ಪೂಜೆ ಮಾಡುವಾಗ ಬರುವಂತಹ ಯೋಚನೆಗಳು!

ಪ್ರತಿ ದಿನ ನಾವು ನಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಕೆಲವೊಂದು ವಿಚಾರಗಳು ನಮ್ಮಲ್ಲಿ ಬರುತ್ತವೆ. ನಾವು ಮಾಡಿದ ಪೂಜೆ ದೇವರಿಗೆ ಸಲ್ಲಿದೆಯೋ ಅಥವಾ ಇಲ್ಲವೋ? ಒಂದು ವೇಳೆ ನಮ್ಮ ಪೂಜೆ ದೇವರಿಗೆ ಸಲ್ಲಿಸಿದರೆ ಅದು ನಮಗೆ ಹೇಗೆ ತಿಳಿಯುತ್ತದೆ ಎನ್ನುವ ವಿಚಾರಗಳು ನಮ್ಮಲ್ಲಿ ಬರುತ್ತವೆ. ಈ ವಿಚಾರಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಾವು ದೇವರಿಗೆ ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ಸಹಜವಾದ ಎತ್ತರದಲ್ಲಿಯೆ ದೀಪ ಉರಿಯುತ್ತಿರುತ್ತದೆ. ದೇವರ ದೀಪ ಹಚ್ಚಿ ನಾವು ನಮ್ಮ ಪ್ರಾರ್ಥನೆಯನ್ನು ಸಲ್ಲಿಸುವಾಗ ಅಥವಾ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ದೀಪ ಕೆಲವೊಮ್ಮೆ ಎತ್ತರದಲ್ಲಿ ಉರಿಯಲು ಆರಂಭಿಸುತ್ತದೆ. ಇದನ್ನು ಸಾಕಷ್ಟು ಜನರು ಗಮನಿಸಿರಬಹುದು ಈ ರೀತಿಯಾದಾಗ ಇದರ ಸೂಚನೆ ಅಥವಾ ಅರ್ಥ ಏನಪ್ಪಾ ಅಂದರೆ ನಮ್ಮ ಪ್ರಾರ್ಥನೆ ಅಥವಾ ನಮ್ಮ ಕೋರಿಕೆ ದೇವರಿಗೆ ಸಲ್ಲಿಸಿದೆ ಎಂದು ಅರ್ಥ. ನಾವು ಏನಾದರೂ ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು ಬಹಳ ಬೇಗ ನಮ್ಮೆಲ್ಲ ಕಷ್ಟಗಳು ದೂರವಾಗಿ ನಮ್ಮ ಇಷ್ಟಾರ್ಥ ಫಲಿಸುವುದು ಎನ್ನುವುದು ಇದರ ಅರ್ಥ ವಾಗಿರುತ್ತದೆ. ಆದರೆ ಈ ರೀತಿಯ ಭಾವನೆ ಪ್ರತಿಯೊಬ್ಬರಿಗೂ ಆಗಿರಲು ಸಾಧ್ಯವಿಲ್ಲ ಅತಿಯಾದ ದೇವರ ಮೇಲಿನ ಭಕ್ತಿಯಿಂದ ಯಾರು ಪ್ರಾರ್ಥಿಸಿಕೊಳ್ಳುತ್ತಾರೆ ಅಂತ ಅವರಿಗೆ ಮಾತ್ರ ಈ ತರದ ಭಾವನೆ ಉಂಟಾಗಬಹುದು.

ಎರಡನೆಯದಾಗಿ ಪೂಜೆ ಅಥವಾ ಪ್ರಾರ್ಥನೆ ಮಾಡುವಾಗ ಕಣ್ಣಲ್ಲಿ ನೀರು ಬರುವುದು. ಈ ರೀತಿಯ ಅನುಭವ ಸಾಕಷ್ಟು ಜನರಿಗೆ ಆಗಿರಬಹುದು. ಈ ರೀತಿಯಾಗಿ ಆಗುವುದನ್ನು ನೋಡುವುದಾದರೆ ನಿಮ್ಮ ಮನೆಯ ಸುತ್ತಮುತ್ತ ಅಥವಾ ನಿಮ್ಮ ಸುತ್ತಮುತ್ತ ಯಾವುದಾದರೂ ನಕಾರಾತ್ಮಕ ಶಕ್ತಿಗಳು ಇದ್ದರೆ, ಅಥವಾ ಇನ್ಯಾರದ್ದೋ ಒತ್ತಾಯಕ್ಕಾಗಿ ನೀವು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಕುಳಿತಾಗ ಇಂತಹ ಸಂದರ್ಭದಲ್ಲಿ ಕಣ್ಣಿನಲ್ಲಿ ನೀರು ಬರುವುದು. ನಿಮ್ಮ ಸುತ್ತಮುತ್ತಲು ಇರುವಂತಹ ನಕಾರಾತ್ಮಕ ಶಕ್ತಿಗಳು ನಿಮಗೆ ಯಾವುದೇ ಕಾರಣಕ್ಕೂ ಪೂಜೆಯನ್ನು ಸಲ್ಲಿಸಲು ಬಿಡುತ್ತಿಲ್ಲ ಎನ್ನುವುದು ಇದರ ಅರ್ಥ ಅಥವಾ ಸೂಚನೆ.

