ನಿಮ್ಮ ಅದೃಷ್ಟ ಬದಲಾಗಬೇಕಾದರೆ ತುಳಸಿ ಕುಂಡದ ಮೇಲೆ ಈ ಚಿಹ್ನೆಗಳನ್ನು ಹಾಕಿ

ತುಳಸಿಕಟ್ಟೆಯಲ್ಲಿ ಮಂಗಳಕರ ಚಿಹ್ನೆ ಮೂಡಿಸಿದರೆ ಒಳ್ಳೆಯದಾಗುತ್ತದೆಯಂತೆಮಂಗಳಕರ ಚಿಹ್ನೆಗಳಿಂದ ಅದೃಷ್ಟ ಒಲಿಯುತ್ತದೆ ಎಂಬುದು ನಂಬಿಕೆಇದರಿಂದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ವಿಶ್ವಾಸ

ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಸ್ಥಾನ ಇದೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ ತುಳಸಿಯ ಬಳಕೆಯಾಗುತ್ತದೆ. ಅದೂ ಅಲ್ಲದೆ, ಪ್ರತಿ ಆಸ್ತಿಕ ಹಿಂದೂ ಧರ್ಮೀಯರ ಮನೆಯಲ್ಲಿ ತುಳಸಿಕಟ್ಟೆ ಇರುತ್ತದೆ. ಪ್ರತಿದಿನ ಪೂಜೆ ಕೂಡಾ ಸಲ್ಲಿಕೆಯಾಗುತ್ತದೆ. ಮುಂಜಾನೆ ಭಕ್ತಿಯಿಂದ ತುಳಸಿಗೆ ನೀರೆರೆದು ಪೂಜಿಸಿದ ಬಳಿಕವೇ ಬಹುತೇಕರ ಕೆಲಸಗಳು ಆರಂಭವಾಗುವುದು. ತುಳಸಿಕಟ್ಟೆಗೆ ಪ್ರದಕ್ಷಿಣೆ ಬಂತು ಭಕ್ತಿಯಿಂದ ನಮಿಸಿದಾಗ ಮನಸ್ಸಿನಲ್ಲೊಂದು ನೆಮ್ಮದಿಯ ಭಾವ ಮೂಡುತ್ತದೆ. ತುಳಸಿಯ ಆರಾಧನೆಯಿಂದ ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆಯಾದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಶ್ರೀಹರಿ ಮತ್ತು ಮಾತೆ ಲಕ್ಷ್ಮಿ ತುಳಸಿಯಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಕೂಡಾ ನಮ್ಮದು. ಇದೇ ಕಾರಣದಿಂದ ತುಳಸಿ ಇಲ್ಲದೆ ವಿಷ್ಣು ದೇವರ ಪೂಜೆ ಕೂಡಾ ಅಪೂರ್ಣವೂ ಹೌದು.

ಮನೆಯ ಅಂಗಳದಲ್ಲಿ ತುಳಸಿ ಇದ್ದರೆ ಧನಾತ್ಮಕ ಅಂಶಗಳು ಮನೆಯಲ್ಲಿ ಇರುತ್ತವೆ. ಪ್ರತಿನಿತ್ಯ ತುಳಸಿಯ ಪೂಜೆಯಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ನಂಬಿಕೆ. ಇನ್ನು ತುಳಸಿಯ ಆರಾಧನೆಯೊಂದಿಗೆ ತುಳಸಿಕಟ್ಟೆಯಲ್ಲಿ ಕೆಲ ಮಂಗಳಕರ ಚಿಹ್ನೆಗಳನ್ನು ಮೂಡಿಸಿದರೂ ಒಳಿತಾಗುತ್ತದೆ ಎಂದೂ ನಂಬಲಾಗಿದೆ. ಹೀಗೆ ತುಳಸಿಯ ಪೂಜೆಯಲ್ಲಿ ಮಹತ್ವವೆನಿಸುವ ಇಂತಹ ಚಿಹ್ನೆಗಳು ಯಾವುದು ಎಂಬುದನ್ನು ನೋಡೋಣ.

ಓಂ : ಓಂಕಾರಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದೆ. ಅಂತೆಯೇ, ತುಳಸಿಕಟ್ಟೆಯ ಮೇಲೂ ಓಂ ಚಿಹ್ನೆ ಮೂಡಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಇದರಿಂದ ದೇವಿ ಲಕ್ಷ್ಮಿ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರನ್ನು ಹರಸುತ್ತಾಳೆ ಎಂಬುದು ನಂಬಿಕೆ. ವಿಷ್ಣುವಿನ ಆಶೀರ್ವಾದ ಕೂಡಾ ಇದರಿಂದ ಸಿಗುತ್ತದೆ ಎನ್ನುವುದು ನಂಬಿಕೆ.

