ಚೆರ್ರಿ ಹಣ್ಣು ಸೇವನೆಯಿಂದ ನಿಮ್ಮ ಶರೀರದಲ್ಲಿ ಆಗುವ ಅದ್ಬುತ ಬದಲಾವಣೆಗಳು!

ಸುಂದರವಾದ ಚೆರ್ರಿ ಟೊಮೇಟೊ ಹಣ್ಣುಗಳು ತಮ್ಮ ದುಂಡನೆಯ ಗೋಲಿ ಆಕಾರದಿಂದ ಮಾತ್ರ ನೋಡುಗರ ಕಣ್ಣು ಕುಕ್ಕುವುದು ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳಲ್ಲಿ ಸಹ ಜನರಿಗೆ ಸಹಕಾರಿಯಾಗಿವೆ.ಚೆರ್ರಿ ಟೊಮೇಟೊ ಹಣ್ಣುಗಳು – ನೋಡಲು ಕೆಂಪು ಗೋಲಿಗಳ ಆಕಾರ ಮತ್ತು ಗಾತ್ರದಲ್ಲಿ ಟೊಮ್ಯಾಟೋ ಬಳ್ಳಿಯಲ್ಲಿ ಗುಂಪು ಗುಂಪಾಗಿ ಓಲಾಡುತ್ತಿರುತ್ತವೆ. ನಾವು ಬಳಸುವ ಸಾಧಾರಣ ಟಮೋಟೋ ಹಣ್ಣುಗಳಿಗಿಂತ ಹೆಚ್ಚು ಗಾಢವಾದ ಕೆಂಪು ಬಣ್ಣವನ್ನು ಹೊಂದಿದ್ದು, ತಿನ್ನಲು ಬಾಯಿಗೆ ಸಾಕಷ್ಟು ರುಚಿ ಕೊಡುತ್ತವೆ.

ಕೆಲವರು ಸಿಹಿಯಾದ ಸಲಾಡ್ ತಯಾರಿಕೆಯಲ್ಲಿ ಚೆರ್ರಿ ಟೊಮೇಟೊ ಹಣ್ಣುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಏಕೆಂದರೆ ಇವುಗಳಲ್ಲಿ ಸಿಹಿ ಮತ್ತು ಹುಳಿ ಎರಡರ ಮಿಶ್ರಣವಿರುತ್ತದೆ. ಇದರ ಜೊತೆಗೆ ಅಷ್ಟೇ ಆರೋಗ್ಯಕರ ಎಂಬ ಹೆಸರು ಕೂಡ ಚೆರ್ರಿ ಟೊಮೇಟೊ ಹಣ್ಣುಗಳು ಪಡೆದಿವೆ.

ಮೊದಲು ದಕ್ಷಿಣ ಅಮೇರಿಕಾ ದೇಶದ ಪ್ರಾಂತ್ಯದಲ್ಲಿ ಕಂಡು ಬಂದ ಚೆರ್ರಿ ಟೊಮೇಟೊಹಣ್ಣುಗಳು ಈಗ ಎಲ್ಲಾ ಕಡೆ ತಮ್ಮ ಬೆಳವಣಿಗೆ ಕಾಣುತ್ತಿವೆ. ಕೆಲವು ರೈತರು ನಮ್ಮ ದೇಶದಲ್ಲಿ ಕೂಡ ಅವರ ತೋಟಗಳಲ್ಲಿ ಚೆರ್ರಿ ಟೊಮ್ಯಾಟೋ ಹಣ್ಣುಗಳ ಬಳ್ಳಿಗಳನ್ನು ಹಬ್ಬಿಸಿರುತ್ತಾರೆ.

ಇದರಲ್ಲಿ ಇರುವ ಮೇಲಾಟಿನ್ ಎಂಬ ಅಂಶ ನಿಮ್ಮ ನಿದ್ರೆಗೆ ಸಹಾಯ ಮಾಡುತ್ತದೆ.ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದೇ. ಈ ಹಣ್ಣು ನಿಮ್ಮ ಛಾಯಾಪಛಾಯಾ ಕ್ರಿಯೆಯನ್ನು ಬಲಪಡಿಸುವ ವಿಟಮಿನ್ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ನಿಮ್ಮ ದೇಹದಲ್ಲಿ ಇರುವ ವಿಷದ ಅಂಶವನ್ನು ಸಹ ಇದು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಚರ್ಮದ ಹಲವಾರು ಸಮಸ್ಸೇ ಗೆ ಇದು ಸಹಾಯ ಮಾಡುತ್ತದೆ

Leave a Comment