ಭೂ ಚಕ್ರ ಗೆಡ್ಡೆ!

ಮುಳ್ಳುಗಳ ಪೊದೆಗಳ ನಡುವೆ ಇರುವ ಈ ಗಿಡದ ಹೆಸರು ಭೂ ಚಕ್ರದ ಗೆಡ್ಡೆಯ ಗಿಡ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ ಮಧುರವ ಕನ್ನಡದಲ್ಲಿ ಭೂ ಚಕ್ರ ಎಂದು ಕರೆಯುತ್ತಾರೆ ಈ ಗಿಡದ ಮೂಲ ಭಾರತ ಆಗಿದ್ದು ಇದು ಭಾರತ ಪಾಕಿಸ್ತಾನ ಸೌದಿ ಅರೇಬಿಯಾ ಆಫ್ರಿಕಾ ರಾಷ್ಟ್ರಗಳಲ್ಲಿ ಇದು ಕಂಡು ಬರುತ್ತದೆ ಇದು ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳು ಬಾಬಾಬುಡನ್ ಗಿರಿ ಮುಂತಾದ ಪ್ರದೇಶಗಳಲ್ಲಿ ಇದು ಕಂಡು ಬರುತ್ತದೆ ಈ ಗಿಡವು ಸುಮಾರು 20 ಅಡಿಗಳಷ್ಟು ಬೆಳೆಯಬಲ್ಲದಾಗಿತ್ತು ಬಿಳಿ ಬಣ್ಣದ ಮೃದುವಾದ ಕಾಂಡ ಇರುತ್ತದೆ.

ಮೂಲಕಾಂಡದ ಮೇಲೆ ಸುಲಿದ ಸುರಳಿ ಅಂತಹ ಮಾರ್ಪಾಡುಗಳಿದ್ದು ನೀಲವಾದ ಅಂಡಾಕಾರದ ಎಂಟು ಸೆಂಟಿಮೀಟರ್ ಉದ್ದ ಮತ್ತು ನಾಲ್ಕು ಸೆಂಟಿಮೀಟರ್ ಅಗಲವಾದ ಎಲೆಗಳು ಹೊಂದಿರುತ್ತದೆ ಹೆಚ್ಚು ದಳಗಳಿರದ ಕೇವಲ ಕಡ್ಡಿಗಳಿಂದ ಕೂಡಿದ ಸುಂದರವಾದ ಹೂವಿನ ಗೊಂಚಲುಗಳನ್ನು ಹೊಂದಿರುತ್ತದೆ ಮತ್ತು ಚಕ್ಕುಲಿಯಂತೆ ಕಾಣುವ ಹಸಿರು ಕಾಯಿಗಳು ಇದರಲ್ಲಿ ಇರುತ್ತದೆ ಈ ಕಾಯಿಗಳು ಅರ್ಧ ವೃತ್ತಾಕಾರ ವೃತ್ತಾಕಾರದ ವಿವಿಧ ಬಗೆಗಳಲ್ಲಿ ಇರುತ್ತದೆ ಜನವರಿಯಿಂದ ಜೂನ್ ತಿಂಗಳ ಒಳಗೆ ಈ ಗಿಡಗಳು ಹೂವಿಂದ ಕಾಯಿ ಆಗುತ್ತದೆ.

ಭೂ ಚಕ್ರ ಗೆಡ್ಡೆ ಗಿಡದ ಬೇರುಗಳನ್ನು ಕೆಲಸ ಸಮುದಾಯಗಳು ಬೇಸಿಗೆ ಸಮಯದಲ್ಲಿ ಶೇಖರಿಸಿ ಇಡುತ್ತಾರೆ ಇದರ ಬೇರು ಬಹಳ ದಪ್ಪವಾಗಿದ್ದು ಗೆಣಸಿನ ರೀತಿಯಲ್ಲಿ ಇರುತ್ತದೆ ಇದು ರುಚಿಕರವಾಗಿದ್ದು ಬಾಯಾರಿಕೆಯನ್ನು ನಿವಾರಣೆ ಮಾಡುತ್ತದೆ ಈ ಬೇರೆ ಒಟ್ಟಿಗೆ ಸಂಬಂಧಿಸಿದ ಚಿಕಿತ್ಸೆ ಮತ್ತು ಹಾವು ಮತ್ತು ಚೇಳುಗಳು ಕಚ್ಚಿದಾಗ ಚಿಕಿತ್ಸೆಗೆ ಇದನ್ನು ಬಳಸುತ್ತಾರೆ ಎನ್ನಲಾಗುತ್ತದೆ ಆದರೆ ಈ ಗಿಡದ ಹಣ್ಣುಗಳನ್ನು ತಿನ್ನಲು ಆಗುವುದಿಲ್ಲ ಈ ಸಸ್ಯದ ಯಾವುದೇ ಅಡ್ಡ ಪರಿಣಾಮದ ವರದಿಗಳು ಇದುವರೆಗೂ ಕಂಡು ಬಂದಿಲ್ಲ

Leave A Reply

Your email address will not be published.