The secret of a husband’s success lies in his wife’s anklets: ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸಿಲ್ಲ ಎಂದರೆ ಅವಳ ಶೃಂಗಾರ ಅಪೂರ್ಣ ಎಂದು ಹೇಳಲಾಗುತ್ತದೆ ಯಾಕೆಂದರೆ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವ ಮೂಲಕ ಅವಳ ಶೃಂಗಾರವಷ್ಟೇ ಅಲ್ಲ ಅವಳ ಜೀವನದ ಶೃಂಗಾರವೂ ಕೂಡ ಹೆಚ್ಚಾಗುತ್ತದೆ ಆದ್ದರಿಂದ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯವಾಗುತ್ತದೆ, ಇದರ ಜೊತೆಗೆ ಇನ್ನೊಂದು ವಿಶೇಷತೆ ಏನು ಎಂದರೆ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವುದರಲ್ಲಿ ಸೂರ್ಯ ಮತ್ತು ಚಂದ್ರನ ಕೃಪೆ ಇರುತ್ತದೆ ಹಾಗಾಗಿ ಆ ಕೃಪೆ ಗಂಡ ಮತ್ತು ಹೆಂಡತಿ ಇಬ್ಬರ ಮೇಲು ಕೂಡ ಪರಿಣಾಮ ಬೀರುತ್ತದೆ ಮತ್ತು ಅವರಿಬ್ಬರ ದಾಂಪತ್ಯ ಜೀವನವು ಕೂಡ ಸುಖಮಯವಾಗಿರುತ್ತದೆ ಸ್ನೇಹಿತರೆ
ಇನ್ನೂ ಒಂದು ವಿಷಯವನ್ನು ನೀವು ತಿಳಿದುಕೊಳ್ಳಬೇಕು ಅದು ಏನೆಂದರೆ ಗಂಡನ ಆರ್ಥಿಕ ಸ್ಥಿತಿ ಕುಂಟಿತವಾಗುವುದಕ್ಕೆ ಮತ್ತು ಗಂಡನ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಕ್ಕೆ ಹೆಂಡತಿ ಧರಿಸುವಂತಹ ಕಾಲುಂಗುರ ಕೂಡ ಕಾರಣವಾಗಬಹುದು ಹಾಗಾದರೆ ಯಾವ ಕಾಲುಂಗುರವನ್ನು ಧರಿಸಬೇಕು, ಎಷ್ಟು ಸಂಖ್ಯೆಯಲ್ಲಿ ಧರಿಸಬೇಕು, ಯಾವಾಗ ಧರಿಸಬೇಕು ಮತ್ತು ಯಾವ ರೀತಿಯದ್ದು ಧರಿಸಬೇಕು ಎಂಬುದು ಬಹಳ ಮುಖ್ಯವಾಗುತ್ತದೆ ಹಾಗಾಗಿ ಈ ದಿನ ನಾವು ನಿಮಗೆ ಕಾಲುಂಗುರದ ಬಗ್ಗೆ ಅಂದರೆ ಯಾವ ರೀತಿಯ ಕಾಲುಂಗುರವನ್ನು ನೀವು ಧರಿಸಬೇಕು ಮತ್ತು ಯಾವಾಗ ಧರಿಸಬೇಕು, ಎಷ್ಟು ಸಂಖ್ಯೆಯಲ್ಲಿ ಧರಿಸಬೇಕು, ಇದರ ಜೊತೆಗೆ ಯಾವ ತರನಾದಂತಹ ಕಾಲುಂಗುರವನ್ನು ನೀವು ಧರಿಸಬಾರದು ಎನ್ನುವಂತಹ ವಿಚಾರಗಳನ್ನು ನಾವು ನಿಮಗೆ ಈ ದಿನ ತಿಳಿಸಿಕೊಡುತ್ತಿದ್ದೇವೆ, ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ
ಸ್ನೇಹಿತರೆ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವುದು ಕೇವಲ ಆಕೆಗೆ ಮದುವೆಯಾಗಿದೆ ಎನ್ನುವಂತದ್ದನ್ನು ಸೂಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಆಕೆಯ ಋತುಚಕ್ರಗಳಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ ಅಷ್ಟೇ ಅಲ್ಲ ಇದರ ಜೊತೆಗೆ ಆಕೆಯ ಗರ್ಭಧಾರಣೆಯಲ್ಲೂ ಕೂಡ ಯಾವುದೇ ತರಹದ ಸಮಸ್ಯೆಗಳು ಕಂಡುಬರುವುದಿಲ್ಲ ಇದು ಬರಿ ಶಾಸ್ತ್ರ ಹೇಳುವಂತಹ ಮಾತಲ್ಲ ಇದು ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿರುವಂತಹ ಮಾತು ಹಾಗಾಗಿ
ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವಂತದ್ದು ಅತಿ ಅವಶ್ಯಕ ಹಾಗೆಯೇ ಕಾಲುಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎನ್ನುವಂತದ್ದು ಬಹಳ ಮುಖ್ಯವಾಗುತ್ತದೆ ಕಾಲುಂಗುರವನ್ನು ಹೆಬ್ಬೆಟ್ಟಿನ ಪಕ್ಕದಲ್ಲಿರುವಂತಹ ಎರಡನೇ ಬೆರಳು ಅಥವಾ ತೋರುಬೆರಳು ಇದರಲ್ಲಿ ಧರಿಸುವಂತದ್ದು ಅತಿ ಶ್ರೇಷ್ಠವಂತೆ ಎಂದು ಹೇಳಲಾಗುತ್ತದೆ ಇದರ ಜೊತೆಗೆ ಮಧ್ಯದ ಬೆರಳು ಅಂದರೆ ಎರಡನೇ ಬೆರಳಿನ ಪಕ್ಕದಲ್ಲಿ ಇರುವಂತಹ ಮೂರನೇ ಬೆರಳು ಅಥವಾ ಮಧ್ಯದ ಬೆರಳಲ್ಲೂ ಕೂಡ ಕೆಲವರು ಧರಿಸುತ್ತಾರೆ ಅಂದರೆ ಈ ಎರಡು ಬೆರಳಿನಲ್ಲಿ ಕೂಡ ಕಾಲುಂಗುರವನ್ನು ಧರಿಸಿದರೂ ಯಾವುದೇ ತೊಂದರೆಗಳಾಗುವುದಿಲ್ಲ ಹಾಗಾಗಿ ನೀವು ಎರಡೂ ಬೆರಳಿನಲ್ಲಿ ಕೂಡ ಕಾಲುಂಗುರವನ್ನು ಧರಿಸಬಹುದು.
