Latest

ಶಿಶುಗಳು ಬೆರಳು ಚೀಪುವುದನ್ನು ಹೇಗೆ ನಿಲ್ಲಿಸುವುದು? ಸರಿ ತಪ್ಪು ಏನು?

Thumb & Finger Sucking kannada ಪುಟ್ಟ ಮಕ್ಕಳು ತಮ್ಮ ಹೊಟ್ಟೆ ಹಸಿವನ್ನು ನಿವಾರಿಸಿಕೊಳ್ಳಲು ಬೆರಳು ಚೀಪುತ್ತವೆ ಎಂದು ಹೇಳುತ್ತಾರೆ. ಆದರೆ ಇದು ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ಪೋಷಕರು ತಿಳಿದುಕೊಳ್ಳಬೇಕಿದೆ.ನಾವು ನೀವು ಗಮನಿಸಿರುವ ಹಾಗೆ ಪುಟ್ಟ ಮಕ್ಕಳಿಗೆ ಅಳುತ್ತಿರುವ ಸಂದರ್ಭದಲ್ಲಿ ತಿನ್ನಲು ಏನಾದರೂ ಕೊಟ್ಟರೆ ಅದನ್ನು ತಕ್ಷಣವೇ ಬಾಯಿಗೆ ಹಾಕಿಕೊಂಡು ಅಳು ನಿಲ್ಲಿಸುತ್ತವೆ. ಇಲ್ಲವೆಂದರೆ ಆಟವಾಡಲು ಯಾವುದಾದರೂ ಆಟಿಕೆ ಕೈಗೆ ಸಿಕ್ಕಿದರೆ ಮಗುವಿನ ಗಮನ ಆಟಿಕೆಯ ಕಡೆಗೆ ಹರಿದು ತಕ್ಷಣವೇ ಅಳು ನಿಲ್ಲಿಸುತ್ತದೆ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

ಹುಟ್ಟಿದ ಯಾವುದೇ ಮಗುವಿಗೆ ಆರಂಭಿಕ ದಿನಗಳಲ್ಲಿ ಆಹಾರವನ್ನು ಸೇವಿಸಲು ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಹಾಗಾಗಿ ಯಾವುದೇ ಘನಾಹಾರವನ್ನು ಪುಟ್ಟ ಮಕ್ಕಳು ಸೇವಿಸಲು ಸಾಧ್ಯವಿಲ್ಲ. ಕೇವಲ ತಾಯಿಯ ಎದೆ ಹಾಲು ಮಾತ್ರ ಮಗುವಿಗೆ ಜೀವನಾಡಿ ಆಗಿರುತ್ತದೆ.ಆದರೆ ಮಗುವಿಗೆ ಇದೇ ಅಭ್ಯಾಸ ರೂಡಿಯಾಗಿ ತಾನು ಕೂತಲ್ಲಿ, ನಿಂತಲ್ಲಿ ಬಾಯಿಗೆ ಬೆರಳನ್ನು ಹಾಕಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿರುತ್ತದೆ. ಆದರೆ ಈ ಅಭ್ಯಾಸ ಮುಂದಿನ ದಿನಗಳಲ್ಲಿ ಮಗುವಿಗೆ ಬಾಯಿ ಹಾಗೂ ವಸಡಿನ ಆರೋಗ್ಯಕ್ಕೆ ತೊಂದರೆ ಆಗಬಹುದು ಎಂಬ ಶಂಕೆ ಪೋಷಕರಲ್ಲಿ ಇರುತ್ತದೆ.

ಬೆರಳು ಚೀಪುವುದರಿಂದ ಮಕ್ಕಳಿಗೆ ಅನುಕೂಲವಿದೆ–ಪುಟ್ಟ ಮಕ್ಕಳು ತಮ್ಮನ್ನು ತಾವು ಸಮಾಧಾನಪಡಿಸಿ ಕೊಳ್ಳಲು ಬೆರಳು ಚೀಪುತ್ತಾರೆ ಎಂದು ಹೇಳುತ್ತಾರೆ. ಆದರೆ ದೊಡ್ಡವರಾದ ನಮಗೆ ನಮ್ಮ ಸ್ವಂತ ಮಕ್ಕಳ ಈ ತಂತ್ರ ಅರ್ಥವಾಗುವುದಿಲ್ಲ. ಮಕ್ಕಳಿಗೆ ಬೆರಳು ಚೀಪುವುದರಿಂದ ತಮ್ಮ ದೇಹದ ಕಿರಿಕಿರಿ ಉಂಟು ಮಾಡುವ ಕೆಲವು ಆರೋಗ್ಯ ಬದಲಾವಣೆಗಳಿಂದ ಮುಕ್ತಿ ಸಿಗುತ್ತದೆ.

