HomeLatestತಲೆ ಹೇನು ನಿವಾರಣೆಗೆ ಮನೆ ಮದ್ದು! ಡ್ಯಾಂಡ್ರಫ್ ಹೋಮ್ ರೆಮಿಡೀಸ್!

ತಲೆ ಹೇನು ನಿವಾರಣೆಗೆ ಮನೆ ಮದ್ದು! ಡ್ಯಾಂಡ್ರಫ್ ಹೋಮ್ ರೆಮಿಡೀಸ್!

ಸ್ವಚ್ಛತೆಯ ಕೊರತೆ ಬೇರೆ ಇನ್ಯಾವುದು ಇನ್ಫೆಕ್ಷನ್ ನಿಂದ ಕಾರಣ ಹೇನು ಸೀರು ಇರುವಂತಹ ಸಂಪರ್ಕದಿಂದ ಬರುವಂತಹ ಕಾರಣ,ಲಕ್ಷಣಗಳು: ತಲೆಯಲ್ಲಿ ವಿಪರೀತವಾಗಿ ಕಡಿತ ತಲೆಯಲ್ಲಿ ಗಾಯಗಳಾಗುವಂತದ್ದು. ಉರಿ ನವೆ ಮತ್ತು ಕೂದಲು ಉದುರುವಿಕೆ ಇವೆಲ್ಲವೂ ಕೂಡ ಲಕ್ಷಣ ಇದಕ್ಕೆ ಮನೆ ಮದ್ದು ಇದೆಯಾ ಖಂಡಿತವಾಗಿ ಇದೆ ಮನೆ ಮದ್ದು ಬಹಳ ಸುಲಭವಾಗಿ ಮಾಡಿಕೊಳ್ಳಬಹುದು.

ಅರ್ಧ ಲೀಟರ್ ಕೊಬ್ಬರಿ ಎಣ್ಣೆ ಇದಕ್ಕೆ ಒಂದು ಮುಷ್ಟಿಯಷ್ಟು ಬೇವಿನ ಎಲೆಗಳನ್ನು ಜಜ್ಜಿ ಹಾಕಿ ಅದರ ಜೊತೆಗೆ 10 ಕರ್ಪೂರ ಬಿಲ್ಲೆಗಳನ್ನ ಹಾಕಿ. ಮೊದಲಿಗೆ ಕೊಬ್ಬರಿ ಎಣ್ಣೆ ಮತ್ತು ಬೇವಿನ ಎಲೆಗಳನ್ನು ಜಜ್ಜಿ ಹಾಕಬೇಕು ತೈಲ ಬರುವ ಹಾಗೆ ಕುದಿಸಬೇಕು ಎಣ್ಣೆಯಲ್ಲಿ ಎಲ್ಲ ಮಿಶ್ರಣ ಸೇರುವ ಹಾಗೆ ಕುದಿಸಬೇಕು. ಆನಂತರ ತಣ್ಣಗಾದ ಮೇಲೆ ಕರ್ಪೂರವನ್ನು ಅದರಲ್ಲಿ ಮಿಕ್ಸ್ ಮಾಡಬೇಕು. ಆನಂತರ ತಲೆಗೆ ಹಚ್ಚಿ ಒಂದೆರಡು ತಾಸು ಎಳೆ ಬಿಸಿಲಿನಲ್ಲಿ ನಿಂತು ಕೈಗಳನ್ನು ತಲೆಯಲ್ಲಿ ಕೈಯಾಡಿಸಿ. ಆನಂತರ ಸ್ನಾನ ಮಾಡಬೇಕು. ಹೇನು ಸೀರೆಗಳು ಕಡಿಮೆ ಆಗ್ತಾ ಆಗ್ತಾ ಹೋಗುತ್ತವೆ. ಇದನ್ನು ಮಾಡಲಿಕ್ಕೆ ಆಗತ್ತಿದ್ದರೆ.

ಅರಳಿ ಮರದ ಎಲೆಗಳನ್ನು ತಂದು ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ. ಆ ಒಂದು ಎಲೆ ಅಥವಾ ಹರೆ ಯನ್ನು ತೆಗೆದುಕೊಂಡು ಒಣಗಿಸಿ ಚೂರ್ಣ ಮಾಡಿ. ಆ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಕುದಿಸಿ ಸಂಪೂರ್ಣವಾಗಿ ಮಿಕ್ಸ್ ಆದಮೇಲೆ. ತಲೆಗೆ ಹಚ್ಚಿ ಒಂದು ಅಥವಾ ಎರಡು ತಾಸು ಬಿಟ್ಟು ತಲೆ ಸ್ನಾನ ಮಾಡುವುದರಿಂದ ಹೇನು ಸೀರು ಕಡಿಮೆ ಆಗ್ತಾ ಹೋಗುತ್ತವೆ.

Most Popular

Recent Comments