ಅಮಾವಾಸ್ಯೆ ಪೂಜೆ ಈ ರೀತಿ ಮಾಡಿ/ಅಮಾವಾಸ್ಯೆ ಪೂಜಾ ವಿಧಾನ!

ಅಮಾವಾಸ್ಯೆ ಹಿಂದಿನ ದಿನ ದೇವರ ಮನೆಯನ್ನು ಪೂರ್ತಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ನಂತರ ಅಮಾವಾಸ್ಯೆ ದಿನ ದೇವರಿಗೆ ಹೂವನ್ನು ಮೂಡಿಸಿ ಹಾಗು ನಿಂಬೆ ಹಣ್ಣನ್ನು ಸಹ ಇಟ್ಟು ಪೂಜೆಯನ್ನು ಮಾಡಬೇಕು. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಿದರೇ ತುಂಬಾ ಬೇಗಾ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಭಾವನೆ ಇದೆ. ಹಾಗಾಗಿ ಲಕ್ಷ್ಮಿ ಪೂಜೆ ಮಾಡಿಕೊಳ್ಳುವುದು ತುಂಬಾ ಮುಖ್ಯ.ಇನ್ನು ನೈವೇದ್ಯಕ್ಕೆ ಬಾಳೆಹಣ್ಣು ವೀಳ್ಯದೆಲೆ ಆಡಿಕೆ ದಕ್ಷಿಣೆ ಅರಿಶಿಣದ ಕೊಂಬು ಇಡಬೇಕು. ನಂತರ ದೂಪವನ್ನು ದೀಪವನ್ನು ಬೆಳಗಿ.

ನಂತರ ನೈವೇದ್ಯ ಮಾಡಬೇಕು ಮತ್ತು ಸಂಕಲ್ಪ ಮಾಡಿಕೊಂಡು ಕಾಯಿಯನ್ನು ಒಡೆಯಬೇಕು.ಈ ತಿಂಗಳು ಯಾವುದೇ ರೀತಿಯ ಸಂಕಷ್ಟಗಳು ಬರದೇ ಇರಲಿ ಎಂದು ಲಕ್ಷ್ಮಿ ಹತ್ತಿರ ಕೇಳಿಕೊಂಡು ಕಾಯಿಯನ್ನು ಒಡೆದುಕೊಂಡು ಬಂದು ತೀರ್ಥವನ್ನು ಪ್ರೊಕ್ಷಣೆ ಮಾಡಿ.ನಂತರ ತುಪ್ಪದ ದೀಪ ಹಚ್ಚಿ ಆರತಿಯನ್ನು ಬೆಳಗಬೇಕು.

ಇನ್ನು ಅಮಾವಾಸ್ಯೆ ಪೂಜೆಯನ್ನು ಆದಷ್ಟು ಬೇಗಾ ಬೆಳಗ್ಗೆ ಸಮಯದಲ್ಲಿ ಮಾಡುವುದಕ್ಕೆ ಪ್ರಯತ್ನ ಪಡಬೇಕು.ಸಂಜೆ ಮಾಡುವುದು ಆದಷ್ಟು ಅಷ್ಟು ಸೂಕ್ತವಲ್ಲ. ಕರ್ಪೂರ ಹಚ್ಚಿಕೊಂಡು ಮಹಾಮಂಗಳಾರತಿ ಮಾಡಬೇಕು. ನಂತರ ನಿಂಬೆ ಹಣ್ಣು ತೆಗೆದುಕೊಂಡು ಮನೆಯನ್ನು ಪ್ರೊಕ್ಷಣೆ ಮಾಡಿ ದೃಷ್ಟಿ ನೀವಾಳಿಸಿ ಕಟ್ ಮಾಡಿ ಒಂದು ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ ಅರಿಶಿಣ ಇರುವುದನ್ನು ಬಲ ಭಾಗದಲ್ಲಿ ಮತ್ತು ಕುಂಕುಮ ಇರುವುದನ್ನು ಎಡ ಭಾಗದಲ್ಲಿ ಇಡಬೇಕು. ಕೊನೆಯಲ್ಲಿ ಸಾಂಬ್ರಾಣಿ ದೂಪವನ್ನು ಹಾಕಬೇಕು.

Leave a Comment