ತಮ್ಮ ಆರಂಭಿಕ ದಿನಗಳಲ್ಲಿ ಜೋರಾಗಿ ಅಳುತ್ತಿದ್ದ ಮಗು ಬೆರಳು ಚೀಪುತ್ತಾ ಹಾಗೇ ನಿದ್ರೆ ಮಾಡಿರುವುದನ್ನು ನಾವು ನೀವು ಸಾಕಷ್ಟು ಬಾರಿ ಗಮನಿಸಿರುತ್ತೇವೆ. ಇದು ಮಗುವಿನ ಮಾನಸಿಕ ತೊಳಲಾಟವನ್ನು ಕಡಿಮೆ ಮಾಡಲು ಉಪಯೋಗವಾಗುವ ಒಂದು ತಂತ್ರ ಎಂಬುದು ನಮ್ಮ ಕಣ್ಣೆದುರಿಗೆ ಕಾಣುತ್ತದೆ.ಮಕ್ಕಳು ಬೆರಳು ಚೀಪುವ ಅಭ್ಯಾಸ ವನ್ನು ಕೈಬಿಡುವುದಿಲ್ಲ-ಅಮೆರಿಕದ ಪ್ರತಿಷ್ಠಿತ ದಂತ ವೈದ್ಯರಾದ ಡಾಕ್ಟರ್ ಮೇರಿ ಹೇಳುವ ಪ್ರಕಾರ ಹುಟ್ಟಿದ ಮಗು ಎರಡು ಮತ್ತು ನಾಲ್ಕು ವರ್ಷಗಳ ವಯಸ್ಸಿನ ಅಂತರದಲ್ಲಿದ್ದಾಗ ದೊಡ್ಡವರ ನಡೆ ನುಡಿಗಳನ್ನು, ಬೇರೆ ಮಕ್ಕಳ ಹಾವಭಾವಗಳನ್ನು, ಸಣ್ಣ ಪುಟ್ಟ ಚಟುವಟಿಕೆಗಳನ್ನು ರೂಢಿ ಮಾಡಿಕೊಳ್ಳಲು ಮತ್ತು ಕಲಿಯಲು ಪ್ರಾರಂಭ ಮಾಡುತ್ತದೆ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

ಈ ಸಮಯದಲ್ಲಿ ಬೆರಳು ಚೀಪುವ ಅಭ್ಯಾಸವನ್ನು ಮಕ್ಕಳಿಂದ ನೋಡಿ ಕಲಿಯುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಕೆಲವು ಮಕ್ಕಳು ಈ ಸಮಯದಲ್ಲಿ ಪೋಷಕರು ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಹೋದಂತಹ ಸಂದರ್ಭದಲ್ಲಿ ತಮ್ಮ ಹಟ ಮಾಡುತ್ತಾರೆ. ಆದರೆ ಪಾಪ ಮಕ್ಕಳಿಗೇನು ಗೊತ್ತು, ಬೆರಳು ಚೀಪುವ ಅಭ್ಯಾಸ ತಮ್ಮ ಬಾಯಿಯ ಆರೋಗ್ಯಕ್ಕೆ ಕೆಟ್ಟದ್ದು ಎಂದು !

