ್ಚಿಸಲು ಸಹಾಯಕವೆಂದು ತಿಳಿದುಬಂದಿದೆ. ನಿಮಗೆ ಹಸಿವಾಗದಿದ್ದರೆ, ನೀವು ಶಂಖದ ಹೂವುಗಳನ್ನು ಸೇವಿಸಬೇಕು. ಇದರ ನಿಯಮಿತ ಬಳಕೆಯಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ. ಇದು ಹಸಿವು ಮತ್ತು ಜೀರ್ಣಕಾರಿ ಉತ್ತೇಜಕಗಳ ಗುಣಲಕ್ಷಣಗಳನ್ನು ಹೊಂದಿದೆ, ಇದು ಹಸಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮೆದುಳು ಮತ್ತು ಮನಸ್ಸಿನ ಆರೋಗ್ಯಕ್ಕೆ ಸಹಕಾರಿ: ಮೆದುಳು ಮತ್ತು ಮನಸ್ಸನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮೆಮೊರಿ ಮತ್ತು ಏಕಾಗ್ರತೆ ಹೆಚ್ಚಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇತರ ಗಿಡಮೂಲಿಕೆಗಳೊಂದಿಗೆ ಇದನ್ನು ಬೆರೆಸಿದಾಗ ಸ್ಕಿಜೋಫ್ರೇನಿಯಾ, ಖಿನ್ನತೆ, ಅಪಸ್ಮಾರ ಮತ್ತು ಆಕ್ರಮಣಕಾರಿ ನಡವಳಿಕೆಯ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿ ಎನ್ನಲಾಗುತ್ತದೆ

ಬುದ್ಧಿ ಶಕ್ತಿ ಹೆಚ್ಚಳ ಮಾಡಲು: ಶಂಖ ಪುಷ್ಪ ಹೂವು, ಎಲೆ ಮತ್ತು ಬೆರುಗಳಿಂದ ಮಾಡಿದ ಪುಡಿಯನ್ನು ಸೇವಿಸಿದರೆ ಬುದ್ಧಿ ಶಕ್ತಿಯನ್ನು ಹೆಚ್ಚಿಸಬಹುದು. ಇದು ಕಾಲೋಚಿತ ಕಾಯಿಲೆಯಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ಸಾಂಪ್ರದಾಯಿಕ ಗಿಡಮೂಲಿಕೆಯಲ್ಲಿ ಕಂಡುಬರುವ ಜೀರ್ಣಕಾರಿ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಅತ್ಯಂತ ಪ್ರಯೋಜನಕಾರಿಎಂದು ಕಂಡುಬಂದಿದೆ. ಇದು ಜೀರ್ಣರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಆ ಮೂಲಕ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆ: ಒಂದು ಲೋಟ ನೀರಿನೊಂದಿಗೆ ಪ್ರತಿದಿನ ಶಂಖದ ಹೂವನ್ನು ತೆಗೆದುಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡದ ಸಮಸ್ಯೆಯೂ ನಿವಾರಣೆಆಗುತ್ತದೆ. ರಕ್ತ ಪರಿಚಲನೆಯನ್ನು ಸರಿಪಡಿಸುವ ಮೂಲಕ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ

ಅರೆ ತಲೆ ನೋವು ನಿವಾರಣೆ: ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.ಮೂತ್ರಕೋಶದ ಕಾಯಿಲೆಗಳಿಗೆ ಚಿಕಿತ್ಸೆ: ಇನ್ನು ಶಂಖ ಪುಷ್ಪದ ಗಿಡಮೂಲಿಕೆಗಳ ಸಾರವನ್ನು ವೀರ್ಯದ ದುರ್ಬಲತೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಮೂತ್ರಕೋಶದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಎನ್ನಲಾಗುತ್ತದೆ.  ಇನ್ನು ಇದು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಇದು ಹೆಸರುವಾಸಿಯಾಗಿದೆ.

Leave a Comment