ಈ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ ಅಥವಾ ಚೆನ್ನಾಗಿ ಜಗಿದು ತಿನ್ನಿ. ಇದರಿಂದ ಹಲವಾರು ಪ್ರಯೋಜನ ಸಿಗುತ್ತದೆ. ಇದರಿಂದ ನಿಮ್ಮ ರೋಗ ಎಲ್ಲಾ ನಿವಾರಣೆ ಆಗಿ 100 ವರ್ಷ ಚೆನ್ನಾಗಿ ಇರುತ್ತೀರಾ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.
ಅಸ್ತಮಾ, ದುರ್ಬಲತೆ, ಮಲಬದ್ಧತೆ, ಮೂತ್ರಪಿಂಡ, ಅತಿಸಾರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳಿಗೆ ಮರದ ಎಲೆಗಳು ಪರಿಣಾಮಕಾರಿ ಔಷಧಿಯಾಗಿದೆ. ಇಷ್ಟೇ ಅಲ್ಲದೆ ಕಾಮಾಲೆ, ರಾತ್ರಿ ಕುರುಡುತನ, ಕೆಮ್ಮು, ಮಲೇರಿಯಾ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅರಳಿ ಮರದ ರೆಂಬೆ ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಅರಳಿ ಮರ (ಅಶ್ವತ್ಥಮರ)ದಿಂದ ಸಿಗುವ ಐದು ಪ್ರಮುಖ ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.
ಅಸ್ತಮಾ ಸೇರಿದಂತೆ ಇತರ ಉಸಿರಾಟದ ಸಮಸ್ಯೆಗಳಿಗೆ ರಾಮಬಾಣ: ನೀವು ಅಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅರಳಿ ಮರಗಳ ಸಹಾಯದಿಂದ ಮನೆಮದ್ದುಗಳನ್ನು ಸಿದ್ಧಪಡಿಸಿಕೊಳ್ಳಬಹುದು.ನೀವು ಮಾಡಬೇಕಾಗಿರುವುದು ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ಅದರ ನಂತರ ಆ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು.
ಇಷ್ಟೇ ಅಲ್ಲದೆ, ನೀವು ಅದರ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ, ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದರ ಮೃದುವಾದ ಎಲೆಗಳನ್ನು ನಿಯಮಿತವಾಗಿ ಅಗಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಯೌವ್ವನವನ್ನು ಕಾಪಾಡಿಕೊಳ್ಳಬಹುದು.
ತುರಿಕೆ ಮತ್ತು ಚರ್ಮದ ಸಮಸ್ಯೆಗೆ ಪರಿಹಾರ: ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
ತುರಿಕೆ ಮತ್ತು ಚರ್ಮದ ಸಮಸ್ಯೆಗೆ ಪರಿಹಾರ: ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಹಲ್ಲು ಮತ್ತು ಒಸಡುಗಳು ಬಲಗೊಳಿಸುತ್ತವೆ: ಅರಳಿ ಮರದಿಂದ ಮಾಡಿದ ಬ್ರಶ್ (ಕಡ್ಡಿ) ಹಲ್ಲುಗಳನ್ನು ಬಲಪಡಿಸುತ್ತವೆ. ಈ ಕಡ್ಡಿಗಳಿಂದ ಪ್ರತಿದಿನ ಹಲ್ಲುಗಳನ್ನು ಸ್ವಚ್ಚಗೊಳಿಸುವ ಮೂಲಕ ಹಲ್ಲುನೋವು ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಇದರಿಂದ ಒಸಡುಗಳು ಬಲಗೊಳ್ಳುತ್ತದೆ.
ಗ್ಯಾಸ್ ಅಥವಾ ಮಲಬದ್ಧತೆ ಸಮಸ್ಯೆಗೆ ಪರಿಹಾರ: ಇತ್ತೀಚಿನ ದಿನಗಳಲ್ಲಿ, ಜಂಕ್ ಫುಡ್ ಮತ್ತು ಬೀದಿ ಬದಿಯ ಆಹಾರಗಳ ಸೇವನೆಯಿಂದ ಹೆಚ್ಚಿನ ಜನರು ಮಲಬದ್ಧತೆ ಅಥವಾ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.