ಮುಖ್ಯವಾಗಿ ಮಗುವಿನ ಬಾಯಿಯಲ್ಲಿ ಹಲ್ಲುಗಳು ಮೂಡಿ ಬರುವ ಸಮಯದಲ್ಲಿ ಮಗು ತನ್ನ ಹೆಬ್ಬೆರಳನ್ನು ಚೀಪಲು ಪ್ರಾರಂಭ ಮಾಡಿದರೆ ಹಲ್ಲುಗಳು ವಕ್ರವಾಗಿ ಬೆಳವಣಿಗೆ ಹೊಂದುತ್ತವೆ ಎಂದು ಹೇಳುತ್ತಾರೆ. ದಿನ ಕಳೆದಂತೆ ಇದು ಉಬ್ಬು ಹಲ್ಲಿಗೆ ಕಾರಣವಾಗಬಹುದು.ಆದರೆ ಒಮ್ಮೆ ಶಾಶ್ವತವಾಗಿ ಮಗುವಿನ ಬಾಯಿಯಲ್ಲಿ ಹಲ್ಲುಗಳು ಮೂಡಿ ಬಂದರೆ ನಂತರ ಬೆರಳು ಚೀಪುವ ಅಭ್ಯಾಸದಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಇದು ಆ ದಿನಗಳಲ್ಲೇ ಕೊನೆಗೊಂಡರೆ ಒಳ್ಳೆಯದು. ಮಗು ಬೆಳೆದು ದೊಡ್ಡದಾಗಿದ್ದರೂ ಶಾಲೆಗೆ ಅಥವಾ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಇದೇ ಅಭ್ಯಾಸ ರೂಢಿಯಾದರೆ ಇದು ಮಗುವಿನ ಸ್ವಾಭಿಮಾನಕ್ಕೆ ಧಕ್ಕೆ ತರುವುದು ಗ್ಯಾರಂಟಿ. ಮಗು ಬೆರಳು ಚೀಪುವುದನ್ನು ಈ ರೀತಿ ನಿಯಂತ್ರಣ ಮಾಡಿ : –

1 ಮೊದಮೊದಲಿಗೆ ನಿಮ್ಮ ಮಗು ತನ್ನ ಹೆಬ್ಬೆರಳು ಚೀಪುವುದನ್ನು ಕೇವಲ ಅದು ಹಾಸಿಗೆ ಮೇಲೆ ಮಲಗಿದ್ದಾಗ ಮಾತ್ರ ಎಂಬಂತೆ ನಿಯಂತ್ರಿಸಿ. ಮನೆಯಲ್ಲಿ ಅಲ್ಲಿ – ಇಲ್ಲಿ ಓಡಾಡುವಾಗ, ಹೊರಗಡೆ ಕರೆದುಕೊಂಡು ಹೋದಾಗ, ಮಗುವನ್ನು ನೀವು ಕಂಕುಳಲ್ಲಿ ಎತ್ತಿಕೊಂಡಿದ್ದಾಗ ಮಗು ಬೆರಳು ಚೀಪುವುದನ್ನು ಸಾಧ್ಯ ಆದಷ್ಟು ನಿಯಂತ್ರಣ ಮಾಡಿ.

2 ನಿಮ್ಮ ಮಗು ಬೆರಳು ಚೀಪುತ್ತಾ ಇದ್ದಾಗ ಅದನ್ನು ಪ್ರೋತ್ಸಾಹಿಸಿ. ಬದಲಿಗೆ ಮಗು ಬೆರಳು ಚೀಪುವಾಗ ಮಗುವಿಗೆ ಬೈಯ್ಯಲು ಅಥವಾ ಹೊಡೆಯಲು ಹೋಗಬೇಡಿ. ಇದರಿಂದ ಮಗು ಇನ್ನಷ್ಟು ಹಠಮಾರಿ ಆಗುತ್ತದೆ ಮತ್ತು ನಿಮ್ಮ ಮಾತನ್ನು ಕೇಳದೆ ಬೇಕೆಂದೇ ತನ್ನ ಹೆಬ್ಬೆರಳನ್ನು ಬಾಯಿಗೆ ಹಾಕಿಕೊಳ್ಳುವ ರೂಡಿಯನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. Thumb & Finger Sucking kannada

3 ನಿಮ್ಮ ಮಗು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಬೆಳೆಸಿಕೊಂಡಿದ್ದರೆ, ಮಗುವಿಗೆ ಬೆರಳು ಚೀಪುವುದನ್ನು ಬಿಡುವ ಸಮಯವನ್ನು ನಿಮ್ಮ ಮಗುವೇ ನಿಮಗೆ ತಿಳಿಸುವಂತೆ ಪ್ರೇರೇಪಿಸಿ. ಜೊತೆಗೆ ನೀನು ಬೆರಳು ಚೀಪುವುದನ್ನು ಬಿಡಲು ಸಹಾಯ ಮಾಡಲು ನಾನಿದ್ದೇನೆ ಎಂಬ ಆಶ್ವಾಸನೆ ಕೊಡಿ ಮತ್ತು ಬೆರಳು ಚೀಪುವುದರಿಂದ ಆಗುವ ಕೆಲವು ಆರೋಗ್ಯದ ಅನಾನುಕೂಲಗಳನ್ನು ಮಗುವಿಗೆ ತಿಳಿಸಿ ಹೇಳಿ.ಇದರಿಂದ ನಿಮ್ಮ ಮಗು ತಾನಾಗಿಯೇ ನಿಮ್ಮ ಬಳಿ ಬಂದು ಕೆಲವೇ ದಿನಗಳಲ್ಲಿ ಇಂದಿನಿಂದ ನಾನು ನನ್ನ ಹೆಬ್ಬೆರಳನ್ನು ಚೀಪುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹೇಳುತ್ತದೆ. ಇದರಿಂದ ನಿಮ್ಮ ಮಗುವಿನ ಸಹಾಯಕ್ಕೆ ನೀವು ನಿಂತುಕೊಳ್ಳಲು ಸುಲಭವಾಗುತ್ತದೆ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