ಇನ್ನು ಮೂರನೆಯದಾಗಿ ಯಾವುದಾದರೂ ದೊಡ್ಡ ದೊಡ್ಡ ಪೂಜೆಗಳಿಗೆ ಕುಳಿತಾಗ ಕೈಕಾಲು ನೋವು ಬರುವುದು ದೂರವಾಗಿರುವುದು ಈ ರೀತಿಯ ಅನುಭವಗಳು ಸಹ ಸಾಕಷ್ಟು ಜನರಿಗೆ ಉಂಟಾಗಿರುತ್ತವೆ. ಇದರ ಅರ್ಥ ನಿಮ್ಮಲ್ಲಿ ಯಾವುದೋ ಒಂದು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಈ ನಕಾರಾತ್ಮಕ ಶಕ್ತಿ ನಿಮಗೆ ಪೂಜೆ ಮಾಡಲು ಬಿಡದೆ ಅದನ್ನು ಸರಿಯಾಗಿ ಕುಳಿತುಕೊಳ್ಳಲು ಕೂಡ ಬಿಡುವುದಿಲ್ಲ. ಮನಸ್ಸು ಏಕಾಗ್ರತೆಯಿಂದ ಇರುವುದಿಲ್ಲ. ಮನಸ್ಸಿನಲ್ಲಿ ಏಕಾಗ್ರತೆ ಬೆಳೆಸುವುದರ ಸಲುವಾಗಿ ಅಥವಾ ನಮ್ಮಲ್ಲಿರುವ ಅಥವಾ ನಮ್ಮ ಸುತ್ತಮುತ್ತಲೂ ಇರುವಂತಹ ನಕಾರಾತ್ಮಕ ಶಕ್ತಿ ಗಳನ್ನು ಹೊಡೆದೋಡಿಸುವುದರ ಸಲುವಾಗಿ ಪ್ರತಿನಿತ್ಯ ದೇವರ ಸ್ತೋತ್ರಗಳನ್ನು ಕೇಳುವುದು ಒಳ್ಳೆಯದು .

ಇನ್ನು ಕೆಲವರಿಗೆ ಪೂಜೆ ಮಾಡುತ್ತಿರುವಾಗ ಯಾವುದಾದರೂ ಕೆಟ್ಟ ಚಿತ್ರಗಳು ಅದು ಅಶ್ಲೀಲ ಚಿತ್ರಗಳು ಕಣ್ಣೆದುರು ಬಂದ ಹಾಗೆ ಆಗುತ್ತದೆ. ಇದು ಕೂಡ ನಿಮ್ಮಲ್ಲಿ ನಕಾರಾತ್ಮಕ ಶಕ್ತಿ ಇರುವಂತಹ ಒಂದು ಸೂಚನೆಯನ್ನು ನೀಡುತ್ತದೆ. ಈ ರೀತಿ ಆಗದೆ ಇರಲು ಒಂದು ಸುಲಭವಾದ ಸರಳವಾದ ಉಪಾಯ ಎಂದರೆ ಲವಂಗ ಅಥವಾ ಒಂದು ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದನ್ನು ನಮ್ಮ ತಲೆ ಮೇಲೆ ಇಟ್ಟುಕೊಳ್ಳುವುದರಿಂದ ನಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿ ಗಳನ್ನು ತೆಗೆದುಹಾಕಬಹುದು. ಪೂಜೆ ಮಾಡಲು ಕುಳಿತಾಗ ನಮಗೆ ಯಾವುದೇ ರೀತಿಯ ನಕಾರಾತ್ಮಕ ಯೋಚನೆಗಳು ಅಧ್ಯಯ ಚಿತ್ರಣಗಳು ನಮ್ಮ ಕಣ್ಣಮುಂದೆ ಬಾರದೆ ಇರುವುದು ಒಳ್ಳೆಯದು. ಹಾಗಾಗಿ ಮೇಲೆ ಹೇಳಿದಂತೆ ಉಪ್ಪು ಅಥವಾ ಲವಂಗವನ್ನು ತಲೆಯಮೇಲೆ ಇಟ್ಟುಕೊಂಡು ನೋಡಿ ಆಗ ನಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಹೋಗುತ್ತದೆ.

Leave A Reply

Your email address will not be published.