ಇನ್ನು ಎಷ್ಟು ಸಂಖ್ಯೆಗಳಲ್ಲಿ ಇದನ್ನು ಧರಿಸಬಹುದು? ಎಂದು ಹೇಳುವುದಾದರೆ ಇದನ್ನು ನೀವು ಎರಡು ಸಂಖ್ಯೆಯಲ್ಲಿ ಧರಿಸಬಹುದು ಅಥವಾ 5 ಸಂಖ್ಯೆಯಲ್ಲಿ ಅಂದರೆ ಪಾದದ ಐದು ಬೆರಳಿಗೂ ನೀವು ಧರಿಸಬಹುದು ಅಥವಾ ಎರಡು ಬೆರಳಿಗೆ ಧರಿಸಬಹುದು ಆದರೆ ಯಾವುದೇ ಕಾರಣಕ್ಕೂ ಒಂದೇ ಪಾದದಲ್ಲಿ ಮೂರು ಸಂಖ್ಯೆಯ ಕಾಲುಂಗುರವನ್ನು ನೀವು ಧರಿಸಬಾರದು ಯಾಕೆಂದರೆ ಇದು ಅಶುಭದ ಸಂಕೇತ ಹಾಗಾಗಿ ನೀವು ಒಂದೇ ಪಾದದಲ್ಲಿ ಮೂರು ಸಂಖ್ಯೆಯ ಕಾಲುಂಗುರವನ್ನು ಧರಿಸಬಾರದು, ಸ್ನೇಹಿತರೆ ಈ ಕಾಲುಂಗುರವನ್ನು ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಧರಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಇದನ್ನು ಮದುವೆಯಾಗದ ಅಂದರೆ ಕನ್ಯೆಯರು ಈ ಕಾಲುಂಗುರವನ್ನು ಧರಿಸಬಾರದು ಯಾಕೆಂದರೆ
ಇತ್ತೀಚೆಗೆ ಕೆಲವರು ಇದನ್ನು ಫ್ಯಾಷನ್ ಗಾಗೀ ಬಳಸುವಂಥದ್ದು ಕೂಡ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಮದುವೆ ಆಗದಂತಹ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸಬಾರದು, ಸ್ನೇಹಿತರೇ ಇನ್ನು ಮದುವೆ ಆದಂತಹ ಹೆಣ್ಣು ಮಕ್ಕಳು ಯಾವತರನಾದಂತಹ ಕಾಲುಂಗುರವನ್ನು ಧರಿಸಬಾರದು ಎನ್ನುವಂತದ್ದು ಕೂಡ ಬಹಳ ಮುಖ್ಯವಾಗುತ್ತದೆ ಕಾಲುಂಗುರವನ್ನು ಧರಿಸುವಾಗ ಕೆಲವು ಅಂಶಗಳು ಬಹಳ ಮುಖ್ಯವಾಗುತ್ತದೆ ಏನು ಅಂದರೆ : ನೀವು ಧರಿಸುವಂತಹ ಕಾಲುಂಗುರ ಬೆಳ್ಳಿಯದ್ದಾಗಿರಬಹುದು ಆದರೆ ಯಾವುದೇ ಕಾರಣಕ್ಕೂ ಅದು ಚಿನ್ನದಾಗಿರಬಹುದು ಇದರ ಜೊತೆಗೆ ಕಾಲುಂಗುರ ನಿಮ್ಮ ಬೆರಳಿಗೆ ಸರಿಯಾದ ಅಳತೆಯಲ್ಲಿರಬೇಕು ಅಂದರೆ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಬೆರಳಿನಲ್ಲಿ ಸಡಿಲವಾಗುವಂತದ್ದು ಅಥವಾ ಲೂಸ್ ಆಗಬಾರದು ಯಾಕೆಂದರೆ
ಸರಿಯಾದ ಅಳತೆ ಅಲ್ಲದ ಕಾಲುಂಗುರವನ್ನು ಧರಿಸುವಂತದ್ದು ಕೂಡ ಹಾಗೇನೆ ಚಿನ್ನದ ಕಾಲುಂಗುರವನ್ನು ಧರಿಸುವುದು ಕೂಡ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ಮುಖ್ಯವಾಗಿ ನಿಮ್ಮ ಗಂಡನ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದಕ್ಕೆ ಕಾರಣವಾಗುತ್ತದೆ ಅಂದರೆ ಆರ್ಥಿಕ ಪರಿಸ್ಥಿತಿಯಲ್ಲಿ ಕುಂಠಿತವಾಗುವಂತದ್ದಾಗಿರಬಹುದು, ಆರೋಗ್ಯದ ವಿಚಾರದಲ್ಲಿ ಏರುಪೇರು ಆಗುವಂತದ್ದಾಗಿರಬಹುದು, ಇದರ ಜೊತೆಗೆ ಒಟ್ಟಾರೆಯಾದಂತಹ ದಾಂಪತ್ಯ ಜೀವನದಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳು ಆಗುವಂತಹ ಸಾಧ್ಯತೆಗಳಿರುತ್ತದೆ ಹಾಗಾಗಿ ಸರಿಯಾದ ಅಳತೆಯ ಕಾಲುಂಗುರ ಮತ್ತು ಬೆಳ್ಳಿಯ ಕಾಲುಂಗುರವನ್ನು ಧರಿಸುವಂಥದ್ದು ಸೂಕ್ತ ಎಂದು ಹೇಳಲಾಗುತ್ತದೆ.