4 ನಿಮ್ಮ ಮಗುವಿಗೆ ಬೆರಳು ಚೀಪುವುದನ್ನು ಬಿಡುವಂತೆ ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಬೇಡಿ. ಕೆಲವರು ಮಗುವಿನ ಬೆರಳಿಗೆ ಗಾಜಿನ ಬಳೆಯಿಂದ ಸುಟ್ಟು ಬಿಡುತ್ತಾರೆ.ಇದರಿಂದ ಸೂಕ್ಷ್ಮ ಆರೋಗ್ಯದ ನಿಮ್ಮ ಮಗುವಿಗೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಂದಿಗೂ ಇಂತಹ ತಪ್ಪನ್ನು ಮಾಡಬೇಡಿ. ಆರಾಮದಾಯಕವಾಗಿ ನಿಮ್ಮ ಮಗು ತನಗೆ ಬೇಡ ಎನಿಸಿದಾಗ ಬೆರಳು ಚೀಪುವುದನ್ನು ತಾನಾಗಿಯೇ ನಿಲ್ಲಿಸುತ್ತದೆ. ಇದರ ಬಗ್ಗೆ ಯಾವುದೇ ಭಯ ಬೇಡ.

5 ನಿಮ್ಮ ಮಗುವಿನ ಜೊತೆ ಸೌಹಾರ್ದವಾಗಿ ವರ್ತಿಸುವುದರ ಜೊತೆಗೆ ಮಗು ಬೆರಳು ಚೀಪುವುದನ್ನು ಬಿಡುವ ಸಮಯದಲ್ಲಿ ಲಾಲಿಪಪ್ ಅಥವಾ ಬೇರೆ ಯಾವುದಾದರೂ ನಿಮ್ಮ ಮಗುವಿಗೆ ಇಷ್ಟ ಆಗುವ ತಿಂಡಿ ಪದಾರ್ಥಗಳನ್ನು ತಿನ್ನಿಸಿ. ಇದರಿಂದ ಬೆರಳು ಚೀಪಬೇಕು ಎನ್ನುವ ನಿಮ್ಮ ಮಗುವಿನ ಬಯಕೆ ತಿಂಡಿ – ತಿನಿಸುಗಳ ಕಡೆ ಹರಿಯುತ್ತದೆ. ಆದರೆ ನೀವು ಸದಾ ಆರೋಗ್ಯಕರವಾದ ತಿಂಡಿಗಳನ್ನು ಮಾತ್ರ ನಿಮ್ಮ ಮಗುವಿಗೆ ನೀಡಬೇಕು.

6 ನಿಮ್ಮ ಮಗು ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಮಗುವಿನ ಬೆರಳಿಗೆ ಖಾರವಾದ ಅಥವಾ ಕಹಿಯಾದ ಯಾವುದಾದರೂ ಅಹಿತಕರವಾದ ಆಹಾರ ಪದಾರ್ಥವನ್ನು ಪೇಸ್ಟ್ ಮಾಡಿ ಹಚ್ಚುವ ಕೆಲಸ ಮಾಡಬೇಡಿ. ಇದರಿಂದ ಮಗುವಿನ ಮಾನಸಿಕ ಆರೋಗ್ಯ ಕೂಡ ಹದಗೆಡುವ ಸಾಧ್ಯತೆ ಇರುತ್ತದೆ ಮತ್ತು ಇದಕ್ಕಿಂತ ಪೋಷಕರಾಗಿ ನೀವು ಮಾಡುವ ಕೆಟ್ಟ ಕೆಲಸ ಮತ್ತೊಂದಿಲ್ಲ ಎಂದು ಹೇಳಬಹುದು.

