ತಲೆ ನೋವು ಜ್ವರ ಕಾಡ್ತಿದ್ರೆ ಹಾಲನ್ನು ಈ ತರ ಮಾಡಿ ಕುಡೀರಿ ಎಂತಾ ಅದ್ಬುತ ಮನೆಮದ್ದು ಗೊತ್ತಾ!

ನಮಗೆ ಹಲವಾರು ರೀತಿಯ ಗಿಡ ಮೂಲಿಕೆಗಳು ಸಿಗುತ್ತವೆ. ಕೆಲವೊಂದು ಜಾದು ಮಾಡುತ್ತವೆ ಬೇರೆ ಬೇರೆ ರೀತಿಯ ಮನೆಮದ್ದನ್ನು ಮಾಡಿಕೊಳ್ಳಬಹುದು. ಅದರಲ್ಲೂ ತುಳಸಿ ಇಂದ ಬೇರೆ ಬೇರೆ ರೀತಿಯ ಅರೋಗ್ಯ ಪ್ರಯೋಜನಗಳು ಸಿಗುತ್ತವೆ ಮತ್ತು ಬೇರೆ ರೀತಿಯಲ್ಲಿ ಕೂಡ ಬಳಸಬಹುದು. ಇನ್ನೂ ಮನೆಮದ್ದು ಮಾಡುವುದಕ್ಕೆ ಮೊದಲು ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ ಮತ್ತು ನಾಲ್ಕು ತುಳಸಿ ಎಲೆಗಳನ್ನು ಹಾಕಬೇಕು.ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಮತ್ತು ಇದಕ್ಕೆ ನೀವು ಸ್ವಲ್ಪ ಕಲ್ಲು ಸಕ್ಕರೆಯನ್ನು ಕೂಡ ಹಾಕಬಹುದು. ಇದು ಸರಿಯಾಗಿ ಕುದಿಸಿದ ಮೇಲೆ ಸೋಸಿ ಕುಡಿಯಬಹುದು. ಇದು ನಮ್ಮ ಹೃದಯದ ಅರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ಕೆಟ್ಟ ಕೊಲೆಸ್ಟ್ರೇಲ್ ಪ್ರಮಾಣವನ್ನು ದೇಹದಲ್ಲಿ ಇದು ಕಡಿಮೆ ಮಾಡುವುದರಿಂದ ಹೃದಯ ಅರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತದೆ. ಇನ್ನೂ ನರ ಮಂಡಲ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ನರ ಮಂಡಲ ಕಾರ್ಯ ನಿರ್ವಹಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

ಇನ್ನೂ ಯಾರಿಗೆ ಕಿಡ್ನಿ ಸ್ಟೋನ್ ಸಮಸ್ಸೆ ಇದ್ದರೆ ಈ ಮನೆಮದ್ದು ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಮೂತ್ರ ಪಿಂಡದ ಅರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಈ ತರ ಮಾಡಿ ಕುಡಿಯಬಹುದು. ಅಷ್ಟೇ ಅಲ್ಲದೆ ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಸಹ ಹೊರ ಹಾಕುತ್ತದೆ.

ಇನ್ನೂ ಜ್ವರ ತಲೆ ನೋವಿಗೆ ಇದು ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು.ಜ್ವರ ತಲೆ ನೋವು ಬೇಗ ಕಡಿಮೆ ಮಾಡುವುದಕ್ಕೆ ಹಾಲಿನಲ್ಲಿ ತುಳಸಿ ಎಲೆಗಳನ್ನು ಬೆರೆಸಿ ಈ ತರ ಮಾಡಿ ಕುಡಿಯಬಹುದು ಮತ್ತು ಗಂಟಲು ಸಮಸ್ಸೆಗೂ ಕೂಡ ಇದು ತುಂಬಾ ಒಳ್ಳೆಯದು.ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ ಕುಡಿದರೆ ಸಾಕು.

Leave a Comment