ನೆನಪಿರಲಿ ಸ್ನೇಹಿತರೆ ಕಾಲುಂಗುರ ಯಾವುದೇ ಕಾರಣಕ್ಕೂ ಕೂಡ ಚಿನ್ನದಾಗಿರಬಾರದು ಯಾಕೆಂದರೆ ಚಿನ್ನದ ಕಾಲುಂಗುರವನ್ನು ಧರಿಸುವಂಥದ್ದು ಸಾಕ್ಷಾತ್ ಮಹಾಲಕ್ಷ್ಮಿಗೆ ಅವಮಾನ ಮಾಡಿದಂತಾಗುತ್ತದೆ ಇದರ ಜೊತೆಗೆ ಇನ್ನೊಂದು ವಿಷಯವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಏನು ಎಂದರೆ ಯಾವುದೇ ಕಾರಣಕ್ಕೂ ನಾವು ಉಪಯೋಗಿಸಿದಂತಹ ಕಾಲುಂಗುರವನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ನಾವು ನೀಡಬಾರದು ಯಾಕೆಂದರೆ ಇದು ಕೂಡ ನಮ್ಮ ಮೇಲೆ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ
ಹಾಗೆ ಸ್ನೇಹಿತರೆ ಮತ್ತೊಂದು ವಿಷಯವನ್ನು ನೀವು ಪಾಲಿಸಬೇಕಾಗಿರುವುದು ಏನೆಂದರೆ ಕಾಲುಂಗುರದಲ್ಲಿ ಗೆಜ್ಜೆಗಳಿದ್ದರೆ ತುಂಬಾ ಶ್ರೇಷ್ಠವೆಂದು ಹೇಳಬಹುದು ಯಾಕೆಂದರೆ ಆ ಗೆಜ್ಜೆಯ ನಾದ ಮಹಾಲಕ್ಷ್ಮಿಯನ್ನು ಪ್ರಸನ್ನವಾಗಿಸುವುದಕ್ಕೆ ಕಾರಣವಾಗುತ್ತದೆ ಯಾಕೆಂದರೆ ಕಾಲಲ್ಲಿ ನೀವು ಕಾಲ್ಗೆಜ್ಜೆ ಮೂಲಕ ಗೆಜ್ಜೆಗಳಿರಬಹುದು ಇದರ ಜೊತೆಗೆ ಕಾಲುಂಗರದಲ್ಲಿಯೂ ಗೆಜ್ಜೆಗಳು ಇರುವಂತದ್ದನ್ನು ಸಹ ನೀವು ಧರಿಸಬಹುದು ಒಂದು ವೇಳೆ ನೀವು ಕಾಲ್ಗೆಜ್ಜೆಯನ್ನು ಧರಿಸಿಲ್ಲಾ ಅಂದರೂ ಕೂಡ ಕೊನೆ ಪಕ್ಷ ಕಾಲುಂಗುರದಲ್ಲಿ ಗೆಜ್ಜೆಗಳು ಇದ್ದರೆ ತುಂಬಾ ಶ್ರೇಷ್ಟ ಯಾಕೆಂದರೆ ನಾವು ಆಗಲೇ ಹೇಳಿದಂತೆ ಗೆಜ್ಜೆಯ ಸದ್ದು ಶ್ರೀ ಮಹಾಲಕ್ಷ್ಮಿಯನ್ನು ಪ್ರಸನ್ನವಾಗಿಸುವುದಕ್ಕೆ ಕಾರಣವಾಗುತ್ತದೆ ಮತ್ತು ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.