ಮಂಗಳವಾರ 2 ಲವಂಗದಿಂದ ಈ ಚಿಕ್ಕ ಕೆಲಸ ಮಾಡಿ ಕೊಟ್ಟ ಹಣ ವಾಪಸ್ ಬರುತ್ತೆ!

ಲವಂಗವನ್ನು ಹಿಂದೂಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಪರಿಹಾರ ಕ್ರಮಗಳಲ್ಲಿ ಇದು ಬಹಳ ಪರಿಣಾಮಕಾರಿ ಎಂದು ಗುರುತಿಸಲ್ಪಟ್ಟಿದೆ. ಮನೆಯಲ್ಲಿ ಅಡುಗೆಯ ರುಚಿಗೂ ಬಳಸಲಾಗುವ ಲವಂಗವನ್ನು ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿಯೂ ಬಳಸಲಾಗುವುದು. ನಿಮ್ಮ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದರೆ ಲವಂಗದ ಪರಿಹಾರದಿಂದ ಎಲ್ಲವೂ ಸರಾಗವಾಗುವುದು. ಜ್ಯೋತಿಷ್ಯದಲ್ಲಿ ಇದನ್ನು ಶಕ್ತಿ ವಾಹಕವೆಂದು ಕರೆಯಲಾಗುತ್ತದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಲು ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ನೀವು ಲವಂಗದಿಂದ ಪರಿಹಾರಗಳನ್ನು ಮಾಡಬಹುದು. ಹೀಗೆ ಲವಂಗದ ಚಮತ್ಕಾರದ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ರಾಹು ಕೇತುವಿನ ದೋಷ ನಿವಾರಣೆಗೆ–ನೀವು ರಾಹು-ಕೇತುವಿನಿಂದ ತೊಂದರೆಗೀಡಾಗಿದ್ದರೆ ಮತ್ತು ನಿಮ್ಮ ಕುಂಡಲಿಯಲ್ಲಿ ಅವುಗಳ ಸ್ಥಾನವು ಅನುಕೂಲವಾಗಿಲ್ಲದಿದ್ದರೆ ತಾಂತ್ರಿಕ ಗ್ರಂಥಗಳಲ್ಲಿ ಉಲ್ಲೇಖ ಮಾಡಿರುವಂತೆ ಶನಿವಾರ ಲವಂಗದ ದಾನವನ್ನು ಮಾಡಿದರೆ ಒಳ್ಳೆಯದು. ಯಾರೂ ಲವಂಗವನ್ನು ಸ್ವೀಕರಿಸದಿದ್ದಲ್ಲಿ ಶಿವಲಿಂಗಕ್ಕೂ ಅರ್ಪಿಸಬಹುದು. 40 ದಿನಗಳವರೆಗೆ ನಿರಂತರವಾಗಿ ಈ ಕ್ರಮವನ್ನು ಮಾಡಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಜೊತೆಗೆ ರಾಹುವಿನ ಕೆಟ್ಟ ಪರಿಣಾಮಗಳೂ ಕೊನೆಗೊಳ್ಳುತ್ತದೇ.

​ ಬರಬೇಕಾಗಿದ್ದ ಹಣ ಸಿಗದೇ ಇದ್ದಲ್ಲಿ–ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರದೇ ಇದ್ದಲ್ಲಿ ಅಥವಾ ಯಾರಾದರೂ ನಿಮಗೆ ಹಣ ನೀಡಬೇಕಾಗಿದ್ದವರು, ಕೊಡಲು ಹಿಂದೇಟು ಹಾಕುತ್ತಿದ್ದರೆ, ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ರಾತ್ರಿ ಕರ್ಪೂರದೊಂದಿಗೆ 11 ಅಥವಾ 21 ಲವಂಗ ಸುಟ್ಟು ಹಾಕಿ. ಇದಾದ ನಂತರ ಲಕ್ಷ್ಮೀ ದೇವಿಯನ್ನು ಧ್ಯಾನಿಸಿ ನಿಮ್ಮ ಸಮಸ್ಯೆಯ ಬಗ್ಗೆ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ಶೀಘ್ರವೇ ನಿಮ್ಮ ಹಣವನ್ನು ಮರಳಿ ಪಡೆಯುವಿರಿ ಹಾಗೂ ಹಣ ಗಳಿಸುವ ಮಾರ್ಗವೂ ಗೋಚರಿಸುವುದು.

ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯಲು–ನೀವು ಯಾವುದಾದರೂ ಸಂದರ್ಶನಕ್ಕೆ ಹೊರಟಿದ್ದರೆ ಅಥವಾ ಯಾವುದಾದರೂ ಕೆಲಸಕ್ಕೆ ಹೊರಟಿದ್ದರೆ, ಅದು ಪೂರ್ಣಗೊಳ್ಳಬೇಕೆಂದರೆ, ಮನೆಯಿಂದ ಹೊರಡುವಾಗ ಎರಡು ಲವಂಗವನ್ನು ಬಾಯಲ್ಲಿ ಹಾಕಿಕೊಳ್ಳಿ. ನಂತರ ಲವಂಗದ ಶೇಷವನ್ನು ಬಾಯಲ್ಲೇ ಉಳಿಸಿಕೊಳ್ಳಿ. ನಿಮ್ಮ ಇಷ್ಟದೇವರನ್ನು ಧ್ಯಾನಿಸಿ, ಕೆಲಸದ ಯಶಸ್ಸಿಗೆ ಪ್ರಾರ್ಥಿಸಿ. ಇದನ್ನು ಮಾಡುವುದರಿಂದ ನಿಮ್ಮ ಕೆಲಸ ಮತ್ತು ಸಂದರ್ಶನವು ಖಂಡಿತವಾಗಿಯೂ ಯಶಸ್ವಿಯಾಗುವುದು. ನೀವು ಬಯಸಿದ ಕೆಲಸ ಸಿಗುವುದು.

ಪರಿಶ್ರಮದ ಫಲ ಸಿಗಲು–ಕಷ್ಟಪಟ್ಟು ದುಡಿದ ನಂತರವೂ ನೀವು ಸರಿಯಾಗಿ ಅದರ ಪ್ರತಿಫಲವನ್ನು ಪಡೆಯದಿದ್ದರೆ ಮಂಗಳವಾರದಂದು ಆಂಜನೇಯನ ವಿಗ್ರಹದ ಮುಂದೆ ಮಲ್ಲಿಗೆ ಎಣ್ಣೆಯೊಂದಿಗೆ ಎರಡು ಲವಂಗ ಹಾಕಿ ದೀಪವನ್ನು ಹಚ್ಚಿ. ಹನುಮಾನ್‌ ಚಾಲೀಸಾ ಪಠಿಸಿದ ನಂತರ ಆರತಿ ಮಾಡಿ, ನಿಮ್ಮ ಸಮಸ್ಯೆಯನ್ನು ಆಂಜನೇಯನ ಮುಂದೆ ಕೋರಿಕೊಂಡು ಪ್ರಾರ್ಥಿಸಿ. ಇದನ್ನು 21 ಮಂಗಳವಾರ ಸತತವಾಗಿ ಮಾಡಿದರೆ ನಿಮ್ಮ ಕಠಿಣ ಪರಿಶ್ರಮದ ಫಲ ಸಿಗುವುದು. ನಿಮ್ಮ ಎಲ್ಲಾ ಕಾರ್ಯಗಳು ಫಲಿಸುವುದು.

ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು–ತಂತ್ರಶಾಸ್ತ್ರದ ಪ್ರಕಾರ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಗುಲಾಬಿ ಹೂವಿನ ಜೊತೆಗೆ ಎರಡು ಲವಂಗವನ್ನೂ ದೇವಿಗೆ ಅರ್ಪಿಸಿ. ಪ್ರತಿದಿನವೂ ಸಾಧ್ಯವಾಗದಿದ್ದರೆ ಪ್ರತಿಶುಕ್ರವಾರ ಹೀಗೆ ಮಾಡಿ. ಇದಲ್ಲದೇ ಐದು ಲವಂಗದ ಮೊಗ್ಗುಗಳನ್ನು, ಐದು ಕವಡೆಯೊಂದಿಎ ಕೆಂಪು ಬಟ್ಟೆಯಲ್ಲಿ ಸುತ್ತಿ ಅವುಗಳನ್ನು ತಿಜೋರಿ ಅಥವಾ ಹಣದ ಬೀರುವಿನಲ್ಲಿ ಇರಿಸಬೇಕು ಇದನ್ನು ಮಾಡುವುದರಿಂದ ಸದಾ ನಿಮ್ಮ ಮನೆಯ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದವಿರುತ್ತದೆ ಹಾಗೂ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು

ಕೆಲಸಗಳಿಗೆ ಅಡ್ಡಿ ಎದುರಾದರೆ–ನೀವು ಮಾಡಿರುವ ಕೆಲಸಗಳು ಹಾಳಾಗಿದ್ದರೆ ಅಥವಾ ಶುಭ ಕೆಲಸಕ್ಕೆ ಅಡ್ಡಿಯುಂಟಾದರೆ, ಮೂರು ಅಥವಾ ನಾಲ್ಕು ಲವಂಗವನ್ನು ಎಣ್ಣೆಯಲ್ಲಿ ಹಾಕಿ ದೀಪವನ್ನು ಬೆಳಗಿ, ನಂತರ ಅದನ್ನು ಮನೆಯ ಕತ್ತಲೆಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಯು ಹೊರಗೆ ಹೋಗುವುದು. ಹಾಗೂ ಮನೆಯ ಎಲ್ಲಾ ಸದಸ್ಯರ ಆರೋಗ್ಯವೂ ಉತ್ತಮವಾಗುವುದು. ಹಾಗೂ ನಿಮ್ಮ ಕೆಲಸಗಳು ವಿಘ್ನವಿಲ್ಲದೆ ನಡೆಯುವವು..

Leave A Reply

Your email address will not be published.