ಸ್ವಸ್ತಿಕ್ : ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಗೆ ಬಹಳ ಮಹತ್ವವಿದೆ. ಅಂತೆಯೇ, ತುಳಸಿಕಟ್ಟೆಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆದರೆ ದೇವಿ ಲಕ್ಷ್ಮಿಯ ಆಶೀರ್ವಾದ ಲಭಿಸುತ್ತದೆ ಎಂಬುದು ಆಸ್ತಿಕರ ನಂಬಿಕೆ. ಜತೆಗೆ, ಇದರಿಂದ ಮನ, ಮನೆಗಳಲ್ಲಿ ಸಂತೋಷ, ಸಮೃದ್ಧಿ ತುಂಬಿರುತ್ತದೆ ಎಂದೂ ಪರಿಗಣಿಸಲಾಗುತ್ತದೆ.

ಶಂಖ : ಸನಾತನ ಹಿಂದೂ ಧರ್ಮದಲ್ಲಿ ಶಂಖವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಶಂಖವನ್ನು ಮನೆಯ ದೇವರ ಕೋಣೆಯಲ್ಲಿಡಲಾಗುತ್ತದೆ. ಜತೆಗೆ, ಬೆಳಗ್ಗೆ ಮತ್ತು ಸಂಜೆ ಶಂಖದ ಶಬ್ದ ಮನೆಯಲ್ಲಿ ಕೇಳಿದರೆ ಮನೆಯಲ್ಲಿ ನಕಾರಾತ್ಮಕತೆ ಇರುವುದಿಲ್ಲ ಎಂಬುದು ನಂಬಿಕೆ. ಹೀಗಾಗಿ, ತುಳಸಿಕಟ್ಟೆಯಲ್ಲಿ ಶಂಖದ ಗುರುತನ್ನು ಮೂಡಿಸಿದರೆ ಒಳ್ಳೆಯದಾಗುತ್ತದೆ ಮತ್ತು ವಿಷ್ಣು ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಆಸ್ತಿಕರದ್ದು. ಯಾಕೆಂದರೆ, ಶಂಖ ಎಂದರೆ ವಿಷ್ಣುವಿಗೂ ಬಲು ಪ್ರಿಯ.

ಚಕ್ರ : ಇನ್ನು ತುಳಸಿಕಟ್ಟೆಯಲ್ಲಿ ಚಕ್ರದ ಗುರುತನ್ನು ಮಾಡಿದರೂ ಉತ್ತಮ ಎಂಬ ನಂಬಿಕೆ ಹಲವು ಭಾಗದಲ್ಲಿ ಇದೆ. ಇದರಿಂದ ಧನಾತ್ಮಕ ಶಕ್ತಿ ಮನೆಯನ್ನು ತುಂಬುತ್ತದೆ. ಮನಸ್ಸಿನಲ್ಲಿ ಶಾಂತಿ ನೆಲೆಗೊಳ್ಳುತ್ತದೆ. ದೇವರ ಆಶೀರ್ವಾದದಿಂದ ಕಷ್ಟಗಳೆಲ್ಲಾ ದೂರವಾಗುತ್ತದೆ ಎಂಬುದು ನಂಬಿಕೆ.

ಹೀಗೆ ಮಾತೆ ತುಳಸಿಯ ಪೂಜೆ, ತುಳಸಿ ಗಿಡ ನೆಡುವ ಬಗೆಗೆ ಸಾಕಷ್ಟು ನಿಯಮಗಳು ಇವೆ. ತುಳಸಿ ಗಿಡವನ್ನು ಯಾವಾಗ ಮುಟ್ಟಬಾರದು, ಯಾವಾಗ ತುಳಸಿ ಗಿಡದ ಗೆಲ್ಲುಗಳನ್ನು ಮುರಿಯಬಾರದು ಎಂಬುದಕ್ಕೂ ನಿರ್ದಿಷ್ಟ ನಿರ್ದೇಶನಗಳಿವೆ. ಇದನ್ನೆಲ್ಲಾ ಆಸ್ತಿಕರು ಬಹಳ ಶ್ರದ್ಧಾ ಭಕ್ತಿಯಿಂದಲೇ ಪಾಲಿಸಿಕೊಂಡು ಬರುತ್ತಿದ್ದಾರೆ..

Leave a Comment