ಕೊಬ್ಬರಿ ಎಣ್ಣೆ ಯಿಂದ ಹೀಗೆ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗುತ್ತದೆ!

0 0

ಕೊಬ್ಬರಿ ಎಣ್ಣೆ ಯನ್ನು ನೀವು ಹೀಗೆ ಉಪಯೋಗಿಸಿದರೆ ಬೇರೆ ಕ್ರೀಮ್ ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಫಲವನ್ನು ನೀಡುವುದಲ್ಲದೆ ಕಾಂತಿಯನ್ನು ಉಂಟು ಮಾಡುತ್ತದೆ.ಇನ್ನು ವಿಟಮಿನ್ ಎ ಯಿಂದ ಚರ್ಮದ ವಯಸ್ಸು ಕಡಿಮೆಗೊಳಿಸುತ್ತದೆ.ಹೀಗಾಗಿ ಚರ್ಮ ಮತ್ತಷ್ಟು ಕೋಮಲವಾಗಿ ಮೃದುವಾಗಿ ಕಾಂತಿಯುತವಾಗಿ ಕಾಣಿಸುವಂತೆ ಮಾಡುತ್ತದೆ.

ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವುದಕ್ಕೆ ಪ್ರತಿದಿನ ರಾತ್ರಿ ಕೊಬ್ಬರಿ ಎಣ್ಣೆಯನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಸುಕ್ಕುಗಳು ಮಾಯ ಆಗುತ್ತದೆ.

ಇನ್ನು ಬಿಸಿಲಿನಲ್ಲಿ ತಿರುಗಿದಾಗ ಚರ್ಮ ಒಣಗಿದಂತೆ ಕಾಣುತ್ತದೆ.ಆಗ ಈ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳು ಹೋಗುವುದು ಅಲ್ಲದೆ ಬಾಡಿದ ಚರ್ಮ ಕಾಂತಿಯುತವಾಗಿ ತಿರುಗುತ್ತದೆ.ಅಷ್ಟೇ ಅಲ್ಲದೆ ಕೋಮಲವಾಗಿ ಮೃದುವಾಗಿ ಆಗುತ್ತದೆ.

ಇನ್ನು ಕೊಬ್ಬರಿ ಎಣ್ಣೆಯಲ್ಲಿ ಸಕ್ಕರೆಯನ್ನು ಬೇರೆಸಿ ಅದನ್ನು ಸ್ಕ್ರಾಬ್ ನಂತೆ ತಯಾರಿಸಿಕೊಂಡು ಮುಖದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡರೆ ಡೆಡ್ ಸೆಲ್ಸ್ ಗಳು ಹೋಗಿ ಚರ್ಮವು ಕಾಂತಿಯುತವಾಗಿ ಮೃದುವಾಗಿ ಮರ್ಪಡು ಆಗುತ್ತದೆ.ಈ ರೀತಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾಡಬೇಕು.

ಇನ್ನು ಒಂದು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆ ರಸ ಹಾಕಿ ಬೆರೆಸಿಕೊಂಡು ಮುಖಕ್ಕೆ ಲೆಪಿಸಿ 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಂಡರೆ ಸಾಕು.ಇದರಿಂದ ನಿಮ್ಮ ಮುಖದಲ್ಲಿ ಇರುವ ಟ್ಯಾನ್ ಹೋಗಿ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

ಇನ್ನು ಗೋಧಿ ಹಿಟ್ಟಿನ ಜೊತೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಅದನ್ನು ಮುಖಕ್ಕೆ ಫೇಸ್ ಪ್ಯಾಕ್ ರೀತಿ ಹಾಕಬೇಕು. ನಂತರ ಅರ್ಧ ಗಂಟೆ ಬಳಿಕ ಮುಖವನ್ನು ಕೈಯಿಂದ ತೊಳೆದುಕೊಂಡರೆ ಅವಚಿತಾ ರೋಮಗಳು ಕ್ರಮೇಣ ಉದುರಿ ಹೋಗುತ್ತದೆ.ಈ ರೀತಿ ವಾರಕ್ಕೆ ಒಂದು ಬಾರಿ ಎರಡು ತಿಂಗಳು ಮಾಡಿದರೆ ಸಾಕು.

ಇನ್ನು ಚಳಿಗಾಲದಲ್ಲಿ ಚರ್ಮ ಒದೆಯುವುದು.ಒಣಗಿ ಬಿರುಕು ಉಂಟಾಗುವುದು ಸರ್ವೇ ಸಾದಾರಣ. ಚಳಿಗಾಲದಲ್ಲಿ ಸ್ನಾನದ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಎಣ್ಣೆ ಸ್ನಾನ ಮಾಡುವುದರಿಂದ ಚರ್ಮದಲ್ಲಿನಾ ತೇವಂಶವನ್ನು ಕಾಪಾಡಿಕೋಳ್ಳುತ್ತದೆ.

ಕೊಬ್ಬರಿ ಎಣ್ಣೆಯಿಂದ ಕಣ್ಣಿನ ಸುತ್ತ ಸ್ವಲ್ಪ ಮಸಾಜ್ ಮಾಡಿಕೊಳ್ಳುವುದರಿಂದ ಉತ್ತಮ ರಿಸಲ್ಟ್ ಪಡೆದುಕೊಳ್ಳಬಹುದು.ಹಾಗಾಗಿ ಪ್ರತಿದಿನ ಮುಖಕ್ಕೆ ಮತ್ತು ಕೂದಲಿಗೂ ಸಹ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ.ಇದರಿಂದ ಸಹಜವಾಗಿ ಸುಂದರವಾಗಿ ಕಾಂತಿಯುತವಾಗಿ ನಿಮ್ಮ ಚರ್ಮ ಹೊಳೆಯುವುದರಲ್ಲಿ ಸಂದೇಹವಿಲ್ಲ.

Leave A Reply

Your email address will not be published.