7, ಕೆಲವೊಂದು ಕ್ರಿಯಾತ್ಮಕ ಚಟುವಟಿಕೆಗಳನ್ನು ನಿಮ್ಮ ಮಗುವಿಗೆ ಹೇಳಿ ಕೊಡುವ ಮೂಲಕ ನಿಮ್ಮ ಮಗುವಿನ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಬಹುದು. ಉದಾಹರಣೆಗೆ ನಿಮ್ಮ ಮಗು ಬೆರಳು ಚೀಪುವ ಸಂದರ್ಭ ಬಂದಾಗ ಮಗುವಿನ ಮನಸ್ಸನ್ನು ಬೇರೆಯದೇ ಚಟುವಟಿಕೆಗಳ ಕಡೆಗೆ ಹರಿಸಲು ಪ್ರಯತ್ನ ಪಡಿ.
ನಿಮ್ಮ ಮಕ್ಕಳಿಗೆ ಇಷ್ಟ ಆಗುವ ಕೆಲವೊಂದು ಮಕ್ಕಳ ಸಿನಿಮಾ ನಟ – ನಟಿಯರನ್ನು ತೋರಿಸಿ ಅವರು ನಿನ್ನ ಹಾಗೆ ಬೆರಳು ಚೀಪುವುದಿಲ್ಲ ಅಲ್ಲವೇ ಎಂದು ಅವರ ಬಗ್ಗೆ ತಿಳಿಸಿ ಹೇಳಿ. ಇದರಿಂದ ನಿಮ್ಮ ಮಗು ಮಾನಸಿಕವಾಗಿ ಪ್ರೇರಣೆಗೆ ಒಳಗಾಗಿ ಬೆರಳು ಚೀಪುವ ಅಭ್ಯಾಸವನ್ನು ತಕ್ಷಣವೇ ಬಿಡುವ ಸಾಧ್ಯತೆ ಇರುತ್ತದೆ.

8,ಮಗುವಿಗೆ ಬೆರಳು ಚೀಪುವ ಪ್ರಯತ್ನವನ್ನು ಕೈ ಬಿಡಿಸುವ ಸಂದರ್ಭದಲ್ಲಿ ಮಗುವಿನ ಕೈಗೆ ಗ್ಲೌಸ್ ಹಾಕಲು ಮುಂದಾಗಬೇಡಿ. ಇದು ನಿಮ್ಮ ಮಗುವನ್ನು ಕಿರಿಕಿರಿಗೆ ಒಳಗಾಗುವಂತೆ ಮಾಡುತ್ತದೆ ಮತ್ತು ನಿಮ್ಮ ಮಗು ಆದಷ್ಟು ಬೇಗನೆ ಹಾಕಿಕೊಂಡಿರುವ ಗ್ಲೌಸ್ ತೆಗೆದು ಬಿಸಾಕುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಏಕೆಂದರೆ ಇದರಿಂದ ನಿಮ್ಮ ಮಗುವಿಗೆ ಬೆರಳು ಚೀಪುವ ಭಾವನೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

9, ನಿಮ್ಮ ಮಗು ಬೆರಳು ಚೀಪುವ ಅಭ್ಯಾಸವನ್ನು ತಾನಾಗಿಯೇ ಬಿಡುವವರೆಗೂ ನೀವು ಯಾವುದೇ ಒತ್ತಡವನ್ನು ಮಗುವಿನ ಮೇಲೆ ಹೇರಲು ಪ್ರಯತ್ನಿಸಬೇಡಿ. ದಿನ ಕಳೆದಂತೆ ಮಗು ಬೆಳೆಯುತ್ತಾ ದೊಡ್ಡದಾಗುತ್ತಿದ್ದಂತೆ ಇತರ ಮಕ್ಕಳ ಜೊತೆ ಆಡುತ್ತಾ, ನಲಿಯುತ್ತಾ ಹೆಚ್ಚು ಹೆಚ್ಚು ಚಟುವಟಿಕೆಗಳಲ್ಲಿ ಭಾಗವಹಿಸಿ ಬೇರೆ ಮಕ್ಕಳನ್ನು ನೋಡಿ ಕಲಿತು ತನ್ನ ಅಭ್ಯಾಸವನ್ನು ಕೈ ಬಿಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago